Advertisement

ಚಂದ್ರವಳ್ಳಿ ಕೆರೆ-ಸಿಹಿನೀರು ಹೊಂಡಕ್ಕೆ ಬಾಗಿನ ಅರ್ಪಣೆ

03:31 PM Oct 25, 2021 | Team Udayavani |

ಚಿತ್ರದುರ್ಗ: ಜಿಲ್ಲೆಯಾದ್ಯಂತ ಕಳೆದ 15 ದಿನಗಳಿಂದ ಸುರಿಯುತ್ತಿರುವ ವ್ಯಾಪಕಮಳೆಗೆ ಬಹುತೇಕ ಕೆರೆ, ಕಟ್ಟೆಗಳು ಭರ್ತಿಯಾಗಿವೆ. ಚಿತ್ರದುರ್ಗ ನಗರದ ಜೀವನಾಡಿಗಳಾಗಿರುವ ಸಿಹಿನೀರುಹೊಂಡ, ಚಂದ್ರವಳ್ಳಿ ಕೆರೆಗಳು ಸೇರಿದಂತೆ ಕೋಟೆಯಲ್ಲಿರುವ ಒಡ್ಡು, ಕಲ್ಯಾಣಿಗಳು ಭರ್ತಿಯಾಗಿವೆ. ಈ ಹಿನ್ನೆಲೆಯಲ್ಲಿಸಂಪ್ರದಾಯದಂತೆ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಅವರು ಚಂದ್ರವಳ್ಳಿ ಕೆರೆ ಹಾಗೂ ಸಿಹಿನೀರು ಹೊಂಡಕ್ಕೆ ಭಾನುವಾರ ಬಾಗಿನ ಅರ್ಪಿಸಿದರು.

Advertisement

ಈ ವೇಳೆ ಮಾತನಾಡಿದ ಶಾಸಕರು, ಮದಕರಿನಾಯಕರ ಕಾಲದಲ್ಲಿ ಯಾವುದೇ ಇಂಜಿನಿಯರ್‌ಗಳು ಇಲ್ಲದ ಕಾಲದಲ್ಲಿ ಕೋಟೆಯ ತುದಿಯಲ್ಲಿ ಬಿದ್ದ ನೀರು ವ್ಯವಸ್ಥಿತವಾಗಿ ಒಡ್ಡು, ಕಲ್ಯಾಣಿ, ಕೆರೆಗಳಿಗೆಹರಿದು ಬರುವಂತೆ ಮಾಡಿರುವ ತಂತ್ರಜ್ಞಾನ ಅದ್ಭುತ ಎಂದು ಬಣ್ಣಿಸಿದರು.

ಚದ್ರವಳ್ಳಿ ಕೆರೆ ಮತ್ತು ಸಿಹಿನೀರು ಹೊಂಡಗಳು ಐತಿಹಾಸಿಕವಾಗಿವೆ.ಪಾಳೇಗಾರರ ಕಾಲದಲ್ಲಿ ನಿರ್ಮಾಣವಾಗಿವೆ. ಕೋಟೆ ಮೇಲ್ಭಾಗದಲ್ಲಿರುವಗೋಪಾಲಸ್ವಾಮಿ ಹೊಂಡ ತುಂಬಿದ ನಂತರಆ ನೀರು ಅಕ್ಕ-ತಂಗಿ ಹೊಂಡಕ್ಕೆ ಹರಿದು,ಅಲ್ಲಿಂದ ಸಿಹಿನೀರು ಹೊಂಡಕ್ಕೆ ಬರುತ್ತದೆ. ಇಲ್ಲಿಂದ ಸಂತೇಹೊಂಡ, ಮಲ್ಲಾಪುರ ಕೆರೆ, ಗೊನೂರು ಕೆರೆ, ಕಲ್ಲೆನಹಳ್ಳಿ, ಮಧುರೆ ಕೆರೆಮೂಲಕ ಚಳ್ಳಕೆರೆ ತಾಲೂಕಿನ ರಾಣಿಕೆರೆ ತಲುಪುವುದು ವಿಶೇಷ. ಚಿತ್ರದುರ್ಗ ನಗರಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಸಿಹಿನೀರು ಹೊಂಡ ಕಳೆದ 3-4 ವರ್ಷದಿಂದ ಕೋಡಿಬೀಳುತ್ತಿದೆ. ನಗರಕ್ಕೆ ನೀರಿನ ಬರವಿಲ್ಲ. 2008ರಿಂದ ನೀರಿನ ಕೊರತೆ ಇಲ್ಲದೆ ಜನತೆ ನೆಮ್ಮದಿಯಿಂದ ಜೀವಿಸುತ್ತಿದ್ದಾರೆ ಎಂದರು.

ಕೇಂದ್ರ ಸರ್ಕಾರ ಕುಡಿಯುವ ನೀರಿನಯೊಜನೆಗಾಗಿ 140 ಕೋಟಿ ರೂ. ಗಳನ್ನು ನೀಡಿದೆ. ಇದರಲ್ಲಿ ಈಗಾಗಲೇ ವಿವಿ ಸಾಗರ ಮತ್ತು ಶಾಂತಿ ಸಾಗರದಿಂದ ಎರಡನೇ ಹಂತದ ಪೈಪ್‌ಲೆ„ನ್‌ ಕಾಮಗಾರಿ ಪ್ರಾರಂಭವಾಗಿದೆ. ಮುಂದಿನ 2 ವರ್ಷದಲ್ಲಿ 24 ಗಂಟೆ ನೀರು ಸರಬರಾಜು ಮಾಡಲು ಎಲ್ಲಾ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಬಿಪಿಎಲ್‌ ಕಾರ್ಡ್‌ ವಿಚಾರದಲ್ಲಿ ಗೊಂದಲ ಇದ್ದರೆ ಬಗೆಹರಿಸಲಾಗುವುದು. ಶ್ರೀಮಂತರು ಸಹ ಬಿಪಿಎಲ್‌ ಕಾರ್ಡ್‌ ಪಡೆದಿದ್ದಾರೆ. ಅದನ್ನು ಪರಿಹಾರ ಮಾಡುವಸಲುವಾಗಿ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದೆ. ಅದರಲ್ಲಿ ಕೆಲವುನ್ಯೂನತೆಗಳಿದ್ದು, ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

Advertisement

ಈ ವೇಳೆ ನಗರಸಭೆ ಅಧ್ಯಕ್ಷೆ ತಿಪ್ಪಮ್ಮ,ಸದಸ್ಯರಾದ ಮೀನಾಕ್ಷಿ, ಭಾಗ್ಯಮ್ಮ,ಆನಂದ, ಶ್ರೀನಿವಾಸ್‌, ಶ್ವೇತಾ, ತಾರಕೇಶ್ವರಿ,ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯೆ ರೇಖಾ,ಯೋಜನಾ ನಿರ್ದೇಶಕ ಸತೀಶ್‌ ರೆಡ್ಡಿಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next