Advertisement

ವಾಯ್ಸ್ ಮೆಸೇಜ್ ಮಾಡಿ, ಕಾರು ಸಮೇತ ನಾಲೆಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಕುಟುಂಬ

12:49 PM Aug 26, 2021 | Team Udayavani |

ಚಿಕ್ಕಮಗಳೂರು : ನಾವು ಆತ್ಮಹತ್ಯೆ ಮಾಡುತ್ತಿದ್ದೇವೆಂದು ಕುಟುಂಬಸ್ಥರಿಗೆ ವಾಯ್ಸ್ ಮೆಸೇಜ್ ಮಾಡಿ ಕಾರು ಸಮೇತ ಭದ್ರಾ ನಾಲೆಗೆ ಬಿದ್ದು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಎಂ.ಸಿ.ಹಳ್ಳಿ ಬಳಿ ಗುರುವಾರ ನಡೆದಿದೆ.

Advertisement

ಘಟನೆಯಲ್ಲಿ ತಾಯಿ ನೀತು (35 ವರ್ಷ) ಹಾಗೂ ಮಗ ಧ್ಯಾನ್ (13 ವರ್ಷ) ಇಬ್ಬರನ್ನು ರಕ್ಷಿಸಿದ್ದು ನೀತು ಪತಿ ಮಂಜು ಹಾಗೂ ಅತ್ತೆ ಸುನಂದಮ್ಮ ನೀರಿನಲ್ಲಿ ಮುಳುಗಿದ್ದು ಶೋಧಕಾರ್ಯ ನಡೆದಿದೆ. ಇವರು ಮೂಲತಃ ಭದ್ರಾವತಿ ತಾಲೂಕಿನ ಹಳೇ ಜೇಡಿಕಟ್ಟೆಯವರು ಎನ್ನಲಾಗಿದೆ.

ಘಟನೆಗೆ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದೆ, ಸ್ಥಳಕ್ಕೆ ಎಸ್ಪಿ ಅಕ್ಷಯ್ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ :ಮಹಿಳೆಯರು ಮನೆಯಲ್ಲೇ ಕೆಲಸ ಮಾಡಬೇಕು : ತಾಲಿಬಾನ್ ತಾಕೀತು

Advertisement

Udayavani is now on Telegram. Click here to join our channel and stay updated with the latest news.

Next