Advertisement

ಕೋವಿಡ್‌ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಿ

10:42 PM May 07, 2021 | Team Udayavani |

ಬಾದಾಮಿ: ಜಿಲ್ಲೆಯ ಎಲ್ಲ ಕೋವಿಡ್‌ ರೋಗಿಗಳಿಗೆ ರೆಮ್‌ಡೆಸಿವಿಯರ್‌ ಮತ್ತು ಆಕ್ಸಿಜನ್‌ ಕೊರತೆಯಾಗದಂತೆ ಕ್ರಮ ತೆಗೆದುಕೊಳ್ಳುವ ಮೂಲಕ ಕೋವಿಡ್‌ ತಡೆಗಟ್ಟಲು ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ, ಶಾಸಕ ಸಿದ್ದರಾಮಯ್ಯ ಅ ಧಿಕಾರಿಗಳಿಗೆ ಸೂಚಿಸಿದರು.

Advertisement

ಗುರುವಾರ ಜಿಲ್ಲೆಯ ಅಧಿ  ಕಾರಿಗಳೊಂದಿಗೆ ವೀಡಿಯೋ ಕಾನ್‌#ರೆನ್ಸ್‌ ಮೂಲಕ ಸಭೆ ನಡೆಸಿ ಕೋವಿಡ್‌ ಎರಡನೇ ಅಲೆಯ ಪೂರ್ಣ ಮಾಹಿತಿ ಪಡೆದರು. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಕೋವಿಡ್‌ ರೋಗಿಗಳು ಹಾಗೂ ಅವರಿಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಲು ಸೂಚಿಸಿದರು.

ಜಿಲ್ಲಾಧಿ ಕಾರಿ ಡಾ| ಕೆ.ರಾಜೇಂದ್ರ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಇದುವರೆಗೂ 19540 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 3287 ಸಕ್ರಿಯ ಪ್ರಕರಣಗಳಾಗಿವೆ. ಜಿಲ್ಲಾಸ್ಪತ್ರೆಯಲ್ಲಿ 437, ಖಾಸಗಿ ಆಸ್ಪತ್ರೆಯಲ್ಲಿ 813 ಬೆಡ್‌ ಸೌಲಭ್ಯವಿದೆ. ಆದರೆ, ಆಕ್ಸಿಜನ್‌, ರೆಮ್‌ಡಿಸಿವಿಯರ್‌ ಕೊರತೆ ಕಂಡು ಬಂದಿದೆ. ಜಿಲ್ಲೆಯಲ್ಲಿ 171 ಐಸಿಯು, 93 ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ 30 ಜನರು ಮೃತಪಟ್ಟಿದ್ದಾರೆ. ಜಿಲ್ಲೆಗೆ ಪ್ರತಿ ದಿನ 15 ಕೆಎಲ್‌ ಆಕ್ಸಿಜನ್‌ ಅವಶ್ಯಕತೆ ಇದ್ದು, ಈಗ 7.5 ಕೆಎಲ್‌ ಲಭ್ಯವಿದೆ ಎಂದು ತಿಳಿಸಿದರು.

ಬಾದಾಮಿ ತಾಲೂಕಿನಲ್ಲಿ ಇಲ್ಲಿಯವರೆಗೆ 2528 ಜನರಿಗೆ ಸೋಂಕು ತಗುಲಿದ್ದು, ಇದರಲ್ಲಿ 545 ಸಕ್ರಿಯ ಪ್ರಕರಣಗಳಿವೆ. ಬಾದಾಮಿ ನಗರದ ಎರಡು ಖಾಸಗಿ ಆಸ್ಪತ್ರೆಯಲ್ಲಿ 41 ರೋಗಿಗಳು ಆಕ್ಸಿಜನ್‌ ಘಟಕದಲ್ಲಿ ದಾಖಲಾಗಿದ್ದಾರೆ. ಜಿಲ್ಲೆಯಲ್ಲಿ ಆಕ್ಸಿಜನ್‌ ಕೊರತೆ ಇಲ್ಲ. ಬೇರೆ ನಗರಗಳಿಂದ ಗುಳೆ ಬಂದ 760 ಜನರಲ್ಲಿ 607 ಜನರಲ್ಲಿ ಕೋವಿಡ್‌ ಪರೀಕ್ಷೆ ಮಾಡಲಾಗಿದ್ದು, 12 ಜನರಿಗೆ ಕೋವಿಡ್‌ ರೋಗ ಬಂದಿದೆ. ಗುಳೇ ಬಂದವರನ್ನು ಗುರುತಿಸಿ ಸ್ಥಳೀಯ ಶಾಲೆಯಲ್ಲಿ ಕ್ವಾರ್‌ಂಟೈನ್‌ ಮಾಡಲು ಯೋಜನೆ ಮಾಡಲಾಗಿದೆ. ಒಟ್ಟು ಬಾದಾಮಿಯಲ್ಲಿ 4 ಮತ್ತು ಗುಳೇದಗುಡ್ಡದಲ್ಲಿ 3 ಜನರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಗೆ ಪ್ರತಿ ದಿನ 13 ಕೆಎಲ್‌ ಆಕ್ಷಿಜನ್‌ ಅವಶ್ಯಕತೆ ಇದೆ. ಜಿಲ್ಲೆಗೆ 14000 ಕೋವಿಶೀಲ್ಡ್‌ ಲಸಿಕೆ ಬಂದಿದೆ. ಕೋವ್ಯಾಕ್ಷಿನ್‌ ಲಸಿಕೆ ಬಂದಿಲ್ಲ ಎಂದು ಮಾಹಿತಿ ನೀಡಿದರು. ಬಾದಾಮಿ ತಾಲೂಕು ಆಸ್ಪತ್ರೆಯನ್ನು ಕೋವಿಡ್‌ ಆಸ್ಪತ್ರೆಯನ್ನಾಗಿ ಮಾಡಬೇಕು. ಇದಕ್ಕೆ ಸಂಬಂಧಿ ಸಿದ ಎಲ್ಲ ಮೂಲಭೂತ ಸೌಕರ್ಯ ಒದಗಿಸಲು ಸಂಬಂ  ಧಿಸಿದವರಿಗೆ ತಿಳಿಸುತ್ತೇನೆ. ಅಗತ್ಯ ಕ್ರಮ ತೆಗೆದುಕೊಳ್ಳಲು ಡಿಸಿ ರಾಜೇಂದ್ರ ಅವರಿಗೆ ಗುಳೆ ಬಂದವರಿಗೆ ಗ್ರಾಪಂ ವತಿಯಿಂದ ನರೇಗಾ ಯೋಜನೆಯಡಿ ಕೂಲಿ ಕೆಲಸ ನೀಡಬೇಕೆಂದು ಜಿಪಂ ಸಿಇಒ ಭೂಬಾಲನ್‌ ಅವರಿಗೆ ಸಿದ್ದರಾಮಯ್ಯ ಸೂಚಿಸಿದರು.

Advertisement

ವಿಡಿಯೋ ಕಾನ್‌#ರೆನ್ಸ್‌ ನಲ್ಲಿ ಜಿಪಂ ಸಿಇಒ ಟಿ.ಭೂಬಲನ್‌, ಎಸ್‌.ಪಿ. ಲೋಕೇಶ ಜಗಲಾಸರ, ಉಪವಿಭಾಗಾಧಿ ಕಾರಿ ಎಂ.ಗಂಗಪ್ಪ, ಜಿಲ್ಲಾ ಆರೋಗ್ಯಾ ಧಿಕಾರಿ ಡಾ| ಅನಂತ ದೇಸಾಯಿ, ಸಿಪಿಐ ರಮೇಶ ಹಾನಾಪುರ, ಬಾದಾಮಿ ತಹಶೀಲ್ದಾರ್‌ ಸುಹಾಸ ಇಂಗಳೆ, ತಾಪಂ ಇಒ ಅರ್ಜುನ ಒಡೆಯರ, ಗುಳೇದಗುಡ್ಡ ತಹಶೀಲ್ದಾರ್‌ ಜಿ.ಎಂ.ಕುಲಕರ್ಣಿ, ತಾಪಂ ಇಒ ಸಿದ್ದಪ್ಪ ನಕ್ಕರಗುಂದಿ, ತಾಲೂಕು ಆರೋಗ್ಯಾ  ಧಿಕಾರಿ ಡಾ|ಎಂ.ಬಿ.ಪಾಟೀಲ, ಬಿಇಒ. ಎಂ.ಪಿ.ಮಾಗಿ, ಸಿಡಿಪಿಒ ಅನ್ನಪೂರ್ಣ ಕುಬಕಡ್ಡಿ, ಪಿಎಸ್‌ಐ ಪ್ರಕಾಶ ಬಣಕಾರ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎ.ಎಂ. ನಾಗೂರ, ಜಿಪಂ ಎಇಇ ಕೆ.ಡಿ.ನಾಯಕ, ಕೆರೂರ ಪ.ಪಂ ಮುಖ್ಯಾ ಧಿಕಾರಿ ಮಾರುತಿ ನಡುವಿನಕೇರೆ, ಬಾದಾಮಿ ಮುಖ್ಯಾ ಧಿಕಾರಿ ಜ್ಯೋತಿ ಗಿರೀಶ, ಡಾ| ಸುರೇಶ ಉಗಲವಾಟ, ಡಾ| ಬಿ.ಎಚ್‌.ರೇವಣಸಿದ್ದಪ್ಪ, ಆರ್‌.ಎಸ್‌. ಆದಾಪುರ, ಸುನೀಲ ಕಾರುಡಗಿಮಠ, ಸಂತೋಷ ಕುರಿ, ಎಸ್‌.ವೈ. ಮಡಿವಾಳರ ಹಾಜರಿದ್ದರು.

ಮುಂಜಾಗ್ರತಾ ಕ್ರಮ ವಹಿಸಿ: ಕೋವಿಡ್‌ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಸರಕಾರದ ನಿಯಮಗಳನ್ನು ಪಾಲಿಸಿ, ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಂಡು ಎಲ್ಲರೂ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ತಹಶೀಲ್ದಾರ್‌ ಸುಹಾಸ ಇಂಗಳೆ ಹೇಳಿದರು.

ಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿ  ಗಳೊಂದಿಗೆ ಮಾತನಾಡಿದ ಅವರು, ತಾಲೂಕು ಆಸ್ಪತ್ರೆಯಲ್ಲಿ 51, ಕಾರುಡಗಿಮಠ ಆಸ್ಪತ್ರೆಯಲ್ಲಿ 20, ವೆಂಕಟೇಶ್ವರ ಆಸ್ಪತ್ರೆಯಲ್ಲಿ 25 ಬೆಡ್‌ಗಳಿದ್ದು, ಕೋವಿಡ್‌ ರೋಗಿಗಳಿಗೆ ಎಲ್ಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಬಾದಾಮಿ ತಾಲೂಕು ಆಸ್ಪತ್ರೆಯನ್ನು ಕೋವಿಡ್‌ ಆಸ್ಪತ್ರೆಯನ್ನಾಗಿ ಮಾಡಲು ಎಲ್ಲ ತಯಾರಿ ಮಾಡಲಾಗಿದೆ. ಕೋವಿಡ್‌ ಆಸ್ಪತ್ರೆಗೆ ಬೇಕಾಗುವ ಸಿಬ್ಬಂದಿ, ಮೂಲಭೂತ ಸೌಕರ್ಯಗಳ ಕ್ರಿಯಾ ಯೋಜನೆ ತಯಾರಿಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು.

ಪ್ರತಿ ದಿನ 15 ಕೆಎಲ್‌ ಆಕ್ಷಿಜನ್‌ ಅವಶ್ಯಕತೆ ಇದೆ ಎಂದು ಜಿಲ್ಲಾ ಧಿಕಾರಿಗಳಿಗೆ ತಿಳಿಸಲಾಗಿದೆ. ತಾಲೂಕಿನಲ್ಲಿ ಆಕ್ಸಿಜನ್‌ ಕೊರತೆ ಇಲ್ಲ. ಕಾರುಡಗಿಮಠ ಆಸ್ಪತ್ರೆಯೆ ಏಜೆನ್ಸಿಯಿಂದ ಆಕ್ಷಿಜನ್‌ ಸರಬರಾಜು ವಿಳಂಬವಾದ ಕಾರಣ ಸರಕಾರದಿಂದ ಸರಬರಾಜು ಮಾಡಿಸಲಾಗಿದೆ. ತಾಲೂಕಿನ 852 ರೋಗಿಗಳಿಗೆ ಆಶಾ, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಕೋವಿಡ್‌ ಕಿಟ್‌ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ವಲಸೆ ಬಂದ ಕಾರ್ಮಿಕರಿಗೆ ನರೇಗಾ ಯೋಜನೆಯಡಿ ಕೂಲಿ ಕೆಲಸ ನೀಡಲು ಪಿಡಿಒ ಅವರಿಗೆ ಸೂಚಿಸಲಾಗಿದೆ. ತಾಲೂಕಿನ ಜಾಲಿಹಾಳ ಮತ್ತು ಚಿಕ್ಕಮುಚ್ಚಳಗುಡ್ಡ ವಸತಿ ನಿಲಯದಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next