ಕಲಾದಗಿ: ಈ ಭಾಗದ ರೈತರ ಜೀವಜಲ ಮೂಲ ಘಟಪ್ರಭಾ ನದಿ ಬತ್ತಿ ಬರಿದಾಗಿದ್ದು, ನದಿ ಒಡಲು ಖಾಲಿ ಖಾಲಿಯಾಗಿ ಜನ ಜಾನುವಾರುಗಳಿಗೆ ಮುಂದಿನ ಬಿರು ಬೇಸಿಗೆ ಹೇಗೆ ಕಳೆಯುವುದು ಎನ್ನುವ ಆತಂಕ ಶುರುವಾಗಿದೆ. ಮೂರು ತಾಲೂಕಿನ ನದಿ ಪಾತ್ರದ ಹಲವಾರು ಗ್ರಾಮದ ಜನ ಜಾನುವಾರುಗಳಿಗೆ ಘಟಪ್ರಭಾ ನದಿಯೇ ಜೀವಾಳ. ಬೀಳಗಿ ತಾಲೂಕಿನ ಕಾತರಕಿ, ಕೊಪ್ಪ ನಿಂಗಾಪೂರು, ಕುಂದರಗಿ, ಅರಕೇರಿ ಸೇರಿದಂತೆ ಇನ್ನೂ ಹಲವು ಗ್ರಾಮಗಳು, ಮುಧೋಳ ತಾಲೂಕಿನ ಜುನ್ನೂರು, ಬಂಟನೂರು, ಚಿಕ್ಕಾಲಗುಂಡಿ, ಮಾಚಕನೂರು, ಚಿಕ್ಕೂರು ಸೇರಿದಂತೆ ಹಲವಾರು ಗ್ರಾಮ, ಬಾಗಲಕೋಟೆ ತಾಲೂಕಿನ ಉದಗಟ್ಟಿ, ಶಾರದಾಳ ಅಂಕಲಗಿ, ಕಲಾದಗಿ, ಸೇರಿದಂತೆ ಹಲವಾರು ಗ್ರಾಮಗಳಿಗೆ ಇದೇ ಮೂಲಾಧಾರ.
Advertisement
ವಾರದಿಂದ ಈ ಭಾಗದಲ್ಲಿನ ಕುರಿಗಾರರು ಮಧ್ಯಾಹ್ನದ ವೇಳೆ ಕುರಿ-ಮೇಕೆಗಳಿಗೆ ನೀರು ಕುಡಿಸಲು ನದಿ ಒಡಲಿನೊಳಗೆ ಹೊಕ್ಕು ನೀರಿಗಾಗಿ ಹುಡುಕಾಟ ನಡೆಸಿ ಅಲ್ಲೆಲ್ಲೋ ತೆಗ್ಗಿನಲ್ಲಿ ನಿಂತ ತುಸು ನೀರನ್ನು ಕುಡಿಸುತ್ತಿದ್ದಾರೆ. ಆ ತಗ್ಗುಗಳಲ್ಲಿನ ನೀರು ಬತ್ತಿ ಬರಿದಾಗುತ್ತಿವೆ. ನದಿ ಒಡಲು ಸಂಪೂರ್ಣ ಖಾಲಿ ಖಾಲಿಯಾಗಿ ಬಿರುಕು ಬಿಟ್ಟು ನೀರಿಗಾಗಿ ಬಾಯಿ ತೆರೆದುಕೊಂಡಂತೆ ಭಾಸವಾಗುತ್ತಿದೆ.
ಬಿಡಿಸಬೇಕು.
ಅರುಣ ಅರಕೇರಿ, ಆನಂದ ಅರಕೇರಿ, ಶಾರದಾಳ ರೈತರು
Related Articles
ಗಂಗಪ್ಪ ದೊಡ್ಡಮನಿ, ಅಂಕಲಗಿ, ಕುರಿಗಾಹಿ
Advertisement
ಘಟಪ್ರಭ ನದಿ ಒಡಲು ಬತ್ತಿ ಬರಿದಾಗುತ್ತಿರುವ ಬಗ್ಗೆ ಮಾಹಿತಿ ಇದೆ. ಜನಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಅಗತ್ಯ ಕ್ರಮ ವಹಿಸಲಾಗುತ್ತದೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳು ಸೇರಿದಂತೆ ನಾನೂ ಸಹಿತ ಸಂಬಂಧಿಸಿದ ಅಧಿಕಾರಿಗಳ ಜತೆ ಮಾತನಾಡಿ ನದಿಗೆ ನೀರು ಬಿಡಿಸುತ್ತಿದ್ದೇವೆ. ಹಿಡಕಲ್ ಜಲಾಶಯದಿಂದ ಫೆ.18ರಂದು ಘಟಪ್ರಭಾ ನದಿಗೆ ನೀರು ಬಿಡಿಸಲಾಗುತ್ತದೆ.ಜೆ.ಟಿ.ಪಾಟೀಲ, ಶಾಸಕರು, ಬೀಳಗಿ ಚಂದ್ರಶೇಖರ ಹಡಪದ