Advertisement

ಶಾಂತಿಸಾಗರ ಅಭಿವೃದ್ಧಿಗೆ ಬದ್ಧ: ಸಿದ್ದೇಶ್ವರ್‌

09:08 PM Nov 11, 2020 | Suhan S |

ಚನ್ನಗಿರಿ: ಶಾಂತಿಸಾಗರದಲ್ಲಿ (ಸೂಳೆಕೆರೆ) ಪ್ರತಿ ವರ್ಷ 1 ಟಿಎಂಸಿ ನೀರಿನ ಮಟ್ಟವನ್ನು ಕಾಯ್ದಿರಿಸಲು ಚಿಂತನೆ ನಡೆದೆಇದ್ದು, ಯೋಜನೆಯ ಮಂಜೂರಾತಿಗಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದುಸಂಸದ ಜಿ.ಎಂ. ಸಿದ್ದೇಶ್ವರ್‌ ಹೇಳಿದರು.

Advertisement

ಮಂಗಳವಾರ ತಾಲೂಕಿನ ಸೂಳೆಕೆರೆಯಲ್ಲಿ ವಿವಿಧ ಯೋಜನೆಗಳ ಉದ್ಘಾಟನೆ ಹಾಗೂ ಕೆರೆಗೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು.ಏಷ್ಯಾದಲ್ಲೇ ಎರಡನೇ ಅತಿ ದೊಡ್ಡ ಕೆರೆ ಎಂದು ಪ್ರಸಿದ್ಧಿ ಪಡೆದಿರುವ ಕೆರೆಗೆ ಎರಡನೇ ಬಾರಿ ಬಾಗಿನ ಅರ್ಪಿಸಿದ ಖುಷಿ ನನಗಿದೆ. ಈ ಹಿಂದೆ 2009ರಲ್ಲಿ ಕೆರೆಯ ನೀರನ್ನು ಭೀಮಸಮುದ್ರಕ್ಕೆ ಒಯ್ದು ತಮ್ಮ ತೋಟಗಳಿಗೆ ನೀರನ್ನು ಬಳಕೆ ಮಾಡಿಕೊಂಡು ಕೆರೆನೀರನ್ನು ಖಾಲಿ ಮಾಡಿದ್ದಾರೆ ಎಂದು ಕೆಲವರು ಆರೋಪ ಸೃಷ್ಟಿಸಿದ್ದರು. ಸೂಳೆಕೆರೆ ಅಭಿವೃದ್ಧಿಗೆ ಬದ್ಧರಾಗಿದ್ದೇವೆಯೇ ಹೊರತು ಯಾವತ್ತೂ ಕೆರೆ ನೀರನ್ನು ದುರ್ಬಳಕೆ ಮಾಡಿಕೊಂಡಿಲ್ಲ.ಸೂಳೆಕೆರೆಯಲ್ಲಿ ಶಾಶ್ವತ ನೀರಿನ ಸಂಗ್ರಹ ಮಾಡಿ ಭದ್ರಾ ಡ್ಯಾಂನಿಂದ 1 ಟಿಎಂಸಿ ನೀರನ್ನು ಬಿಡಲು ಯೋಜನೆ ರೂಪಿಸಿದ್ದು, ಶೀಘ್ರದಲ್ಲಿ ಅನುಷ್ಠಾನಕ್ಕೆ ತರಲಾಗುವುದು, ಯಾರೇ ನನ್ನ ಮೇಲೆ ಆರೋಪ ಮಾಡಿದರೂ ನನ್ನ ವ್ಯಕ್ತಿತ್ವ ಏನೆಂಬುದು ಜಿಲ್ಲೆಯ ಜನತೆಗೆ ಗೊತ್ತಿದೆ ಎಂದರು.

ದಾವಣಗೆರೆ ಜಿಲ್ಲೆಯ ಅಭಿವೃದ್ಧಿಗೆ ಶಕ್ತಿ ನೀಡಲು ಎಲ್ಲ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಶಾಸಕರನ್ನು ಆಯ್ಕೆ ಮಾಡಲು ಜನ ಕಂಕಣ ತೊಡಬೇಕು. ರಾಜ್ಯದಲ್ಲಿ ಮಾದರಿ ಜಿಲ್ಲೆ ಆಗುವ ಎಲ್ಲಾ ಲಕ್ಷಣಗಳು ದಾವಣಗೆರೆಗೆ ಇದೆ. ಅದ್ದರಿಂದಮುಂದೆಯೂ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.

ಕೋವಿಡ್‌-19 ವ್ಯಾಕ್ಸಿನ್‌ ಬರುವವರೆಗೂ ಜನತೆ ಜಾಗರೂಕರಾಗಿರಬೇಕು. ಎರಡನೇ ಹಂತದಕೋವಿಡ್‌ ಸೋಂಕು ಎಲ್ಲ ಕಡೆ ವ್ಯಾಪಿಸುತ್ತಿದೆ. ಕೆಲವರು ಮೂಗಿಗೆ ಹಾಕಬೇಕಾದ ಮಾಸ್ಕ್ ಅನ್ನುಗದ್ದಕ್ಕೆ ಹಾಕಿಕೊಂಡು ತಿರುಗಾಡುತ್ತಿದ್ದಾರೆ. ಇನ್ನು ಕೆಲವರು ಫ್ಯಾಶನ್‌ ಆಗಿ ಬಳಸುತ್ತಿದ್ದಾರೆ. ಕೊರೊನಾ ಬಗ್ಗೆ ಬೇಜವಾಬ್ದಾರಿ ಸರಿಯಲ್ಲ ಎಂದು ಹೇಳಿದರು. ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಮಾತನಾಡಿ,ಸೂಳೆಕೆರೆ ದೇವಸ್ಥಾನ ಸುತ್ತಮುತ್ತಲಿನ ಜಾಗದ ಒತ್ತುವರಿ ಆರೋಪ ಕೇಳಿ ಬರುತ್ತಿದೆ. ತಕ್ಷಣ ತಹಶೀಲ್ದಾರರರು ಜಾಗದ ಪರಿಶೀಲನೆ ಮಾಡಿ ಒತ್ತುವರಿ ತೆರವಿಗೆ ಮುಂದಾಗಬೇಕು. ಸರ್ಕಾರಿ ಜಾಗವನ್ನು ಸಂರಕ್ಷಣೆ ಮಾಡಬೇಕು ಎಂದು ಸೂಚಿಸಿದರು.

ಮಾಯಕೊಂಡ ಶಾಸಕ ಪ್ರೊ| ಲಿಂಗಣ್ಣ ಮಾತನಾಡಿದರು. ತಾಲೂಕು ಬಿಜೆಪಿ ಅಧ್ಯಕ್ಷ ಶ್ರೀನಿವಾಸ್‌, ಜಿಪಂ ಸದಸ್ಯೆ ಮಂಜುಳಾ ಟಿ.ವಿ., ಜಿಪಂ ಉಪಾಧ್ಯಕ್ಷೆ ಸಾಕಮ್ಮ, ಯಶೋದಮ್ಮ, ತಾಪಂ ಅಧ್ಯಕ್ಷೆ ಕವಿತಾ, ಉಪಾಧ್ಯಕ್ಷೆ ಚಂದ್ರಮ್ಮ, ಪುರಸಭೆ ಅಧ್ಯಕ್ಷೆ ಲಕ್ಷ್ಮೀದೇವಿ, ಎಪಿಎಂಸಿಅಧ್ಯಕ್ಷ ಜಗನ್ನಾಥ, ತುಮ್‌ಕೋಸ್‌ ಅಧ್ಯಕ್ಷ ಆರ್‌. ಎಂ. ರವಿ, ತಹಶೀಲ್ದಾರ್‌ ಪಟ್ಟರಾಜ ಗೌಡ ಇದ್ದರು.

Advertisement

 ಸಿಎಂ ಯಡಿಯೂರಪ್ಪ ಬದಲಾವಣೆ ಮಾತೇ ಇಲ್ಲ :  ಶಿರಾ ಮತ್ತು ಆರ್‌.ಆರ್‌. ನಗರ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಬಿ.ಎಸ್‌. ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮೂರು ವರ್ಷ ಮುಂದುವರೆಯಲಿದ್ದಾರೆ. ಯಾವುದೇ ಕಾರಣಕ್ಕೂ ಅವರನ್ನು ಸಿಎಂ ಕುರ್ಚಿಯಿಂದ ಇಳಿಸುವ ಮಾತೇ ಇಲ್ಲ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್‌ ಸ್ಪಷ್ಪಪಡಿಸಿದರು. ದೇಶದಲ್ಲಿ ಮೋದಿ, ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರಗಳು ಅವಧಿ ಪೂರ್ಣಗೊಳಿಸಲಿವೆ. ಅದನ್ನು ಯಾರು ಕೂಡ ತಪ್ಪಿಸಲು ಸಾಧ್ಯವಿಲ್ಲ.ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುವ ಕನಸು ಕಂಡಿದ್ಧಾರೆ. ಅದಕ್ಕಾಗಿ ಯಡಿಯೂರಪ್ಪ ಅವರನ್ನು ಕುರ್ಚಿಯಿಂದ ಇಳಿಸಲಾಗುತ್ತದೆ ಎಂದುಹೇಳಿಕೊಂಡು ತಿರುಗುತ್ತಿದ್ದಾರೆ. ಶಿರಾ, ಆರ್‌.ಆರ್‌. ನಗರ ಕ್ಷೇತ್ರಗಳ ಉಪಚುನಾವಣೆಯಲ್ಲಿ ಜನರು ವಿಪಕ್ಷಗಳಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next