Advertisement

BWF: ಬ್ಯಾಡ್ಮಿಂಟನ್‌ ರ್‍ಯಾಂಕಿಂಗ್‌ ಪ್ರಕಟ

11:36 PM Dec 05, 2023 | Team Udayavani |

ಹೊಸದಿಲ್ಲಿ: ಭಾರತದ ವನಿತಾ ಡಬಲ್ಸ್‌ ಆಟಗಾರ್ತಿಯರಾದ ಅಶ್ವಿ‌ನಿ ಪೊನ್ನಪ್ಪ ಮತ್ತು ತನಿಷಾ ಕ್ರಾಸ್ಟೊ ಅವರು ನೂತನ ಬಿಡಬ್ಲ್ಯುಎಫ್ ರ್‍ಯಾಂಕಿಂಗ್‌ನಲ್ಲಿ ನಾಲ್ಕು ಸ್ಥಾನ ಮೇಲಕ್ಕೇರಿ ವಿಶ್ವದ 28ನೇ ರ್‍ಯಾಂಕ್‌ ಪಡೆದಿದ್ದಾರೆ.

Advertisement

36ರ ಹರೆಯದ ಅಶ್ವಿ‌ನಿ ಮತ್ತು 20ರ ಹರೆಯದ ತನಿಷಾ ಈ ವರ್ಷದ ಜನವರಿಯಲ್ಲಿ ಜತೆಯಾಗಿ ಆಡಲು ಆರಂಭಿಸಿದ್ದರು. ಲಕ್ನೋದಲ್ಲಿ ನಡೆದ ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌ ಸೂಪರ್‌ 300 ಕೂಟದಲ್ಲಿ ಅವರಿಬ್ಬರು ಡಬಲ್ಸ್‌ನಲ್ಲಿ ರನ್ನರ್‌ ಅಪ್‌ ಸ್ಥಾನ ಪಡೆದಿದ್ದರು. ಇವರಿಬ್ಬರು ಈ ಹಿಂದೆ ನಟೇಶ್‌ ಇಂಟರ್‌ನ್ಯಾಶನಲ್‌ ಚಾಲೆಂಜ್‌ ಮತ್ತು ಅಬುಧಾಬಿ ಮಾಸ್ಟರ್ ಸೂಪರ್‌ 100 ಕೂಟದ ಪ್ರಶಸ್ತಿ ಜಯಿಸಿದ್ದರು.

ಪುರುಷರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್‌ ಹಂತಕ್ಕೆ ತಲುಪಿದ್ದ ಪ್ರಿಯಾಂಶು ರಾಜಾವತ್‌ ಒಂದು ಸ್ಥಾನ ಮೇಲಕ್ಕೇರಿ ಅಗ್ರ 30ರೊಳಗಿನ ಸ್ಥಾನ ಪಡೆಯಲು ಯಶಸ್ವಿಯಾದರು. ಭಾರತದ ಇನ್ನುಳಿದ ಸಿಂಗಲ್ಸ್‌ ಆಟಗಾರರ ರ್‍ಯಾಂಕಿಂಗ್‌ನಲ್ಲಿ ಬದಲಾವಣೆಯಾಗಿಲ್ಲ. ಎಂಟನೇ ರ್‍ಯಾಂಕ್‌ನಲ್ಲಿರುವ ಎಚ್‌ಎಸ್‌ ಪ್ರಣಯ್‌ ದೇಶದ ಅಗ್ರಮಾನ್ಯ ಬ್ಯಾಡ್ಮಿಂಟನ್‌ ಆಟಗಾರರಾಗಿದ್ದಾರೆ. ಡಬಲ್ಸ್‌ನಲ್ಲಿ ಸಾತ್ವಿಕ್‌ಸಾಯಿರಾಜ್‌ ರಾಂಕಿರೆಡ್ಡಿ ಮತು ಚಿರಾಗ್‌ ಶೆಟ್ಟಿ ವಿಶ್ವದ ಎರಡನೇ ರ್‍ಯಾಂಕ್‌ನಲ್ಲಿ ಮುಂದುವರಿಯಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next