Advertisement

ಮಧುವಣಗಿತ್ತಿಯಂತೆ ಸಖೀ ಸಿಂಗಾರ

03:56 PM Apr 24, 2019 | Naveen |

ಹುನಗುಂದ: ಕೆಲವೊಂದು ಕಡೆಗೆ ಕೈಕೊಟ್ಟ ಮತಯಂತ್ರ, ಕೆಲಕಾಲ ಮತದಾನದ ಸ್ಥಗಿತ. ರಾಜಕೀಯ ಪಕ್ಷಗಳ ಕಾರ್ಯಕರ್ತರ ಮಧ್ಯೆಮಾತಿನ ಚಕಮಕಿ, ಸಣ್ಣ, ಪುಟ್ಟ ಗೊಂದಲದ ನಡುವೆ ಎರಡನೆಯ ಹಂತದ ಲೋಕಸಭೆಯ ಮತದಾನ ತಾಲೂಕಿನಾಧ್ಯಂತ ಶಾಂತಿಯುತವಾಗಿ ಬಿರುಸಿನಿಂದ ಮತದಾನ ನಡೆಯಿತು. ಕ್ಷೇತ್ರದ ಒಟ್ಟು 254 ಮತಗಟ್ಟೆಗಳ ಮತ ಪ್ರಮಾಣ ಸಂಜೆ 5ರ ವೇಳೆಗೆ ಶೇ. 62.21 ರಷ್ಟು ಮತದಾನವಾಯಿತು. ಭವಿಷ್ಯದ ನಾಯಕರ ನಿರ್ಧಾರ ಮತದಾರ ಪ್ರಭುಗಳು ಮತಯಂತ್ರದಲ್ಲಿ ಭದ್ರಪಡಿಸಿದರು.

Advertisement

ಬೆಳಗ್ಗೆ 7 ರಿಂದ 11ಗಂಟೆಯವರಿಗೆ ಬಿರುಸಿನಿಂದ ಮತದಾನ ನಡೆದರೆ ಮದ್ಯಾಹ್ನ ಬೇಸಿಗೆ ಬಿರು ಬಿಸಿಲಿಗೆ ಬೆಂದ ಮತದಾರರು ಮನೆಯಿಂದ ಹೊರ ಬರಲು ಹಿಂದೇಟು ಹಾಕಿದ್ದರಿಂದ ಮತದಾನ ಮಂದಗತಿಯಲ್ಲಿ ಸಾಗಿತ್ತು. ಮದ್ಯಾಹ್ನ 3ರ ನಂತರ ಮತದಾರರು ತಮ್ಮ ಹಕ್ಕು ಚಲಾಯಿಸಲು ದೌಢಾಯಿಸಿ ಮತಗಟ್ಟೆಯ ಕಡೆಗೆ ಆಗಮಿಸಿದ್ದರಿಂದ ಮತದಾನ ಮತ್ತಷ್ಟು ವೇಗ ಪಡೆದುಕೊಂಡಿತ್ತು.

ಕೈಕೊಟ್ಟ ಮತಯಂತ್ರಗಳು: ತಾಲೂಕಿನ ಇದ್ದಲಗಿ, ಹುನಗುಂದ ಪಟ್ಟಣದ ವಿದ್ಯಾನಗರ ಶಾಲೆಯ ಮತಗಟ್ಟೆ ಸಂಖ್ಯೆ 91 ಸೇರಿದಂತೆ ಹಲವು ಕಡೆಗಳಲ್ಲಿ ಮತಯಂತ್ರ ಕೈಕೊಟ್ಟದ್ದರಿಂದ 30ನಿಮಿಷ ಮತದಾನ ಸ್ಥಗಿತಗೊಂಡಿತ್ತು. ಮತಯಂತ್ರ ಸರಿಪಡಿಸಿದ ನಂತರ ಮತದಾನದ ಕಾರ್ಯ ಶುರುವಾಯಿತು.

ಸಖೀ ಮತಗಟ್ಟೆ: ಈ ಬಾರಿ ಲೋಕಸಭೆಯ ಚುನಾವಣೆಯಲ್ಲಿ ಹುನಗುಂದ ಕ್ಷೇತ್ರದಲ್ಲಿ ಎರಡು ಕಡೆ ಸಖೀ ಮತಗಟ್ಟೆ ಸ್ಥಾಪಿಸಲಾಗಿದ್ದು, ಅದರಲ್ಲಿ ಪಟ್ಟಣದ ಕೇಂದ್ರ ಶಾಲೆಯ ಮತಗಟ್ಟೆ ಸಂಖ್ಯೆ 78ರಲ್ಲಿ ಸಖೀ ಮತಗಟ್ಟೆ ಮಧುವಣಗಿತ್ತಿಯಂತೆ ಸಿಂಗರಿಸಿದ್ದರಿಂದ ಅಲ್ಲಿನ ಮತದಾರರು ಸಂತಸದಿಂದ ಮತ ಚಲಾಯಿಸಿದರು.

ಮತ ಪ್ರಮಾಣ: ಪಟ್ಟಣದ 18 ಮತಗಟ್ಟೆಗಳಲ್ಲಿ ಅತಿ ತುರಿಸಿನ ಮತದಾನ ನಡೆಯಿತು. ನಗರದ ಒಟ್ಟು 16,034 ಮತದಾರರಲ್ಲಿ 5 ಗಂಟೆಯ ಹೊತ್ತಿಗೆ 9,636 ಜನರು ಮತದಾನ ಮಾಡಿದ್ದು, 4,718 ಪುರುಷರು ಮತದಾನ, 4918 ಮಹಿಳೆಯರು ಮತದಾರರು ತಮ್ಮ ಮತವನ್ನು ಚಲಾಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next