ಶಿರ್ವ: ಐತಿಹಾಸಿಕ ಹಿನ್ನಲೆಯಿರುವ ಪುರಾತನ ಶಿರ್ವ ನಡಿಬೆಟ್ಟು ಮನೆ ಇಂದು ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಯಿತು. ಸುಮಾರು 70 ವರ್ಷಗಳ ನಂತರ ಪಾಪನಾಶಿನಿ ನದಿಗೆ ರವಿವಾರ ಬಾಗಿನ ಅರ್ಪಿಸಲಾಯಿತು.
ಉಡುಪಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಜಿಲ್ಲೆಯ ಎಲ್ಲಾ ನದಿಗಳು ಉಕ್ಕಿ ಹರಿಯುತ್ತಿದೆ. ಶಿರ್ವ ಸಮೀಪ ಹರಿಯುವ ಪಾಪನಾಶಿನಿ ನದಿಯೂ ತುಂಬಿದೆ.
ಪಾಪನಾಶಿನಿಯ ನೆರೆ ನೀರು ಶಿರ್ವ ನಡಿಬೆಟ್ಟು ಮನೆಯ ಚಾವಡಿಯ ಮೆಟ್ಟಿಲುಗಳನ್ನು ಸ್ಪರ್ಷಿಸದರೆ ಬಾಗಿನ ಅರ್ಪಿಸುವ ಸಂಪ್ರದಾಯವಿದೆ. ಮುಕ್ಕಾಲು ಶತಮಾನದ ಬಳಿಕ ಇದೀಗ ಮತ್ತೆ ನಡಿಬೆಟ್ಟು ಮನೆಯ ಚಾವಡಿಗೆ ನೀರು ನುಗ್ಗಿದೆ, ಹೀಗಾಗಿ ಇಂದು ಪಾಪನಾಶಿನಿಗೆ ಬಾಗಿನ ಅರ್ಪಿಸಲಾಯಿತು.
70 ವರ್ಷಗಳ ಬಳಿಕ:ಇತ್ತೀಚಿನ ವರ್ಷಗಳಲ್ಲಿ ಇಂತಹ ಮಳೆ ಬಂದಿರಲಿಲ್ಲ. ಬಾಗಿನವನ್ನೂ ಅರ್ಪಿಸಿರಲಿಲ್ಲ. ಸುಮಾರು 70 ವರ್ಷಗಳ ಹಿಂದೆ ಈ ರೀತಿ ಚಾವಡಿವರೆಗೆ ನೀರು ನುಗ್ಗಿ ಬಾಗಿನ ಅರ್ಪಿಸಲಾಗಿತ್ತು ಎಂದು ಮನೆಯ ಹಿರಿಯರು ಹೇಳುತ್ತಾರೆ.
ಅಪರೂಪದ ಈ ದೃಶ್ಯ ನೋಡಲು ಶಿರ್ವ ಪರಿಸರದ ಜನರು ಆಗಮಿಸಿದ್ದರು.