Advertisement
ಬಾಗಲಕೋಟೆಯಲ್ಲಿ ಗುರುವಾರ ವಿಜಯಪುರ-ಬಾಗಲಕೋಟೆ ಲೋಕಸಭೆ ಕ್ಷೇತ್ರದ ಚುನಾವಣೆ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, “ರಾಜ್ಯದಲ್ಲಿ ಬರ ಪರಿಸ್ಥಿತಿಯಿದೆ. ಇದಕ್ಕಾಗಿ ಮೈತ್ರಿ ಸರ್ಕಾರ ಏನು ಮಾಡಿದೆ? ಕಬ್ಬು ಬೆಳೆಗಾರರ ಸಮಸ್ಯೆ, ರೈತರ ಸಾಲ ಮನ್ನಾ ಏನಾಯಿತು? ಇಂತಹ ಹಲವು ಸಮಸ್ಯೆಗಳಿಗೆ ಈ ಮೈತ್ರಿ ಸರ್ಕಾರ ಪರಿಹಾರ ಕೊಟ್ಟಿಲ್ಲ ಎಂದರು.
Related Articles
Advertisement
ಕಾಂಗ್ರೆಸ್ ಹಾಗೂ ಕಳ್ಳರ ಮಹಾಘಟಬಂಧನ್ ಅವರವರ ಪರಿವಾರದ ವಿಕಾಸ, ದಲ್ಲಾಳಿಗಳ ವಿಕಾಸ ಹಾಗೂ ಬೆಲೆ ಏರಿಕೆಯ ವಿಕಾಸದ ಮೂರು ಗುರಿ ಹೊಂದಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ನಾಲ್ಕು ವಿಷಯಗಳಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ರಾಷ್ಟ್ರವಾದದ ವಿರುದಟಛಿ ಟೀಕೆ ಮಾಡುವುದು, ಮೋದಿಯನ್ನು ಬಯ್ಯುವುದು ಹಾಗೂ ವಂಶವನ್ನು ವೃದ್ಧಿಸುವುದೇ ಆಗಿದೆ.
ನವದೆಹಲಿಯ ಹವಾನಿಯಂತ್ರಣ ಕೊಠಡಿಯಲ್ಲಿ ಕುಳಿತು ಮಾತನಾಡುವವರು ಹಾಗೂ ನಮ್ಮನ್ನು ಸೋಲಿಸುವ ಕುರಿತು ಯೋಜನೆ ಮಾಡುತ್ತಿರುವವರು ಈ ಜನಸಾಗರವನ್ನು ಬಂದುನೋಡಬೇಕು ಎಂದರು. ಕನ್ನಡದಲ್ಲಿ ಆರಂಭ-ಕನ್ನಡದಲ್ಲೇ ಮುಕ್ತಾಯ
ಲೋಕಸಭೆ ಚುನಾವಣೆ ಪ್ರಚಾರಾರ್ಥ ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಆಗಮಿಸಿದ ನರೇಂದ್ರ ಮೋದಿ, ಕನ್ನಡದಲ್ಲಿ ಭಾಷಣ ಆರಂಭಿಸಿ ನೆರೆದ ಲಕ್ಷಾಂತರ ಜನರಮನ ಸೆಳೆದರು. “ವಿಜಯಪುರ ಮತ್ತು ಬಾಗಲಕೋಟೆ ಕ್ಷೇತ್ರಗಳ ಆತ್ಮೀಯ ನಾಗರಿಕ ಬಂಧುಗಳೇ, ನಿಮಗೆಲ್ಲ ನಿಮ್ಮ ಚೌಕಿದಾರ್ ನರೇಂದ್ರ ಮೋದಿಯ ನಮಸ್ಕಾರಗಳು’ ಎಂದು ಹೇಳಿದಾಗ ನೆರೆದಿದ್ದ ಲಕ್ಷಾಂತರ ಜನರು ಮೋದಿ ಮೋದಿ ಎಂದು ಘೋಷಣೆ ಕೂಗಿದರು. ಮಧ್ಯಾಹ್ನ 2:46ಕ್ಕೆ ಹೆಲಿಕಾಪ್ಟರ್ ಮೂಲಕ ಸಮಾವೇಶದ ಸ್ಥಳಕ್ಕೆ ಆಗಮಿಸಿದ ಮೋದಿ, 3 ಗಂಟೆ 5 ನಿಮಿಷಕ್ಕೆ ವೇದಿಕೆ ಹತ್ತಿದರು. ಬಳಿಕ ಸಾರ್ವಜನಿಕರತ್ತ ಕೈಬೀಸಿ ಆಸೀನರಾದರು. ವಿಜಯಪುರ ಮತ್ತು ಬಾಗಲಕೋಟೆ ಬಿಜೆಪಿ ಜಿಲ್ಲಾ ಘಟಕದಿಂದ ಸನ್ಮಾನಿಸಲಾಯಿತು. ನಂತರ 3:06ಕ್ಕೆ ಭಾಷಣ ಆರಂಭಿಸಿ 3:48ಕ್ಕೆ ಭಾಷಣ ಮುಗಿಸಿದರು. ಬೆಳ್ಳಿಯ ಬಿಲ್ಲು-ಸಿದ್ದೇಶ್ವರ ಶ್ರೀ ಫೋಟೋ ನೀಡಿ ಸನ್ಮಾನ
2014ರ ವೇಳೆ ಪ್ರಧಾನಿ ಅಭ್ಯರ್ಥಿಯಾಗಿ ಆಗಮಿಸಿದ್ದ ವೇಳೆ ಮೋದಿ ಅವರಿಗೆ ಜಿಲ್ಲೆಯಿಂದ ಬೆಳ್ಳಿಯ ಗದೆ ನೀಡಿ ಸನ್ಮಾನಿಸಲಾಗಿತ್ತು. ಈಗ ಪ್ರಧಾನಿಯಾಗಿ ಇದೇ ಸ್ಥಳದಲ್ಲಿ ಭಾಷಣ ಮಾಡಿದರು. ಅದಕ್ಕೂ ಮುಂಚೆ ಬಿಜೆಪಿ ಬಾಗಲಕೋಟೆ ಜಿಲ್ಲಾ ಘಟಕದಿಂದ ಬೆಳ್ಳಿಯ ಬಿಲ್ಲು-ಬಾಣ ನೀಡಿ ಸನ್ಮಾನಿಸಿದರೆ, ವಿಜಯಪುರ ಬಿಜೆಪಿ ಘಟಕದಿಂದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಭಾವಚಿತ್ರ, ಶಾಲು ಹೊದಿಸಿ ಸನ್ಮಾನಿಸಲಾಯಿತು.