Advertisement

ಲಾಕ್‌ಡೌನ್‌ ವೇಳೆ ಚಿತ್ರಕಲೆ: ಸಿಂಧು

03:34 AM Aug 05, 2020 | Hari Prasad |

ಹೊಸದಿಲ್ಲಿ: ವಿಶ್ವ ಚಾಂಪಿಯನ್‌ ಬ್ಯಾಡ್ಮಿಂಟನ್‌ ತಾರೆ ಪಿವಿ ಸಿಂಧು ಲಾಕ್‌ಡೌನ್‌ ಸಮಯದಲ್ಲಿ ತಮ್ಮ ಇತರ ಪ್ರತಿಭೆಗಳನ್ನೂ ಅನಾವರಣಗೊಳಿಸಿದ್ದಾರೆ.

Advertisement

ಟೇಬಲ್‌ ಟೆನಿಸ್‌ ಆಟಗಾರ ಮುಡಿತ್‌ ಡ್ಯಾನಿ ಜತೆಗಿನ ಸಂದರ್ಶನದಲ್ಲಿ ಸಿಂಧು ಲಾಕ್‌ಡೌನ್‌ ಸಮಯದ ತಮ್ಮ ದಿನಚರಿಗಳ ಬಗ್ಗೆ ವಿವರಿಸಿದ್ದು, ತಮ್ಮ ಕಲಾತ್ಮಕತೆಯನ್ನು ಪರಿಚಯಿಸಿದ್ದಾರೆ.

ನಾನು ಲಾಕ್‌ಡೌನ್‌ ಸಮಯದಲ್ಲಿ ಕೆಲ ಹೊಸ ವಿಷಯಗಳನ್ನು ಕಲಿತೆ. ಅದರಲ್ಲಿ ಚಿತ್ರಕಲೆಯೂ ಕೂಡ ಒಂದು. ಈಗಿನ ದಿನಗಳಲ್ಲಿ ನಾನು ಹೆಚ್ಚಾಗಿ ಪೇಟಿಂಗ್‌ ಮತ್ತು ಚಿತ್ರಕಲೆಯನ್ನು ಮಾಡುತ್ತಿರುತ್ತೇನೆ. ಈ ಹಿಂದೆಯೂ ನನಗೆ ಇವುಗಳಲ್ಲಿ ಆಸಕ್ತಿ ಇತ್ತು.

ಆದರೆ ಬ್ಯಾಡ್ಮಿಂಟನ್‌ಗೆ ಹೆಚ್ಚು ಒತ್ತು ನೀಡುತ್ತಿದ್ದ ಕಾರಣದಿಂದ ಬಿಡುವು ಸಿಗುತ್ತಿರಲಿಲ್ಲ. ಆದರೆ ಈಗ ಹೊಸ ಹೊಸ ವಿಷಯಗಳನ್ನು ಕಲಿತುಕೊಳ್ಳಲು ಸಮಯ ಲಭಿಸಿದೆ’ ಎಂದು ಪಿವಿ ಸಿಂಧು ಹೇಳಿದ್ದಾರೆ.


Advertisement

Udayavani is now on Telegram. Click here to join our channel and stay updated with the latest news.

Next