Advertisement
ಮುಂದಿನ ದಿನಗಳಲ್ಲಿ ಕೃಷ್ಣಾ ನದಿಯಲ್ಲಿ ಮತ್ತಷ್ಟು ನೀರು ಏರಿಕೆಯಾದರೆ ಅಸ್ಕಿ ಗ್ರಾಮ ನಡುಗಡ್ಡೆಯಾಗಲಿದೆ ಎಂಬ ಆತಂಕ ಜನರಲ್ಲಿದೆ. ಅದಕ್ಕಾಗಿ ಇಲ್ಲಿಯ ಜನರ ಸಮೀಪದ ಆಸಂಗಿ ಗ್ರಾಮದ ಸರ್ಕಾರಿ ಶಾಲೆಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಗ್ರಾಮದಲ್ಲಿ ಅಂದಾಜು 415ಕ್ಕೂ ಹೆಚ್ಚು ಕುಟುಂಬಗಳ 3000ಕ್ಕೂ ಹೆಚ್ಚು ಜನರು, 485ಕ್ಕೂ ಹೆಚ್ಚು ಜಾನುವಾರುಗಳಿವೆ. ಗ್ರಾಮದ ಒಟ್ಟು 327 ಹೆಕ್ಟೇರ್ ಕೃಷಿ ಭೂಮಿ, 1 ಪ್ರಾಥಮಿಕ ಶಾಲೆ ಮತ್ತು ಎರಡು ಅಂಗನವಾಡಿ ಕೇಂದ್ರಗಳಿಗೆ ಹಾನಿಯಾಗುವ ಸಾಧ್ಯತೆ ಇದೆ.
ನದಿ ತೀರದಲ್ಲಿ ಬೃಹತ್ ಪ್ರಮಾಣದ ಮೊಸಳೆಗಳು ಕಂಡು ಬಂದಿದೆ ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ತಿಳಿಸಿದರು. ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ಅಸ್ಕಿ ಗ್ರಾಮದ ಜನರು ತಾವು ಗುಡ್ಡೆ ಹಾಕಿದ ಕೊಟ್ಟಿಗೆ ಗೊಬ್ಬರವನ್ನು ಬೇರೆಡೆಗೆ ಸ್ಥಳಾಂತರಿಸುತ್ತಿರುವುದು ಕಂಡು ಬಂದಿತು.