Advertisement

University ಬಾಗಲಕೋಟೆಯಲ್ಲಿದೆ ದೇಶದ ಪ್ರತಿಷ್ಠಿತ: ಏಕೈಕ ತೋಟಗಾರಿಕೆ ವಿಶ್ವವಿದ್ಯಾಲಯ

09:52 PM Nov 01, 2023 | Team Udayavani |

ರೈತರ ಆರ್ಥಿಕ ಸುಧಾರಣೆ ದಿಸೆಯಲ್ಲಿ ತೋಟಗಾರಿಕೆಯ ಪ್ರಾಮುಖ್ಯತೆ ಅರಿತು ತೋಟಗಾರಿಕೆ ವಿಜ್ಞಾನಗಳಲ್ಲಿ ಶಿಕ್ಷಣ, ಸಂಶೋಧನೆ, ವಿಸ್ತರಣೆ ಮತ್ತು ಅಭಿವೃದ್ಧಿಗಾಗಿ 2008 ನವೆಂಬರ್‌ 22ರಂದು ಕರ್ನಾಟಕದ ಏಕೈಕ ಹಾಗೂ ರಾಷ್ಟ್ರದ ಮೂರನೇ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆಯಲ್ಲಿ ಆರಂಭಿಸಲು ಅನುಮೋದನೆ ದೊರೆಯಿತು. ತದನಂತರ ಕರ್ನಾಟಕ ರಾಜ್ಯದ ಮಂಜೂರಾತಿಯ ಆದ್ಯಾದೇಶ ಮತ್ತು ಕರ್ನಾಟಕ ಸ‌ರಕಾರ ಅ ಧಿನಿಯಮ ಅನ್ವಯ 2010 ಮೇ 13ರಂದು ಬಾಗಲಕೋಟೆ ನವನಗರದಲ್ಲಿ ಸ್ಥಾಪಿಸಲಾಯಿತು.

Advertisement

ಇಲ್ಲಿ ಬೆಳೆಯುವ ಪ್ರಮುಖ ಹಣ್ಣುಗಳಾದ ದ್ರಾಕ್ಷಿ, ದಾಳಿಂಬೆ, ಚಿಕ್ಕು, ಬಾಳೆ, ಮಾವು, ಅಂಜೂರ, ನಿಂಬೆ ಇವುಗಳಲ್ಲದೆೆ ತರಕಾರಿಗಳು, ಹೂಗಳು, ಮಸಾಲೆ ಪದಾರ್ಥಗಳು, ಔಷ ಧೀಯ ಸಸ್ಯಗಳನ್ನು ಬೆಳೆಯುತ್ತಿರುವುದೇ ಚಾಲುಕ್ಯರ ಗತ ವೈಭವ ಸಾರುವ ನಾಡು, ತ್ರಿವೇಣಿ ಸಂಗಮ ಬೀಡು, ಮುಳುಗಡೆ ನಗರಿ ಎಂದೇ ಪ್ರಖ್ಯಾತಿ ಪಡೆದ ಬಾಗಲಕೋಟೆ ನಗರದಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಮುಖ್ಯ ಕೇಂದ್ರ ಸ್ಥಾನ ನೀಡಲು ಪ್ರಬಲ ಹಾಗೂ ಮುಖ್ಯ ಕಾರಣವಾಗಿದೆ.

ಸಮೃದ್ಧ ಸಂಪನ್ಮೂಲಗಳಿಂದ ಕೂಡಿದ ಮಣ್ಣು, ತೋಟಗಾರಿಕೆ ಬೆಳೆ ಬೆಳೆಯಲು ಅನುಕೂಲ ಇರುವ ವಾತಾವರಣ, ಐತಿಹಾಸಿಕ, ಸಾಂಸ್ಕೃತಿಕ ಪರಿಸರಗಳು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಪೂರಕವಾಗಿವೆೆ. ಆಲಮಟ್ಟಿ ಜಲಾಶಯ ತೋಟಗಾರಿಕೆ ಅಭಿವೃದ್ಧಿಗೆ ಜೀವನದಿಯಾಗಿದ್ದು, ಕೃಷಿ ಮತ್ತು ತೋಟಗಾರಿಕೆ ಬೆಳೆವಣಿಗೆಗೆ ಅಖಂಡ ವಿಜಯಪುರ ಜಿಲ್ಲೆಯೂ ಬೆನ್ನಲುಬಾಗಿ ನಿಂತಿದೆ ಎಂದರೆ ಸತ್ಯವೇ ಹೌದು.
– ಅವಕಾಶಗಳು-ಪೂರಕ ಸಂಸ್ಥೆಗಳು: ನಮ್ಮ ದೇಶದಲ್ಲಿಯೇ ಕರ್ನಾಟಕ‌ ತೋಟಗಾರಿಕೆ ಬೆಳೆ ಬೆಳೆಯುವುದರಲ್ಲಿ ಮುಂಚೂಣಿ ಸ್ಥಾನ ಪಡೆದುಕೊಂಡಿದೆ. ರಾಜ್ಯದಲ್ಲಿ ತೋಟಗಾರಿಕೆಗೆ ಬೇಕಾದ ಉತ್ತಮವಾದ ಮಣ್ಣು, ಹವಾಗುಣ ಮತ್ತು ಕೃಷಿ ಆಧಾರಿತ ಕುಟುಂಬಗಳಿದ್ದು, ತೋಟಗಾರಿಕೆ ಬೆಳವಣಿಗೆಗೆ ಸಾಕಷ್ಟು ಸದವಕಾಶ ಇರುವುದು ಇದಕ್ಕೆ ಕಾರಣವಾಗಿದೆ.

ರಾಜ್ಯಾದ್ಯಂತ ತೋಟಗಾರಿಕೆ ಇಲಾಖೆ ಅರ್ಹ ವಿಸ್ತರಣಾ ಸಿಬ್ಬಂದಿ ಹೊಂದಿರುವುದು ವಿಶೇಷ. ರಾಷ್ಟ್ರೀಯ ತೋಟಗಾರಿಕೆ ಮಿಷನ್‌ ಮೂಲಕ ವಿವಿಧ ಕಾರ್ಯಕ್ರಮಗಳು, ಹೂ ಹರಾಜು ಕೇಂದ್ರಗಳು, ತೋಟಗಾರಿಕೆ ಅಭಿವೃದ್ಧಿಗಾಗಿ ಅಪೆಡಾ, ಕೆಪೆಕ್‌, ರಾಷ್ಟ್ರೀಯ ತೋಟಗಾರಿಕೆ ಮಂಡಳಿ, ರಾಷ್ಟ್ರೀಯ ತೋಟಗಾರಿಕೆ ಮಿಷನ್‌, ಹಾಪ್‌ಕಾಮ್ಸ್‌ ಮಾರುಕಟ್ಟೆ, ಆನ್‌ಲೈನ್‌ ಮಾರುಕಟ್ಟೆ ಇದಲ್ಲದೇ ರಾಜ್ಯದ ತೋಟಗಾರಿಕೆ ಅಭಿವೃದ್ಧಿಗಾಗಿ ಕಾನೂನು ಬೆಂಬಲ ಮತ್ತು ಸರಕಾರೇತರ ಸಂಘಗಳ ಬೆಂಬಲದಿಂದ ಕರ್ನಾಟಕ ರಾಜ್ಯದಲ್ಲಿ ತೋಟಗಾರಿಕೆಯು ತನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಸಹಾಯಕವಾಗಿದೆ. ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಪ್ರಸ್ತುತ ಕರ್ನಾಟಕದ 24 ಜಿಲ್ಲೆಗಳಿಗೆ ತನ್ನ ಕಾರ್ಯವ್ಯಾಪ್ತಿ ಹೊಂದಿದೆ.
– ದೃಷ್ಟಿಕೋನ: ತೋಟಗಾರಿಕೆ ವಿಜ್ಞಾನಗಳ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆಯಲ್ಲಿ ಉತ್ತುಂಗವನ್ನೇರಿ ವಿಶ್ವವಿದ್ಯಾಲಯದ ಘನತೆ ಹೆಚ್ಚಿಸುವುದರ ಮೂಲಕ ಆಹಾರ ಮತ್ತು ಜೀವನ ಪೋಷಣೆಯ ಭದ್ರತೆಗಾಗಿ ತೋಟಗಾರಿಕೆ ಕ್ಷೇತ್ರವನ್ನು ಸಂಪದ್ಭರಿತಗೊಳಿಸುವುದು.
– ಗುರಿ: ಕರ್ನಾಟಕದಲ್ಲಿ ತೋಟಗಾರಿಕೆ ಕ್ಷೇತ್ರವನ್ನು ಹಾಗೂ ಗುಣಮಟ್ಟದ ಉತ್ಪಾದನೆಯನ್ನು ಅಭಿವೃದ್ಧಿ ಗೊಳಿಸುವುದು. ತೋಟಗಾರಿಕೆಯ ಶಿಕ್ಷಣ,ಸಂಶೋಧನೆ ಮತ್ತು ಅಭಿವೃದ್ಧಿಗೆ ಸಂಬಂಧಿ ಸಿದ ಸಮಸ್ಯಾತ್ಮಕ ಕ್ಷೇತ್ರಗಳ ನಿರ್ವಹಣೆಯಿಂದ ತೋಟಗಾರಿಕೆ ತಂತ್ರಜ್ಞಾನ ಅಭಿವೃದ್ಧಿಗೊಳಿಸುವ ಸಲುವಾಗಿ ಪರಿಣಾಮಕಾರಿ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಹಾಗೂ ತಂತ್ರಜ್ಞಾನಗಳ ವರ್ಗಾವಣೆ ಬಲಪಡಿಸುವುದು.

ತೋಟಗಾರಿಕೆ ಪ್ರಮುಖ ಧ್ಯೇಯೋದ್ದೇಶಗಳು
-ತೋಟಗಾರಿಕೆ ಹಾಗೂ ತೋಟಗಾರಿಕೆಗೆ ಸಂಬಂ ಧಿಸಿದ ಎಲ್ಲ ವಿಜ್ಞಾನ ವಿಭಾಗಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದು.
-ತೋಟಗಾರಿಕೆ ವಿವಿಧ ವಿಭಾಗಗಳಲ್ಲಿ ಮೂಲ ಸಿದ್ಧಾಂತ ಆಧಾರಿತ ಮುಖ್ಯ ಸಂದಭೊìàಚಿತ ಸಂಶೋಧನೆ ಕೈಗೊಳ್ಳುವುದು.
-ವಿಸ್ತರಣೆ ವ್ಯವಸ್ಥೆ ಹಾಗೂ ಪ್ರಸಾರಾಂಗಗಳ ಮೂಲಕ ಕೃಷಿ ಸಮುದಾಯಗಳಿಗೆ ತಾಂತ್ರಿಕತೆ ತಲುಪಿಸುವುದು.
-ಶೈಕ್ಷಣಿಕ ಪ್ರಗತಿ: ರಾಜ್ಯ ಹಾಗೂ ರಾಷ್ಟ್ರದ ತೋಟಗಾರಿಕೆ ಉದ್ಯಮದ ಅಭಿವೃದ್ಧಿಗಾಗಿ ತೋಟಗಾರಿಕೆಯಲ್ಲಿ ಪರಿಣಿತ ಹಾಗೂ ಕೌಶಲ್ಯಭರಿತ ಮಾನವ ಸಂಪನ್ಮೂಲ ಅಭಿವೃದ್ಧಿಪಡಿಸುವ ಮುಖ್ಯ ಗುರಿ ವಿಶ್ವವಿದ್ಯಾಲಯ ಹೊಂದಿದೆ‌.
-ಬೋಧನೆ ಮತ್ತು ನೈಪುಣ್ಯತೆ ಹೆಚ್ಚಿಸುವ ಕಾರ್ಯಕ್ರಮ
-ಶೆ„ಕ್ಷಣಿಕ ಕಾರ್ಯಕ್ರಮ
-ತೋಟಗಾರಿಕೆಯಲ್ಲಿ ಪರಿಣಿತಿ ಮಾನವ ಸಂಪನ್ಮೂಲ ಅಭಿವೃದ್ಧಿಪಡಿಸುವುದು

Advertisement

– ತೋವಿವಿಗೆ ಕೃಷಿ ಅನುಸಂಧಾನ ಪರಿಷತ್ತಿನ ಮಾನ್ಯತೆ: ವಿಶ್ವವಿದ್ಯಾಲಯ ಪ್ರಾರಂಭವಾದ ಆರನೇ ವರ್ಷದಲ್ಲಿಯೇ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನಿಂದ 2014 ಏಪ್ರಿಲ್‌ 24ರಂದು 5 ವರ್ಷಗಳ ಅವ ಧಿಗೆ ಮಾನ್ಯತೆ ಪಡೆದಿದ್ದು, ಮಾನ್ಯತೆ ಮರು ನವೀಕರಿಸಲು ಐಸಿಎಆರ್‌ ಅಕ್ರಿಡೆಶನ್‌ ತಂಡ 20 ಜನವರಿ 2020 ರಿಂದ 2024 ರವರೆಗೆ ತೋವಿವಿಯ ವಿವಿಧ ಮಹಾವಿದ್ಯಾಲಯಗಳಿಗೆ ಹಾಗೂ ಮುಖ್ಯ ಆವರಣಕ್ಕೆ ಭೇಟಿ ನೀಡಿ 2024 ರವರೆಗೆ ಮಾನ್ಯತೆ ನೀಡಲಾಗಿದೆ.

ವಿವಿಧ ಶೈಕ್ಷಣಿಕ ಕೋರ್ಸ್‌
ತೋಟಗಾರಿಕೆ ವಿಶ್ವವಿದ್ಯಾಲಯದ ಶೈಕ್ಷಣಿಕ ಕಾರ್ಯಕ್ರಮಗಳು ವಿವಿಧ ತೋಟಗಾರಿಕೆ ಮತ್ತು ಅದಕ್ಕೆ ಸಂಬಂಧಿ ಸಿದ ವಿಜ್ಞಾನ ವಿಷಯಗಳಲ್ಲಿ ಸರ್ಟಿಫಿಕೇಟ್‌ ಕೋರ್ಸ್‌, ಡಿಪೊÉàಮಾ, ಸ್ನಾತಕ ಪದವಿ, ಸ್ನಾತಕೋತ್ತರ ಡಿಪೊÉàಮಾ, ಸ್ನಾತಕೋತ್ತರ ಪದವಿ ಮತ್ತು ಪಿಎಚ್‌.ಡಿ ಕಾರ್ಯಕ್ರಮ ಒಳಗೊಂಡಿರುತ್ತವೆ. ವಿಶ್ವವಿದ್ಯಾಲಯವು ಗುಣಮಟ್ಟದ ಶಿಕ್ಷಣ ನೀಡುವುದಕ್ಕಾಗಿ ಇ-ಕಲಿಕೆ, ಪ್ರಯೋಗಾಲಯ ಕಲಿಕೆ, ರಾಜ್ಯ ಹಾಗೂ ರಾಷ್ಟ್ರೀಯ ಶೈಕ್ಷಣಿಕ ಪ್ರವಾಸ, ವಿಶೇಷ ಬೋಧನಾ ಕಲಿಕೆ, ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸುವಿಕೆ ಹಾಗೂ ವಿಶೇಷ ತರಬೇತಿ ಕಾರ್ಯಕ್ರಮ ವಿಶ್ವವಿದ್ಯಾಲಯದಿಂದ ಆಯೋಜಿಸಿ ವಿವಿಧ ಮಹಾವಿದ್ಯಾಲಯಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ.

ತೋಟಗಾರಿಕೆ ಬಿಎಸ್‌ಸಿ ಪ್ರವೇಶ ಪ್ರಕ್ರಿಯೆ
ನಮ್ಮ ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿ. (ತೋಟಗಾರಿಕೆ)ಪದವಿ ಕಾರ್ಯಕ್ರಮಕ್ಕೆ ಪ್ರವೇಶ ಪ್ರಕ್ರಿಯೆ ಕರ್ನಾಟಕ ಪರೀûಾ ಪ್ರಾ ಧಿಕಾರ ಬೆಂಗಳೂರು ಇವರ ಮುಖಾಂತರ ನಡೆಸಲಾಗುತ್ತದೆ. ಪ್ರವೇಶ ಬಯಸುವ ವಿದ್ಯಾರ್ಥಿಗಳು ಪಿಯುಸಿ(ವಿಜ್ಞಾನ) ವಿಭಾಗದಲ್ಲಿ ಭೌತಶಾಸ್ತ್ರ, ರಸಾಯನಿಕ ಶಾಸ್ತ್ರ, ಗಣಿತಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯ ಪಡೆದು ಉತ್ತೀರ್ಣರಾಗಿರಬೇಕು. ಅಲ್ಲದೆ ಪ್ರಸ್ತುತ ಸಾಲಿನ ವರ್ಷದಲ್ಲಿ ಸಿಇಟಿ ಪರೀಕ್ಷೆ ಬರೆದಿರಬೇಕು. ಪ್ರತಿ ವರ್ಷ ಶೈಕ್ಷಣಿಕ ಪ್ರವೇಶ ಪ್ರಕ್ರಿಯೆ ಬಿಎಸ್ಸಿ(ತೋಟಗಾರಿಕೆ)ಪದವಿ ಪ್ರವೇಶ ಪ್ರಕ್ರಿಯೆಯ ಪ್ರಕಟನೆ ಜೂನ್‌/ಜುಲೈನಲ್ಲಿ ಪ್ರಚಲಿತ ಪತ್ರಿಕೆಗಳಲ್ಲಿ, ತೋವಿವಿ ವೆಬ್‌ಸೈಟ್‌ನಲ್ಲಿ, ಮಾಧ್ಯಮಗಳಲ್ಲಿ ಬಿತ್ತರಿಸಲಾಗುವುದು. ತರಗತಿಗಳನ್ನು ಜುಲೈ/ಆಗಸ್ಟ್‌ ತಿಂಗಳಿನಲ್ಲಿ ಆರಂಭಿಸಲಾಗುವುದು.

ಸ್ನಾತಕೋತ್ತರ
ಪದವಿಗೆ ಪ್ರವೇಶ ಪ್ರಕ್ರಿಯೆ
ಸ್ನಾತಕೋತ್ತರ ಪದವಿ ಕಾರ್ಯಕ್ರಮ ಪ್ರಮುಖವಾಗಿ ಉದ್ಯಮದಲ್ಲಿ ನಾಯಕತ್ವದ ಗುಣ ಹೊಂದಲು ಬೇಕಾದ ಮಾನವ ಸಂಪನ್ಮೂಲ ಅಭಿವೃದ್ಧಿಯ ಬಗೆಗೆ ಸಂಶೋಧನೆ ಮತ್ತು ವೃತ್ತಿಪರ ವ್ಯವಸ್ಥಾಪನಾ ಅಗತ್ಯತೆ ಪೂರೈಸುವ ಗುರಿ ಹೊಂದಿವೆೆ. ಈ ಪದವಿಯಲ್ಲಿ ತೋಟಗಾರಿಕೆ ಮತ್ತು ಸಂಬಂಧಿ ಸಿದ ಸಮಗ್ರ ವಿಜ್ಞಾನಗಳ ತಂತ್ರಜ್ಞಾನ ಅಭಿವೃದ್ಧಿ ಮತ್ತು ತಜ್ಞರ ಬೇಡಿಕೆಗಳನ್ನು ಪೂರೈಸುವ ಹಾಗೆ ವಿನ್ಯಾಸಗೊಳಿಸಲಾಗಿದೆ. ಉದಯೋನ್ಮುಖ ಪ್ರದೇಶಗಳಿಗೆ ಮಾನ್ಯತೆ, ತೋಟಗಾರಿಕೆಯಲ್ಲಿ ಆಧುನಿಕ ತಾಂತ್ರಿಕತೆಗಳಲ್ಲಿ ಪರಿಣಿತಿ ಹೊಂದುವುದು, ತೋಟಗಾರಿಕೆಯ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಶಿಷ್ಯವೇತನ ಪಡೆಯಲು ತರಬೇತಿ, ಗುಣಮಟ್ಟದ ಶಿಕ್ಷಣ ನೀಡುವುದು ಇತ್ಯಾದಿ. ವಿಶ್ವವಿದ್ಯಾಲಯ ಏಷ್ಯಾ ಮತ್ತು ಆಫ್ರಿಕಾ ದೇಶಗಳ ಅನೇಕ ವಿದ್ಯಾರ್ಥಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸ್ನಾತಕೋತ್ತರ ಪದವಿ ಪ್ರಕ್ರಿಯೆಯು ಪ್ರತಿ ವರ್ಷ ಜುಲೈ/ಆಗಸ್ಟ್‌ನಲ್ಲಿ ಮತ್ತು ತರಗತಿಗಳು ಆಗಸ್ಟ್‌/ಸೆಪ್ಟಂಬರ್‌ನಲ್ಲಿ ಆರಂಭವಾಗುತ್ತವೆ.

ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ
ವಿಶ್ವವಿದ್ಯಾಲಯ ವಿವಿಧ ಸಂಸ್ಥೆಗಳಿಂದ ಪರಿಣಿತರನ್ನು ಆಹ್ವಾನಿಸಿ ತೋಟಗಾರಿಕೆಯಲ್ಲಿ ಪರಿಷ್ಕೃರಿಸಿದ ಆಧುನಿಕ ಅಭಿವೃದ್ಧಿ ಸಂಶೋಧನೆಗಳು, ವಿವಿಧ ಸಾಮರ್ಥಯದ ವಿಧಾನಗಳನ್ನು ಹೆಚ್ಚಿಸುವ ವಿಚಾರ ಸಂಕಿರಣಗಳು, ವಿಶೇಷ ಸರಣಿ ಸಂಕಿರಣಗಳು, ಗುಂಪು ಚರ್ಚೆಗಳನ್ನು ನಡೆಸಿ ವಿದ್ಯಾರ್ಥಿಗಳಿಗೆ ಕಲಿಕಾ ಕ್ಷೇತ್ರದಲ್ಲಿ ಸರ್ವವಿಧದಲ್ಲೂ ವ್ಯಕ್ತಿತ್ವ ವಿಕಸನವಾಗಲು ಆರೋಗ್ಯದಾಯಕ ವಾತಾವರಣ ಸೃಷ್ಟಿಸುತ್ತದೆ. ಕರ್ನಾಟಕ ಮತ್ತು ನೆರೆ ರಾಜ್ಯಗಳ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಗಳಲ್ಲಿ ಅಧ್ಯಯನ ಮಾಡಲು ಮಾರ್ಗದರ್ಶಕರೊಂದಿಗೆ ವಿದ್ಯಾರ್ಥಿಗಳಿಗೆ ಒಂದು ವಾರದ ಶೈಕ್ಷಣಿಕ ಪ್ರವಾಸ ಏರ್ಪಡಿಸುವುದು ವಿಶ್ವವಿದ್ಯಾಲಯದ ವಿಶೇಷ‌.

ವಿಶ್ವ ವಿದ್ಯಾಲಯದ ತರಬೇತಿ ಕೇಂದ್ರ:
ವಿಸ್ತರಣಾ ನಿರ್ದೇಶನಾಲಯದ ವಿಜ್ಞಾನಿಗಳು ವಿಶ್ವವಿದ್ಯಾಲಯದ ಇತರೆ ವಿಜ್ಞಾನಿಗಳ ಸಹಯೋಗದೊಂದಿಗೆ ರೈತರಿಗೆ, ವಿವಿಧ ಇಲಾಖೆಗಳ ಸಿಬ್ಬಂದಿ, ಉದ್ಯಮಿದಾದರರು, ಕೃಷಿ ಪರಿಕರಗಳ ಮಾರಾಟಗಾರರು, ಸರಕಾರೇತರ ಸಂಸ್ಥೆಗಳ ನೌಕರರಿಗೆ ಒಂದು ದಿನ/ ಎರಡು ದಿನ/ವಾರದ/ತಿಂಗಳಿನ ಅವ ಧಿಯವರೆಗೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ವಿಶ್ವವಿದ್ಯಾಲಯ ಕೃಷಿ ಮೇಳದಲ್ಲಿ ಬೇರೆ ಬೇರೆ ಕೃಷಿ ವಿಶ್ವವಿದ್ಯಲಯ, ಸರಕಾರ ಮತ್ತು ಸರಕಾರೇತರ ಸಹಭಾಗಿತ್ವದೊಂದಿಗೆ ಕ್ಷೇತ್ರೋತ್ಸವ, ಕೃಷಿಕರು ಮತ್ತು ವಿಜ್ಞಾನಿ ಸಂವಾದ ಗೋಷ್ಠಿ, ಇನ್ನಿತರೆ ವಿಷಯಾಧಾರಿತ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ ರೈತರ ಹೊಲಗಳ ಭೇಟಿಯೂ ಸಹ ವಿಸ್ತರಣಾ ನಿರ್ದೇಶನಾಲಯದ ವ್ಯಾಪ್ತಿಗೆ ಒಳಪಡುತ್ತದೆ.

ಕೃಷಿ ವಿಜ್ಞಾನ ಕೇಂದ್ರ, ಕೋಲಾರ:
ಭಾರತೀಯ ಕೃಷಿ ಅನುಸಂಧಾನ ಪರಿಷತ್‌, ನವದೆಹಲಿಯು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ 6 ಡಿಸೆಂಬರ್‌ 2012 ರಂದು ಕೃಷಿ ವಿಜ್ಞಾನ ಕೇಂದ್ರ ಮಾಡಿ ಈ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮೊದಲ ಕೃಷಿ ವಿಜ್ಞಾನ ಕೇಂದ್ರವಾಗಿ ಕೋಲಾರ ಜಿಲ್ಲೆಯ ಟಮಕ ಫಾರ್ಮ್ದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಮುಂಚೂಣಿ ಪ್ರಾತ್ಯಕ್ಷಿತೆ, ಕ್ಷೇತ್ರ ಪ್ರಯೋಗ ಮತ್ತು ತರಬೇತಿ ಕೌಶಲ್ಯಾಧಾರಿತ ಕೃಷಿಯಲ್ಲಿ ಉತ್ಪಾದನೆ ಹೆಚ್ಚಿಸುವುದು ಈ ಕೃಷಿ ವಿಜ್ಞಾನ ಕೇಂದ್ರದ ಉದ್ದೇಶವಾಗಿದೆ.

ಜಿಲ್ಲಾ ಮಾಹಿತಿ/ಮಾರ್ಗದರ್ಶಕ ಕೇಂದ್ರ:
ನುರಿತ ವಿಜ್ಞಾನಿಗಳ ತಂಡಗಳನ್ನು ರಚಿಸಿ ರಾಜ್ಯ ಸರಕಾರದ ತೋಟಗಾರಿಕಾ ವಿಸ್ತರಣಾ ವಿಭಾಗ ಮತ್ತು ಇತರ ಅಭಿವೃದ್ಧಿ ಇಲಾಖೆಗಳಿಗೆ ಜಿಲ್ಲಾಮಟ್ಟದ ಯೋಜನೆಯನ್ನು ತಯಾರಿಸುವಲ್ಲಿ, ಆತ್ಮಾ ಸಂಸ್ಥೆಯೊಂದಿಗೆ ಸಹಕರಿಸಲು ಯೋಜಿಸಲಾಗುತ್ತದೆ. ಈ ತಂಡವು ಎಲ್ಲಾ ಸಮಸ್ಯೆಗಳಿಗೆ ಪರಿಹಾರ/ಸಲಹೆ ಸೂಚನೆಗಳನ್ನು ನೀಡುವಲ್ಲೂ ಸಹಕಾರಿಯಾಗುತ್ತದೆ. ಕೀಟ ಅಥವಾ ಸಸ್ಯ ರೋಗಗಳ ನಿಯಂತ್ರಣ, ವ್ಯವಸಾಯ ಪದ್ಧತಿಗಳನ್ನು ವಿವರಿಸಲು ತಂಡಗಳು ಸಹಕಾರಿಯಾಗುವುದು. ಅಷ್ಟೇ ಅಲ್ಲ ತೋಟಗಾರಿಕೆ ವಿಶ್ವವಿದ್ಯಾಲಯ ಕನ್ನಡವನ್ನು ಪ್ರೋತ್ಸಾಹಿಸಲು ಕನ್ನಡ ಪ್ರಸಾರಂಗ ವಿಭಾಗವನ್ನು ಆರಂಭಿಸುವ ಪ್ರಕ್ರಿಯ ಆರಂಭಿಸಿದೆ.

ಸಂಶೋಧನೆ
-ಸ್ನಾತಕೋತ್ತರ ವಿದ್ಯಾರ್ಥಿಗಳ ಸಂಶೋಧನೆ
-ಬೆಳೆಯಾಧಾರಿತ ಸಂಶೋಧನೆ ತೋಟಗಾರಿಕೆ ಸಂಶೋಧನಾ ಕೇಂದ್ರಗಳಲ್ಲಿ ಕೈಗೊಳ್ಳುವುದು.
-ರೈತರ ಸಾಂಪ್ರದಾಯಿಕ ಜ್ಞಾನ ಮತ್ತು ಪದ್ಧತಿಗಳ ಆಧಾರದ ಮೇಲೆ ಸಂಶೋಧನೆ ಕೈಗೊಳ್ಳುವುದು.
-ನಿಖರವಾದ ವಿಷಯಗಳ ಮೇಲೆ ಅತ್ಯುನ್ನತ ಮಟ್ಟದ ಸಂಶೋಧನೆ ಕೈಗೊಳ್ಳುವುದು.
-ಅಖೀಲ ಭಾರತ ಬೆಳೆಯಾಧಾರಿತ ಸಂಶೋಧನಾ ಕೇಂದ್ರಗಳಲ್ಲಿ ವಿಶೇಷ ಸಂಶೋಧನೆ ಕೈಗೊಳ್ಳುವುದು.

Advertisement

Udayavani is now on Telegram. Click here to join our channel and stay updated with the latest news.

Next