Advertisement

ರೊಳ್ಳಿ ಜನರ ಕಿಚ್ಚು; ಬಾಡಗಂಡಿಗಿಲ್ಲ ಅಧಿಕಾರ ಭಾಗ್ಯ; ಐದು ವರ್ಷದಿಂದ ಗೆದ್ದವರಿಗಿಲ್ಲ ಅಧಿಕಾರ

11:01 AM Dec 29, 2020 | sudhir |

ಬಾಗಲಕೋಟೆ: ಗ್ರಾಮ ಪಂಚಾಯತ್ ಕೇಂದ್ರ ಸ್ಥಾನಕ್ಕಾಗಿ ನಡೆದ ಹೋರಾಟ ಐದು ವರ್ಷಗಳಿಂದಲೂ ಮುಂದುವರಿದಿದೆ. ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲರ ಹುಟ್ಟೂರು ಬಾಡಗಂಡಿಯಲ್ಲಿ ಪಂಚಾಯತ್ ಸದಸ್ಯರಾಗಿ
ಗೆದ್ದವರಿಗೆ ಅಧಿಕಾರ ಭಾಗ್ಯ ಸಿಗುತ್ತಿಲ್ಲ.

Advertisement

ಹೌದು, ಬೀಳಗಿ ತಾಲೂಕಿನ ಬಾಡಗಂಡಿ, ಬಾದಾಮಿ ತಾಲೂಕಿನ ಕೆಂದೂರ ಗ್ರಾಪಂಗಳು 2015ರ ಗ್ರಾಪಂ ಪುನರ್‌ ವಿಂಗಡಣೆಯಲ್ಲಿ ಹೊಸ ಗ್ರಾಪಂ ಕೇಂದ್ರ ಸ್ಥಾನಮಾನ ಹೊಂದಿದ ಸಂಭ್ರಮದಲ್ಲಿದ್ದರೂ ಅವುಗಳಿಗೆ ಅಧಿಕಾರ ಭಾಗ್ಯ ದೊರೆಯುತ್ತಿಲ್ಲ. ಕಾರಣ, ಈ ಗ್ರಾಪಂನಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಬೇಕಾದ ಕೋರಂ ಅಭಾವ.

ನಾಯಕರ ಊರಿದು: ಬೀಳಗಿ ತಾಲೂಕಿನ ಬಾಡಗಂಡಿ, ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲರ ಹುಟ್ಟೂರು. ರಾಜ್ಯದಲ್ಲೇ ತಮ್ಮೂರು ಮಾದರಿ ಗ್ರಾಮ ಮಾಡಲು ಪಾಟೀಲರು ಸಾಕಷ್ಟು ಶ್ರಮಪಟ್ಟಿದ್ದಾರೆ. ಅವರು ಐಟಿ-ಬಿಟಿ ಸಚಿವರಾಗಿದ್ದಾಗ ಇಡೀ ಗ್ರಾಮವನ್ನು ಸೌರ ಬೆಳಕು ಯೋಜನೆಯಡಿ ಆಯ್ಕೆ ಮಾಡಿದ್ದರು. ಜತೆಗೆ ಡಿಜಿಟಲ್‌ ಗ್ರಾಮಕ್ಕಾಗಿಯೂ ಸಾಕಷ್ಟು ಕೆಲಸ ಮಾಡಿದ್ದಾರೆ. ಗ್ರಾಪಂ ಪುನರ್‌ ವಿಂಗಡಣೆಯ ವೇಳೆ ತಮ್ಮೂರಿಗೆ ಗ್ರಾಪಂ ಕೇಂದ್ರ ಸ್ಥಾನಮಾನ ಕಲ್ಪಿಸುವಲ್ಲಿಯೂ ಅವರ ಶ್ರಮ ಮರೆಯುವಂತಿಲ್ಲ.

ಆದರೆ, ಬಾಡಗಂಡಿ ಗ್ರಾಪಂ ವ್ಯಾಪ್ತಿಗೆ ಬರುವ ರೊಳ್ಳಿ ಗ್ರಾಮಸ್ಥರ ಒಗ್ಗಟ್ಟಿನ ಹೋರಾಟದಿಂದ ಈ ಬಾರಿಯೂ ಗ್ರಾಪಂ ಚುನಾವಣೆ ಬಹಿಷ್ಕರಿಸಲಾಗಿದೆ. ಹೀಗಾಗಿ ಬಾಡಗಂಡಿಗೆ ಆಯ್ಕೆಯಾದ ಸದಸ್ಯರು ಗೆದ್ದ ಖುಷಿಯಲ್ಲಿದ್ದರೂ ಅವರಿಗೆ ಅಧಿಕಾರ ವಹಿಸಿಕೊಳ್ಳುವ ಅವಕಾಶ ದೊರೆಯಲ್ಲ.

ಇದನ್ನೂ ಓದಿ:ಬೆಂಗಳೂರಿಗೆ ಬಂದ ಮೂರವರಲ್ಲಿ ಬ್ರಿಟನ್ ರೂಪಾಂತರಿ ಕೋವಿಡ್ ವೈರಸ್ ಪತ್ತೆ!

Advertisement

ಕಳೆದ ಐದು ವರ್ಷಗಳ ಅವಧಿಯಲ್ಲೂ ಬಾಡಗಂಡಿ ಗ್ರಾಪಂನ ಬಾಡಗಂಡಿಯ 11 ಹಾಗೂ ರೊಳ್ಳಿ ಪುನರ್‌ ವಸತಿ ಕೇಂದ್ರದ 7 ಸ್ಥಾನಕ್ಕೆ ಚುನಾವಣೆ ಘೋಷಣೆ ಮಾಡಿದ್ದರೂ ಬಾಡಗಂಡಿ 11 ಸ್ಥಾನಕ್ಕೆ ಮಾತ್ರ ಆಯ್ಕೆ ನಡೆದಿತ್ತು. ರೊಳ್ಳಿಯ ಜನರು, ತಮ್ಮೂರಿಗೆ ಗ್ರಾಪಂ ಕೇಂದ್ರ ಸ್ಥಾನ ನೀಡುವಂತೆ ಆಗಲೂ ಚುನಾವಣೆ ಬಹಿಷ್ಕರಿಸಿದ್ದರು. ಈ ಬಾರಿಯೂ ಬಹಿಷ್ಕಾರ ಮುಂದುವರಿದಿದ್ದು, ರೊಳ್ಳಿಯ 7 ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸಿಲ್ಲ.

ಗೆದ್ದವರಿಗಿಲ್ಲ ಅಧಿಕಾರ ಭಾಗ್ಯ: ಪಂಚಾಯತ್‌ ರಾಜ್‌ ಕಾಯ್ದೆ ಪ್ರಕಾರ, ಒಂದು ಗ್ರಾ.ಪಂ.ನ ಒಟ್ಟು ಸ್ಥಾನಗಳಲ್ಲಿ ಒಂದರ 3ನೇ ಭಾಗದಷ್ಟು ಸದಸ್ಯರಿರಬೇಕು. ಆಗ ಕೋರಂ ಪೂರ್ಣಗೊಂಡು ಆಡಳಿತ ಮಂಡಳಿ ರಚನೆ ಮಾಡಬಹುದು. ಬಾಡಗಂಡಿ, ಗ್ರಾಪಂನ
ಒಟ್ಟು 18 ಸ್ಥಾನಗಳಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಆಗಬೇಕಾದರೆ ಕನಿಷ್ಠ 13 ಸದಸ್ಯರ ಬಲ ಇರಬೇಕು.

– ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next