Advertisement

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

12:30 AM Apr 27, 2024 | Team Udayavani |

ಚೆಂಗ್ಡು (ಚೀನಾ): ಶನಿವಾರದಿಂದ ಥಾಮಸ್‌ ಕಪ್‌ ಮತ್ತು ಉಬರ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿ ಆರಂಭಗೊಳ್ಳಲಿದೆ. ಪುರುಷರ ವಿಭಾಗದ ಹಾಲಿ ಚಾಂಪಿಯನ್‌ ಭಾರತೀಯ ತಂಡ ಪ್ರಶಸ್ತಿ ಉಳಿಸಿಕೊಳ್ಳುವ ಯೋಜನೆಯಲ್ಲಿದ್ದರೆ, ಮಹಿಳಾ ತಂಡ ಉತ್ತಮ ಸ್ಪರ್ಧೆ ನೀಡಲು ಸಜ್ಜಾಗಿದೆ.

Advertisement

14 ಬಾರಿಯ ವಿಶ್ವ ಚಾಂಪಿಯನ್ಸ್‌ ಇಂಡೋನೇಷ್ಯಾದಿಂದ ಭಾರತ ಪ್ರಬಲ ಪೈಪೋಟಿ ಎದುರಿಸುವ ಸಾಧ್ಯತೆಯಿದೆ. ಮಹಿಳಾ ತಂಡದಲ್ಲಿ ಪಿ.ವಿ.ಸಿಂಧು ಬಲ ತಂಡಕ್ಕಿಲ್ಲ. ಅವರು ಉಬರ್‌ ಸ್ಪರ್ಧೆಯಿಂದ ದೂರವಿದ್ದು, ಒಲಿಂಪಿಕ್ಸ್‌ ಕಡೆ ಗಮನ ಹರಿಸುವುದಾಗಿ ಹೇಳಿಕೊಂಡಿದ್ದಾರೆ. ಶನಿವಾರ ಥಾಮಸ್‌ ಕಪ್‌ ಪಂದ್ಯದಲ್ಲಿ ಭಾರತಕ್ಕೆ ಥಾಯ್ಲೆಂಡ್‌ ಮೊದಲ ಎದುರಾಳಿಯಾದರೆ, ಉಬರ್‌ ಕಪ್‌ನಲ್ಲಿ ಕೆನಡಾ ಸವಾಲನ್ನು ಎದುರಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next