Advertisement

18ರಿಂದ 20ರವರೆಗೆ ಬಾಗಲಕೋಟೆ ಬಣ್ಣದೋಕುಳಿ

05:57 PM Mar 05, 2022 | Team Udayavani |

ಬಾಗಲಕೋಟೆ: ಹಳೆಯ ಬಾಗಲಕೋಟೆಯಲ್ಲಿ ಮುಳುಗಡೆಯಿಂದ ನವನಗರ-ವಿದ್ಯಾಗಿರಿಗೆ ಸ್ಥಳಾಂತರಗೊಂಡ ಜನರಿಗಾಗಿ ಒಂದು ದಿನ ಹೋಳಿಹಬ್ಬದಂಗವಾಗಿ ಬಣ್ಣದಾಟ ನಡೆಸಬೇಕೆಂಬ ಆಶೆ ಈ ವರ್ಷ ಈಡೇರಲಿದೆ. ಮಾ.18ರಂದು ನವನಗರ ಮತ್ತು ವಿದ್ಯಾಗಿರಿಯ ಜನರಿಗಾಗಿ ಒಂದು ದಿನ ಬಣ್ಣದಾಟ ನಡೆಯಲಿದೆ. ಈ ಕುರಿತು ಬಾಗಲಕೋಟೆ ಹೋಳಿ ಆಚರಣಾ ಸಮಿತಿ ಅ ಧಿಕೃತವಾಗಿ ಘೋಷಿಸಿದೆ.

Advertisement

ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಕಳಕಪ್ಪ ಬಾದವಾಡಗಿ, ಸಂಘಟನಾ ಕಾರ್ಯದರ್ಶಿ ಸಂಜೀವ ವಾಡ್ಕರ, ಹಿರಿಯ ಸದಸ್ಯ ಜಯಂತ ಕುರಂದವಾಡ, ದುಂಡಪ್ಪ ಏಳೆಮ್ಮಿ, ಶಿವಕುಮಾರ ಮೇಲಾಡ ಮುಂತಾದವರು ವಿದ್ಯಾಗಿರಿ-ನವನಗರ ಜನರಿಗಾಗಿ ಮಾ.18ರಂದು ಬೆಳಗ್ಗೆ 9:30ಕ್ಕೆ ಬಣ್ಣದ ಬಂಡಿಗಳು ಆರಂಭಗೊಳ್ಳಲಿವೆ. ನವನಗರ ಬಸವೇಶ್ವರ ಬ್ಯಾಂಕ್‌ನಿಂದ ಒಂದು ಮಾರ್ಗದಲ್ಲಿ ಬಂಡಿ ಬಂದರೆ, ವಿದ್ಯಾಗಿರಿಯ ಕಡೆಯಿಂದ
ಇನ್ನೊಂದು ಬಂಡಿ ಮಾರ್ಗ ಬರಲಿವೆ. ಈ ಎರಡೂ ಮಾರ್ಗದಿಂದ ಬರುವ ಬಂಡಿಗಳು ನಗರಸಭೆ ಹತ್ತಿರ ಎದುರುಗೊಳ್ಳಲಿದ್ದು, ಅಲ್ಲಿ ಬಣ್ಣದಾಟದ ಯುದ್ಧ ನಡೆಯಲಿದೆ ಎಂದು ವಿವರಿಸಿದರು.

ಪ್ರತಿವರ್ಷ ಹುಬ್ಬಾ ನಕ್ಷತ್ರದಂದು ಹೋಳಿ ಆಚರಣೆ ಆರಂಭಿಸಲಾಗುತ್ತಿದೆ. ಈ ವರ್ಷ ಮಾ.16ರಂದು ರಾತ್ರಿ 11:45ಕ್ಕೆ ಹೋಳಿ ಹಬ್ಬ ಉದ್ಘಾಟನೆ ನಡೆಯಲಿದೆ. ಮಾ. 18ರಿಂದ 20ರ ವರೆಗೆ ಬಣ್ಣದಾಟ ನಡೆಯಲಿದೆ. ಹಿಂದೆ ಬಣ್ಣದಾಟ ಬಂದರೆ ಇಲ್ಲಿನ ಜನರು ಪ್ರವಾಸಕ್ಕೆ ತೆರಳುತ್ತಿದ್ದರು. ಅದನ್ನು ತಪ್ಪಿಸಲು ನಮ್ಮೂರು ನಮ್ಮ ರಂಗು ಹೆಸರಿನಲ್ಲಿ ಬಾಗಲಕೋಟೆ ಹಬ್ಬ ತಂಡದಿಂದ ರೇನ್‌ ಡ್ಯಾನ್ಸ ಸಹಿತ ಹಲವು ವಿಶೇಷ ಕಾರ್ಯಕ್ರಮ ನಡೆಯುತ್ತಿದ್ದು, ಪ್ರವಾಸಕ್ಕೆ ಹೋಗುವ ಜನರು ಕಡಿಮೆಯಾಗಿದ್ದಾರೆ. ಪ್ರತಿಯೊಬ್ಬರೂ ಬಣ್ಣದ ಹಬ್ಬದಲ್ಲಿ ಮಿಂದೇಳಬೇಕು ಎಂದು ತಿಳಿಸಿದರು.

ಇಲ್ಲಿನ ಹೋಳಿ ಆಚರಣೆಗೆ ಕಳೆದ ವರ್ಷ ಅರವಿಂದ ಲಿಂಬಾವಳಿ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದ 10 ಲಕ್ಷ ಅನುದಾನ ನೀಡಿದ್ದಾರೆ. ಆ ಅನುದಾನ ಮರಳಿ ಹೋಗಿದೆ ಎಂಬ ಮಾಹಿತಿ ಇದ್ದು, ಕೂಡಲೇ ಅದನ್ನು ಮರಳಿ ಪಡೆದು, ಈ ಆಚರಣೆಗೆ ಸರ್ಕಾರವೂ ಸಾಥ್‌ ನೀಡಬೇಕು ಎಂದು ಒತ್ತಾಯಿಸಿದರು.

ಹೋಳಿ ಆಚರಣೆ ಸಮಿತಿಯ ರಾಜು ನಾಯಕ ಉಪಸ್ಥಿತರಿದ್ದರು. ಬಾಗಲಕೋಟೆ ಐತಿಹಾಸಿಕ ಹೋಳಿ ಹಬ್ಬದ ಪ್ರಯುಕ್ತ ಶ್ರೀ ಮಾಧವ ಸೇವಾಕೇಂದ್ರದ ಆಶ್ರಯದಲ್ಲಿ ಹಲಗೆಮೇಳ ಸ್ಪರ್ಧೆಯನ್ನು ಮಾ.12ರಂದು ಸಂಜೆ 7ಕ್ಕೆ ನಗರದ ಬಸವೇಶ್ವರ ವೃತ್ತದ ಹೊಳೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳಲ್ಲಿ 13 ಜನ ಕಲಾವಿದರು ಇರಬೇಕು, ಹಲಗೆ, ಖಣಿ, ದಿಮ್ಮು, ಝುಮರಿ, ಚಳಂ,ಡಗ್ಗಾ ವಾದ್ಯಗಳು ಜೊತೆಗೆ ಸಮವಸ್ತ್ರ, ಕಡ್ಡಾಯ, ನಿರ್ಣಾಯಕರ ನಿರ್ಣಾಯವೇ ಅಂತಿಮ.

Advertisement

ಸ್ಪರ್ಧೆಯಲ್ಲಿ ಭಾಗವಹಿಸುವ ತಂಡದವರು 500 ರೂ. ಶುಲ್ಕ ಪಾವತಿಸಿ ನೋಂದಾವಣಿಗೆ ಭರತ ಲೋಖಂಡೆ-8123191910, ಪ್ರಭು ಇಂಡಿ ಮೊ: 9164036336, ಕೇಶವ ಕುಲಕರ್ಣಿ ಮೊ: 9538325880, ಶಿವಾನಂದ ಮಲ್ಲಾಪುರ ಮೊ: 9880661910 ಅವರನ್ನು ಸಂಪರ್ಕಿಸಬೇಕೆಂದು ಪ್ರಕಟಣೆ ಮೂಲಕ ಅಧ್ಯಕ್ಷ ನಾಗರಾಜ ಷ. ಹದ್ಲಿ, ಕಾರ್ಯದರ್ಶಿ ಅರವಿಂದ ನಾವಲಗಿ ವಿನಂತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next