Advertisement
ಮಂಗಳವಾರ ನಡೆದ ವನಿತಾ ಸಿಂಗಲ್ಸ್ ವಿಭಾಗದ ಮೊದಲ ಪಂದ್ಯದಲ್ಲಿ 4ನೇ ಶ್ರೇಯಾಂಕಿತೆ ಸಿಂಧು ಇಂಡೋನೇಶ್ಯದ ಲೈನಿ ಅಲೆಸ್ಸಾಂಡ್ರಾ ಮೈಕಿ ಅವರನ್ನು ಕೇವಲ 27 ನಿಮಿಷಗಳಲ್ಲಿ 21-9, 21-7 ಗೇಮ್‌ಗಳಿಂದ ಸೋಲಿಸಿದರು. ಮುಂದಿನ ಪಂದ್ಯದಲ್ಲಿ ಅವರು ಡೆನ್ಮಾರ್ಕ್‌ನ ಮಿಯಾ ಬ್ಲಿಚೆ#ಲ್ಟ್ ವಿರುದ್ಧ ಆಡಲಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ 4 ಆಟಗಾರರು ದ್ವಿತೀಯ ಸುತ್ತಿಗೆ ಲಗ್ಗೆಯಿಟ್ಟರು. ಆದರೆ ಬಿ.ಸಾಯಿ ಪ್ರಣೀತ್ ಮೊದಲ ಪಂದ್ಯದಲ್ಲಿಯೇ ಸೋತು ನಿರಾಸೆ ಮೂಡಿಸಿದರು. ಪುರುಷರ ಮೊದಲ ಪಂದ್ಯದಲ್ಲಿ ಸಮೀರ್ ವರ್ಮ ಥಾಯ್ಲೆಂಡ್‌ನ ಸಪ್ಪನಿಸ್ ಅವಿಂಗ್‌ಸನನ್ ಅವರನ್ನು 21-14, 21-6 ಗೇಮ್‌ಗಳಿಂದ ಸೋಲಿಸಿದರೆ, ಪ್ರಣಯ್ ಎಚ್. ಎಸ್ ಫ್ರಾನ್ಸ್ ಬ್ರೈಸ್ ಲಿವೆರ್ಡೆಸ್ ವಿರುದ್ಧ 11-21, 21-16, 21-18 ಗೇಮ್‌ಗಳಿಂದ ಜಯಿಸಿದರು. ಅನಂತರ ನಡೆದ ಪಂದ್ಯದಲ್ಲಿ ಸಾಯಿ ಪ್ರಣೀತ್ ಬಿ. ವಿಶ್ವದ ನಂ.ವನ್ ಆಟಗಾರ ಜಪಾನಿನ ಕೆಂಟೊ ಮೊಮೊಟ ಅವರ ವಿರುದ್ಧ 21-19, 14-21, 20-22 ಗೇಮ್‌ಗಳಿಂದ ಪರಾಭವಗೊಂಡರು.
Related Articles
Advertisement
ಪುರುಷರ ಡಬಲ್ಸ್ ವಿಭಾಗದಲ್ಲಿ ಮನು ಅತ್ರಿ-ಬಿ ಸುಮೀತ್ ರೆಡ್ಡಿ ಜೋಡಿ ಅತಿಥೇಯ ನಾಡಿನ ಡ್ಯಾನಿ ಬಾವಾ ಕ್ರಿಸ್ನಾಂತಾ-ಕಿನ್ ಹೆನ್ ಲೊಗ್ ಅವರ ವಿರುದ್ಧ 13-21, 17-21ಗಳಿಂದ ಮುಗ್ಗರಿಸಿದರು. ಮಿಕ್ಸೆಡ್ ಡಬಲ್ಸ್‌ನಲ್ಲಿ ಸೌರಭ್ ಶರ್ಮ- ಅನೌಷ್ಕಾ ಪಾರಿಕ್ ಮೊದಲ ಪಂದ್ಯದಲ್ಲೇ 3ನೇ ಶ್ರೇಯಾಂಕದ ಥಾಯ್ಲೆಂಡ್ ಜೋಡಿ ವಿರುದ್ಧ 12-21, 12-21 ಗೇಮ್‌ಗಳಿಂದ ಸೋತರು.
ಇನ್ನೊಂದು ಪಂದ್ಯದಲ್ಲಿ ಪ್ರಣವ್ ಜೆರ್ರಿ ಜೋಪ್ರಾ- ಎನ್. ಸಿಕ್ಕಿ ರೆಡ್ಡಿ ಜೋಡಿ ಭಾರತದವರೇ ಆದ ಅರ್ಜುನ್ ಎಂ. ಆರ್-ಕೆ. ಮನೀಷಾ ಜೋಡಿಯನ್ನು 21-18, 21-7 ಗೇಮ್‌ಗಳಿಂದ ಸೋಲಿಸಿ ಮುನ್ನಡೆದಿದ್ದಾರೆ.
ಸೈನಾಗೂ ಮುನ್ನಡೆಇನ್ನೊಂದು ಪಂದ್ಯದಲ್ಲಿ 6ನೇ ಶ್ರೇಯಾಂಕಿತೆ ಸೈನಾ ನೆಹ್ವಾಲ್ ಇಂಡೋನೇಶ್ಯದ ಯೂಲಿಯಾ ಯೋಸೆಫಿನ್ ಸುಸಾಂಟೊ ವಿರುದ್ಧ 21-16, 21-11 ಗೇಮ್‌ಗಳಿಂದ ಗೆದ್ದು ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದಾರೆ. ಅವರ ಮುಂದಿನ ಎದುರಾಳಿ ಥಾಯ್ಲೆಂಡ್ ಪೌರ್ನಪೊವಿ ಚುಚುವಾಂಗ್. ಚುಚುವಾಂಗ್ ಭಾರತದ ಮುಗಾœ ಅಗ್ರೆ ಅವರನ್ನು 21-6, 21-8 ನೇರ ಗೇಮ್‌ಗಳಿಂದ ಸೋಲಿಸಿ ಮುನ್ನಡೆದಿದ್ದಾರೆ.