Advertisement

Bagalkote: ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಿ-ಬೋಳಿಶಟ್ಟರ

05:51 PM Nov 06, 2023 | Team Udayavani |

ಹುನಗುಂದ; ಸದಾ ಓದು ಮತ್ತು ಸಾಹಿತ್ಯ ಚಟುವಟಿಕೆಗಳಿಂದ ಸೃಜನಶೀಲ ಸಾಹಿತ್ಯ ರಚನೆಯಾಗಲು ಸಾಧ್ಯ ಎಂದು ಪ್ರಾಚಾರ್ಯ ಎಚ್‌.ಎಸ್‌. ಬೋಳಿಶಟ್ಟರ ಹೇಳಿದರು.

Advertisement

ಪಟ್ಟಣದ ಕಾಲೇಜು ಸಭಾಭವನದಲ್ಲಿ ಹೊನ್ನ ಕುಸುಮ ಸಾಹಿತ್ಯ ವೇದಿಕೆ ಮತ್ತು ಶ್ರೀ ವಿಜಯ ಮಹಾಂತೇಶ ಪದವಿ
ಮಹಾವಿದ್ಯಾಲಯ ಸಹಯೋಗಲ್ಲಿ ನಡೆದ ಎಂ.ಡಿ. ಚಿತ್ತರಗಿ ಅವರ ಮಥನ ವಿಮರ್ಶಾ ಲೇಖನಗಳು ಮತ್ತು ಗಾಯಗೊಂಡಿವೆ ಬಣ್ಣ ಕವನ ಸಂಕಲನ ಲೋಕಾರ್ಪಗೊಳಿಸಿ ಅವರು ಮಾತನಾಡಿದರು.

ಓಟ, ನೋಟ, ಮತ್ತು ಆಳಗಲಕ್ಕೂ ಮೀರಿ ವಿಸ್ತಾರಗೊಂಡ ಮಹಾನ್‌ ಸಾಹಿತಿಗಳ ಆದರ್ಶವನ್ನು ಮತ್ತು ಹಿಡಿದಿಟ್ಟ ಕೆಚ್ಚೆದೆಯ ಕನ್ನಡ ಸಾಹಿತ್ಯವನ್ನು ಬರೆದಿಟ್ಟ ಅವರ ಮೌಲ್ಯಯುತ ಪುಸ್ತಕಗಳನ್ನು ಓದಬೇಕು. ಅಲ್ಲಲ್ಲಿ ಹಿರಿಯ ಕವಿಗಳು ನಡೆಸುವ ಕನ್ನಡ ಕಾರ್ಯಕ್ರಮದಲ್ಲಿ ಯುವಕರು ಪಾಲ್ಗೊಂಡು ಸಾಹಿತ್ಯಾಸಕ್ತಿ ಮೂಡಿಸಿಕೊಳ್ಳಬೇಕು ಎಂದು ಬೋಳಿಶೆ‌ಟ್ಟರ ತಿಳಿಸಿದರು. ವಿದ್ಯಾರ್ಥಿ ದೆಸೆಯಲ್ಲಿ ನಮ್ಮಗಲಕ್ಕೂ ಮಾತೃಭಾಷೆಯ ಕನ್ನಡವನ್ನು ಹರಡಿಸಿ ಮೆರೆಸೋಣ ಎಂದರು.

ಕಾಲೇಜ ಪ್ರಾಧ್ಯಾಪಕಿ ಡಾ| ಸುಮಂಗಲಾ ಮೇಟಿ ಮಥನ ಪುಸ್ತಕ ಕುರಿತು ಮಾತನಾಡಿ ಅಳೆಯಲಾಗದ ಮತ್ತು ಹಿಡಿಲಾಗದ ಸಾಹಿತ್ಯ ಕ್ಷೇತ್ರದಲ್ಲಿ ಸಿಗುವ ಸತ್ಯವನ್ನು ಬಳಸಿಕೊಂಡು ಮಾಸದಂತೆ ಕವಿಗಳು ಸಾಹಿತ್ಯ ಲೋಕವನ್ನು ಬೆಳೆಸಿ ಮೆರೆಸಿದ್ದಾರೆ. ಜಡ್ಡುಗಟ್ಟಿದ ಮೌಡ್ಯಕ್ಕೂ ಮತ್ತು ಸಾಕಷ್ಟು ಸವಾಲುಗಳ ಮೇಲೆ ಸಾಹಿತ್ಯ ಲೋಕ ಬೆಳಕು ಚಲ್ಲುವ ಕಾರ್ಯ ಮಾಡುತ್ತಿದೆ.
ಸಾಮಾಜಿಕವಾಗಿ ನಡೆಯುವ ಕೆಲವು ಅಂಧತ್ವ ದೂರಾಗುವ ಸಾಹಿತ್ಯ ಹೊರ ಬರಬೇಕಿದೆ ಎಂದು ಹೇಳಿದರು.

ಪ್ರಾಧ್ಯಾಪಕ ಚಂದ್ರಶೇಖರ ಹೆಗಡೆ ಗಾಯಗೊಂಡಿವೆ ಬಣ್ಣ ಪುಸ್ತಕ ಕುರಿತು ವಿವರಣೆ ನೀಡಿದರು. ಪ್ರಾಚಾರ್ಯ ಎಸ್‌.ಕೆ. ಮಠ
ಅಧ್ಯಕ್ಷತೆ ವಹಿಸಿದ್ದರು. ಪ್ರೊ| ಕೆ.ಎ. ಬನ್ನಟ್ಟಿ, ಪ್ರೊ| ಬಿ.ಬಿ. ಕಡ್ಲಿ, ನಿವೃತ್ತ ಶಿಕ್ಷಕ ಮಹಾಂತೇಶ ತೆನಹಳ್ಳಿ, ಎಸ್‌.ಎನ್‌. ಹಾದಿಮನಿ, ಕಸಾಪ ತಾಲುಕ ಅಧ್ಯಕ್ಷ ಮಲ್ಲು ಸಜ್ಜನ ಸಾಹಿತಿಗಳು ಪಾಲ್ಗೊಂಡಿದ್ದರು. ಪುಸ್ತಕ ನೀಡಿ ಶಿಕ್ಷಕ ವರ್ಗವನ್ನು ಗೌರವಿಸಲಾಯಿತು.
ಶಿಕ್ಷಕ ಸಿದ್ದು ಶೀಲವಂತರ ಸ್ವಾಗತಿಸಿದರು. ಹೊಸಾವೇ ಅಧ್ಯಕ್ಷ ಸಂಗಣ್ಣ ಮುಡಪಲದಿನ್ನಿ ಮಾತನಾಡಿದರು.

Advertisement

ಸಾಹಿತ್ಯ ಕ್ಷೇತ್ರದಲ್ಲಿ ಬರಹಗಾರರಿಗೆ ಹಮ್ಮು ಬಿಮ್ಮು ಬೇಡ. ಹಿರಿಯ ಲೇಕಕರು ಕಿರಿಯ ಮತ್ತು ಯುವ ಬರಹಗಾರರಿಗೆ ಸೂಕ್ತ ಮಾರ್ಗದರ್ಶನ, ಮುಕ್ತವಾದ ಸಲಹೆ ಸೂಚನೆಗಳನ್ನು ನೀಡಿ ಈ ಕ್ಷೇತ್ರವನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸಬೇಕು.
*ಎಂ.ಡಿ. ಚಿತ್ತರಗಿ,
ಪ್ರಾಧ್ಯಾಪಕ-ಲೇಖಕ

Advertisement

Udayavani is now on Telegram. Click here to join our channel and stay updated with the latest news.

Next