Advertisement
ಹೌದು, ಯುಕೆಪಿ 1 ಮತ್ತು 2ನೇ ಹಂತದಲ್ಲಿ ಈಗಾಗಲೇ 2,61,610 ಎಕರೆ ಭೂಮಿ, 75,755 ಕಟ್ಟಡಗಳು ಸ್ವಾಧೀನಗೊಂಡಿವೆ. ಇದೀಗ ಆರು ದಶಕಗಳಿಂದ ನನೆಗುದಿಗೆ ಬಿದ್ದಿರುವ ಈ ಯೋಜನೆ ಪೂರ್ಣಗೊಳ್ಳಲು 3ನೇ ಹಂತದ ಭೂಸ್ವಾಧೀನ, ಪುನರ್‌ವಸತಿ, ಪುನರ್‌ನಿರ್ಮಾಣ ಹಾಗೂ ನೀರಾವರಿ ಯೋಜನೆ ಕೈಗೊಳ್ಳಬೇಕಿದೆ. ಇದಕ್ಕಾಗಿ ಒಟ್ಟು 1.23 ಲಕ್ಷ ಎಕರೆ ಭೂಮಿ ಮತ್ತೆ ಸ್ವಾಧೀನಪಡಿಸಿಕೊಳ್ಳಲೇಬೇಕಾದ ಅಗತ್ಯವಿದೆ.ಇದಕ್ಕಾಗಿ ಯೋಗ್ಯ ಪರಿಹಾರ ಕೊಡಿ ಎಂಬ ಬೇಡಿಕೆಗೆ ಸರ್ಕಾರ ಸ್ಪಂದಿಸುತ್ತಾ ಎಂಬ ಕಾತುರ ಎಲ್ಲರಲ್ಲಿದೆ.
Related Articles
Advertisement
ಮೆಟ್ರೋಗೆ ಕೊಟ್ಟ ಅನುದಾನ ಕೊಡಿ: ಉತ್ತರಕರ್ನಾಟಕದ ಪ್ರಮುಖ ನೀರಾವರಿ ಯೋಜನೆಯಾದ ಯುಕೆಪಿಗೆ ಸರ್ಕಾರ, ಅಗತ್ಯ ಅನುದಾನ ನೀಡಿ, ಬೇಗ ಪೂರ್ಣಗೊಳಿಸಬೇಕು. ಕಳೆದ 1962ರಿಂದಲೂ ಈ ಯೋಜನೆ ಕುಂಟುತ್ತ ಸಾಗಿದ್ದು, ಬೆಂಗಳೂರಿನ ಮೆಟ್ರೋ ಯೋಜನೆಗೆ ಒಂದು ಹಂತದಲ್ಲಿ 14,052 ಕೋಟಿ (0ರಿಂದ 43 ಕಿ.ಮೀ) ಹಾಗೂ 2ನೇ ಹಂತದಲ್ಲಿ 32 ಸಾವಿರ ಕೋಟಿ (43 ಕಿ.ಮೀಯಿಂದ 76 ಕಿ.ಮೀ ಮೆಟ್ರೋ ರೈಲು ಮಾರ್ಗ ನಿರ್ಮಾಣ) ಅನುದಾನ ನೀಡಲಾಗಿದೆ. ಅದೇ ಮಾದರಿಯಲ್ಲಿ ಯುಕೆಪಿ ಯೋಜನೆಗೆ ಎರಡು ಹಂತದಲ್ಲಿ 36 ಸಾವಿರ ಕೋಟಿ (ಪರಿಹಾರಕ್ಕೆ) ನೀಡಿ, ರೈತರಿಗೆ ಯೋಗ್ಯ ಪರಿಹಾರ ನೀಡಬೇಕು. ಯೋಗ್ಯ ಪರಿಹಾರ ಕೊಟ್ಟಾಗ, ರೈತರು ಭೂಮಿ ಕೊಡುತ್ತಾರೆ. ಭೂಮಿ ಕೊಟ್ಟರೆ ಯೋಜನೆ ಪೂರ್ಣಗೊಳ್ಳುತ್ತದೆ. ಇದಕ್ಕೆ ಸರ್ಕಾರ ಮನಸ್ಸು ಮಾಡಬೇಕು ಎಂಬುದು ಹೋರಾಟಗಾರರ ಒತ್ತಾಯ.
ನಮ್ಮ ಸರ್ಕಾರದ ಅವಧಿಯಲ್ಲೇ ಯುಕೆಪಿ ಯೋಜನೆ ಪೂರ್ಣಗೊಳಿಸುವುದು ನಮ್ಮ ಆದ್ಯತೆ. ರೈತರು ಕೇಳುವ ವಾಸ್ತವಮಾರುಕಟ್ಟೆ ಬೆಲೆಗೆ ನಾಲ್ಕುಪಟ್ಟು ಪರಿಹಾರ ನೀಡುವುದು ಕಷ್ಟ. ಹೊಸ ಭೂಸ್ವಾಧೀನ ಕಾಯ್ದೆ ಪ್ರಕಾರ ಪರಿಹಾರ ನೀಡಲಾಗುತ್ತದೆ.
ಗೋವಿಂದ ಕಾರಜೋಳ ಉಪ ಮುಖ್ಯಮಂತ್ರಿ ಯುಕೆಪಿ ಯೋಜನೆಗೆ ಭೂಮಿ ಕಳೆದುಕೊಳ್ಳುವ ರೈತರಿಗೆ ಯೋಗ್ಯ ಪರಿಹಾರ ದೊರೆಯಲೇಬೇಕು. ವಾಸ್ತವ ಬೆಲೆಯ ನಾಲ್ಕು ಪಟ್ಟು ಪರಿಹಾರ ಯಾರೂ ಕೇಳುತ್ತಿಲ್ಲ. ಖುಷ್ಕಿ ಭೂಮಿಗೆ 30 ಲಕ್ಷ, ನೀರಾವರಿಗೆ 40 ಲಕ್ಷ ಬೆಲೆ ನಿಗದಿ ಮಾಡಬೇಕು ಎಂಬ ಒತ್ತಾಯಕ್ಕೆ ನಾನು ಈಗಲೂ ಬದ್ಧನಿದ್ದೇನೆ. ಈ ಕುರಿತು ಅಧಿವೇಶನದ ವೇಳೆ ಪ್ರಸ್ತಾಪಿಸುತ್ತೇನೆ.
ಮುರುಗೇಶ ನಿರಾಣಿ
ಬೀಳಗಿ ಶಾಸಕ ರೈತರಿಗೆ ಯೋಗ್ಯ ಪರಿಹಾರ ನೀಡದಿದ್ದರೆ ಅವರ ಬದುಕು ಬೀದಿಗೆ ಬರಲಿದೆ. ಹೊಸ ಕಾಯ್ದೆ ಪ್ರಕಾರ ಒಂದು ಎಕರೆ ಭೂಮಿಗೆ ಕೇವಲ 6ರಿಂದ 8 ಲಕ್ಷ ಪರಿಹಾರ ದೊರೆಯುತ್ತಿದೆ. ಈ ಪರಿಹಾರದಲ್ಲಿ ಒಂದು ಎಕರೆ ಭೂಮಿ ಖರೀದಿಸಲೂ ಸಾಧ್ಯವಿಲ್ಲ. ಒಟ್ಟು 1.23 ಲಕ್ಷ ಎಕರೆ ಭೂಮಿಗೆ ಕಾಯ್ದೆ ಪ್ರಕಾರ 12 ಸಾವಿರ ಕೋಟಿ, ಮಾರುಕಟ್ಟೆ ಬೆಲೆಯ ಪ್ರಕಾರ 36 ಸಾವಿರ ಕೋಟಿ ಅಂದಾಜು ಪರಿಹಾರ ಬೇಕಾಗುತ್ತದೆ. ಎರಡು ಹಂತದಲ್ಲಿ ವಾಸ್ತವದ ಪರಿಹಾರ ನೀಡಲು ಸರ್ಕಾರ ಮುಂದಾಗಬೇಕು. ಈ ಬಜೆಟ್‌ನಲ್ಲಿ ಗರಿಷ್ಠ ಅನುದಾನ ನಿಗದಿ ಮಾಡಬೇಕು.
ಪ್ರಕಾಶ ಅಂತರಗೊಂಡ
ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ಮುಖಂಡ ಎಸ್.ಕೆ. ಬಿರಾದಾರ