ಬಾಗಲಕೋಟೆ: ಕೋವಿಡ್ 2ನೇಅಲೆ ನಿಯಂತ್ರಣಕ್ಕಾಗಿ ಸರ್ಕಾರವೀಕೆಂಡ್ ಶನಿವಾರ ಮತ್ತು ರವಿವಾರಘೋಷಿಸಿದ ಕರ್ಫ್ಯೂಗೆ ಜಿಲ್ಲೆಯ ಜನರುಸಹಕಾರ ನೀಡಿದ್ದು, ಬಾಗಲಕೋಟೆನಗರವೂ ಸೇರಿದಂತೆ ಜಿಲ್ಲೆ ಲಾಕ್‌ಡೌನ್‌ಮಾದರಿಯಲ್ಲಿ ಸ್ತಬ್ಧವಾಗಿತ್ತು.
ಹೌದು, ಕೊರೊನಾ 2ನೇ ಅಲೆ ದಿನೇದಿನೇ ಹೆಚ್ಚುತ್ತಲೇ ಇದ್ದು, ಸರ್ಕಾರಹಲವಾರು ಕಟ್ಟುನಿಟ್ಟಿನ ಮಾರ್ಗಸೂಚಿಹೊರಡಿಸಿದೆ. ಅಗತ್ಯ ಹಾಗೂ ತುರ್ತುಸಂದರ್ಭ ಹೊರತುಪಡಿಸಿದರೆ,ಜಿಲ್ಲೆಯ ಜನರೂ, ಸರ್ಕಾರದ ಸೂಚನೆಗೆ ಧ್ವನಿಯಾಗಿ ಮನೆಯಲ್ಲಿಯೇ ಇದ್ದರು.
ವೀಕೆಂಡ್ ಕಪ್ಯೂì ಹಿನ್ನೆಲೆಯಲ್ಲಿಸರ್ಕಾರಿ ಕಚೇರಿ, ಅಗತ್ಯವಲ್ಲದವಸ್ತುಗಳ ಅಂಗಡಿಗಳು ಬಂದ್ ಇದ್ದವು.ನಗರದ ನಿತ್ಯದ ಜನನಿಬಿಡ ಸ್ಥಳವಾದವಲ್ಲಭಬಾಯಿ ವೃತ್ತ, ಬಸವೇಶ್ವರ ವೃತ್ತದಪ್ರದೇಶಗಳು ಸಂಪೂರ್ಣ ಬೀಕೋಎನ್ನುತ್ತಿದ್ದವು. ಕೆಲವರು ಅಗತ್ಯ ವಸ್ತುಗಳಪೂರೈಕೆಯ ಅಂಗಡಿಕಾರರೂ, ಸ್ವಯಂಪ್ರೇರಣೆಯಿಂದ ಅಂಗಡಿ ಬಂದ್‌ಮಾಡಿದ್ದರು.ಕಟ್ಟೆಚ್ಚರಕ್ಕೆ ಕ್ರಮ: 2ನೇ ಅಲೆಯ ಭೀಕರತೆನಿತ್ಯವೂ ಹೆಚ್ಚುತ್ತಿದ್ದು, ಸೋಂಕಿನಲಕ್ಷಣಗಳಿಲ್ಲದಿದ್ದರೂ ಹಲವರು ಹಲವುರೀತಿಯ ಸಮಸ್ಯೆ ಅನುಭವಿಸುತ್ತಿದ್ದಾರೆ.ಶನಿವಾರ ಸಂಜೆಯ ಬಾಗಲಕೋಟೆನಗರದ ವ್ಯಕ್ತಿಯೊಬ್ಬರಿಗೆಏಕಾಏಕಿ ಉಸಿರಾಟದ ತೊಂದರೆಕಾಣಿಸಿಕೊಂಡಿದ್ದು, ಕೂಡಲೇ ನಗರದಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಅವರ ಕೊರೊನಾ ತಪಾಸಣೆ ವರದಿಇನ್ನೂ ಬರಬೇಕಿದೆ.
ಎಲ್ಲೆಡೆ ಲಾಕ್‌ಡೌನ್ ವಾತಾವರಣ:ವೀಕೆಂಡ್ ಕಪ್ಯೂì ಹಿನ್ನೆಲೆಯಲ್ಲಿ ಇಡೀಬಾಗಲಕೋಟೆ ನಗರದಲ್ಲಿ ಲಾಕ್‌ಡೌನ್ ವಾತಾವರಣ ಸೃಷ್ಟಿಯಾಗಿತ್ತು.ಬಹುತೇಕರಿಗೆ ಕೊರೊನಾದ ಗಂಭೀರತೆಅರ್ಥ ಮಾಡಿಕೊಂಡಿದ್ದು, ವೀಕೆಂಡ್‌ಕಪ್ಯೂìಗೆ ಸಹಕಾರ ನೀಡಿದರು.
ಜತೆಗೆಅಗತ್ಯ ಕೆಲಸವಿಲ್ಲದ ಜನರಂತೂ ರಸ್ತೆಗೆಬರಲಿಲ್ಲ. ಜಿಲ್ಲೆಯಾದ್ಯಂತ ಪೊಲೀಸ್‌ರನಿಯೋಜನೆ ಮಾಡಲಾಗಿತ್ತು.105 ಹೊಸ ಪ್ರಕರಣ ದೃಢ: ಜಿಲ್ಲೆಯಲ್ಲಿಶನಿವಾರ 52 ಜನ ಕೋವಿಡ್‌ನಿಂದಗುಣಮುಖರಾಗಿ ನಿಗದಿತ ಆಸ್ಪತ್ರೆಗಳಿಂದಬಿಡುಗಡೆಯಾಗಿದ್ದಾರೆ. 105 ಜನರಿಗೆಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು15,325 ಕೋವಿಡ್ ದೃಢಪಟ್ಟಿದ್ದು, ಈಪೈಕಿ ಇಲ್ಲಿಯವರೆಗೆ ಒಟ್ಟು 14,466 ಜನಕೋವಿಡ್‌ನಿಂದ ಗುಣಮುಖರಾಗಿದ್ದಾರೆ.ಹೊಸದಾಗಿ ಬಾಗಲಕೋಟೆ 41 ಬಾದಾಮಿ9, ಜಮಖಂಡಿ 8, ಹುನಗುಂದ 18,ಮುಧೋಳ 23, ಬೀಳಗಿ 6 ಜನರಲ್ಲಿಸೋಂಕು ದೃಢಪಟ್ಟಿದೆ.
ಜಿಲ್ಲಾ ಕೋವಿಡ್ ಲ್ಯಾಬ್‌ನಲ್ಲಿಪರೀಕ್ಷಿಸಲಾಗುತ್ತಿದ್ದ 3718 ಸ್ಯಾಂಪಲ್‌ಗಳ ವರದಿ ಬರಬೇಕಿದೆ. ಜಿಲ್ಲೆಯಿಂದಇಲ್ಲಿಯವರೆಗೆ ಒಟ್ಟು 5,31,421ಸ್ಯಾಂಪಲ್‌ಗಳ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 5,11,778 ನೆಗೆಟಿವ್‌ಬಂದಿವೆ. ಇನ್ನು 717 ಜನ ಸೋಂಕಿತರುಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವರೆಗೆಸೋಂಕಿನಿಂದ 141 ಮೃತಪಟ್ಟಿದ್ದಾರೆ.