Advertisement
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಬರ, ಕುಡಿಯುವ ನೀರು, ಕೃಷಿ, ನಗರಾಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.
Related Articles
Advertisement
ಪಶುಸಂಗೋಪನಾ ಇಲಾಖೆಯಲ್ಲಿ ಪ್ರತಿ ಬಾರಿಯು ಹೊರಜಿಲ್ಲೆಗಳಿಂದ ಮೇವು ತರಿಸಿಕೊಳ್ಳಲಾಗುತ್ತಿತ್ತು. ಇನ್ನು ಮುಂದೆ ಈ ಭಾಗದ ರೈತರಲ್ಲೂ ಸಹ ಮೇವು ಖರೀದಿಸುವ ಪ್ರಕ್ರಿಯೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ನೆರೆಯ ಜಿಲ್ಲೆಗಳಾದ ರಾಯಚೂರಿನ ಸಿಂಧನೂರು, ಲಿಂಗಸುಗೂರು, ವಿಜಯಪುರ ಜಿಲ್ಲೆಗಳಿಂದ ಮೇವು ತರಲಾಗುತ್ತಿತ್ತು. ಇಲ್ಲಿಯೂ ಸಹ ರೈತರು ಮೇವು ಬೆಳೆಯುತ್ತಿದ್ದು, ಈ ಭಾಗದ ರೈತರು ಸಹ ಸರಬರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳಬಹುದಾಗಿದೆ ಎಂದು ಹೇಳಿದರು.
ಪ್ರಸಕ್ತ ಸಾಲಿನ ಸೆಪೆrಂಬರ್ ತಿಂಗಳದಲ್ಲಿ ಮೇವು ಸಮೀಕ್ಷೆ ಕೈಗೊಳ್ಳುವಂತೆ ಕಾರ್ಯದರ್ಶಿಗಳು ಸೂಚಿಸಿ ದರು. ಜಿಲ್ಲೆಯ ಎಲ್ಲಾ ತಾಲೂಕಿನ ತಹಶೀಲ್ದಾರರು ಕೃಷಿ ಅಧಿಕಾರಿಗಳಿಗೆ ಹೊಬಳಿವಾರು ಮೇವು ಸಮೀಕ್ಷೆಯಲ್ಲಿ ಪಾಲ್ಗೋಳುವಂತೆ ತಿಳಿಸಿದ ಅವರು, ಸಾವಿರಾರು ರೈತರಿಗೆ ಮೇವಿನ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. ಆಸಕ್ತ ರೈತರಿಂದ ಮೇವು ಖರೀದಿಸಿ ಎಂದರು.
ದನಕರುಗಳಿಗಾಗಿ ನಿರ್ಮಿಸಿದ ನೀರಿನ ತೊಟ್ಟಿಗಳ ಸ್ಥಿತಿಗತಿಯನ್ನು ಆಯಾ ಅಧಿಕಾರಿಗಳು ಪರಿಶೀಲಿಸಿ ರಿಪೇರಿ ಇದ್ದಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಸರಿಪಡಿಸುವಂತೆ ಕಾರ್ಯದರ್ಶಿಗಳು ತಿಳಿಸಿದರು.
ಗ್ರಾಮೀಣ ಹಾಗೂ ನಗರ ಕುಡಿಯುವ ನೀರು ಸರಬರಾಜಿಗೆ ಸಾಕಷ್ಟು ಅನುದಾನ ಲಭ್ಯವಿದ್ದು ಬಹು ಹಳ್ಳಿ ಯೋಜನೆ ಯಶಸ್ವಿಗೊಳಿಸಬೇಕು. ನದಿ ಪಾತ್ರದಲ್ಲಿರುವ ಯೋಜನೆಗಳಲ್ಲಿ ಸಮಸ್ಯೆಯಾಗದಂತೆ ಮಳೆಗಾಲದಲ್ಲಿಯೇ ನೀರು ಸಂಗ್ರಹ ಹಾಗೂ ಪಂಪ ಸ್ಥಿತಿಗತಿ ಪರಿಶೀಲಿಸಬೇಕು ಎಂದರು.
ಬಹುಹಳ್ಳಿ ನೀರಿನ ಯೊಜನೆಯನ್ನು ಸರಿಯಾಗಿ ನಿರ್ವಹಿಸಬೇಕು. ಜಿಲ್ಲೆಯಲ್ಲಿ 36 ಬಹುಹಳ್ಳಿ ಯೋಜನೆ ಪೈಕಿ ನಾಗರಾಳ, ಹಾಗೂ ಮೆಟಗುಡ್ಡ ಯೊಜನೆಗಳು ವಿಫಲವಾಗಿವೆ. ಎರಡು ಯೋಜನೆಗಳು ಪ್ರಗತಿಯಲ್ಲಿದ್ದು. 32 ಯೋಜನೆಗಳು ಚಾಲ್ತಿಯಲ್ಲಿದೆ. ವಿಫಲ ಹಾಗೂ ಅಪೂರ್ಣ ಯೋಜನೆ, ಜಲ ಮಟ್ಟದ ಜಾಕ್‌ವೆಲ್ ಹಾಗೂ ಸರಬರಾಜು ಪ್ಲಾನ್‌ಗಳನ್ನು ಸರಿಯಾಗಿ ನಿರ್ವಹಿಸುವಂತೆ ಸೂಚಿಸಿದರು.
ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿ ಒಟ್ಟು 79.50 ಕೋಟಿ ರೂ. ಪ್ರಸ್ತಾವನೆ ಸರಕಾರಕ್ಕೆ ಕಳುಹಿಸಲಾಗಿದೆ. ಈ ಪೈಕಿ 30 ಕೋಟಿ ಬಹುಹಳ್ಳಿ ಯೋಜನೆ ಹಾಗೂ 9.90 ಕೋಟಿಯನ್ನು ಸಮಸ್ಯಾತ್ಮಕ ಗ್ರಾಮಗಳಲ್ಲಿ ಕೈಗೊಳ್ಳಲಾಗುವುದು ಎಂದು ಜಿಪಂ ಸಿಇಒ ಗಂಗೂಬಾಯಿ ಮಾನಕರ್ ತಿಳಿಸಿದರು.
ಕುಡಿಯುವ ನೀರಿನ 15 ನಗರ ಸ್ಥಳಿಯ ಸಂಸ್ಥೆಗಳಲ್ಲಿ 5.13 ಕೋಟಿ ರೂ. ವೆಚ್ಚದಲ್ಲಿ 162 ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದು ನಗರಾಭಿವೃದ್ಧಿ ಅಧಿಕಾರಿ ಸಭೆಗೆ ತಿಳಿಸಿದರು.
ನರೇಗಾ ಯೋಜನೆಯಡಿಯಲ್ಲಿ ಬಾಗಲಕೋಟೆ 5ನೇ ಸ್ಥಾನದಲ್ಲಿದ್ದು ಉದ್ಯೋಗ ಖಾತ್ರಿಯಡಿ ಸುಸ್ಥಿರ ಕಾಮಗಾರಿ ಕೈಗೊಂಡು ಚೆಕ್ ಡ್ಯಾಂ ಬಂಡ್ ಹಾಗೂ ನೀರು ಸಂಗ್ರಹಣಾ ಕಾಮಗಾರಿಗಳ ಸ್ಥಿತಿಗತಿಯನ್ನು ಅಧಿಕಾರಿಗಳು ಆಗಾಗ ಪರಿಶೀಲಿಸುವಂತೆ ತಿಳಿಸಿದರು.