Advertisement

ಬ್ಯಾಡ್ಮಿಂಟನ್‌ ರ್‍ಯಾಂಕಿಂಗ್‌: ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಜೋಡಿ ನಂ.2

11:31 PM Jul 25, 2023 | Team Udayavani |

ಹೊಸದಿಲ್ಲಿ: ಮೊನ್ನೆಯಷ್ಟೇ ಕೊರಿಯಾ ಓಪನ್‌ ಬ್ಯಾಡ್ಮಿಂಟನ್‌ ಪ್ರಶಸ್ತಿ ಜಯಿಸಿದ ಭಾರತದ ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಈಗ ಇನ್ನೊಂದು ಎತ್ತರಕ್ಕೆ ತಲುಪಿದ್ದಾರೆ. ಮಂಗಳವಾರ ಪ್ರಕಟಗೊಂಡ ನೂತನ ಬಿಡಬ್ಲ್ಯುಎಫ್ ರ್‍ಯಾಂಕಿಂಗ್‌ನಲ್ಲಿ ಒಂದು ಸ್ಥಾನದ ಪ್ರಗತಿಯೊಂದಿಗೆ ದ್ವಿತೀಯ ಸ್ಥಾನಕ್ಕೆ ನೆಗೆದಿದ್ದಾರೆ. ಇದು ಇವರ ಜೀವನಶ್ರೇಷ್ಠ ರ್‍ಯಾಂಕಿಂಗ್‌ ಎಂಬುದು ವಿಶೇಷ.

Advertisement

ಹಾಲಿ ಏಷ್ಯನ್‌ ಚಾಂಪಿಯನ್ಸ್‌ ಕೂಡ ಆಗಿರುವ ಚಿರಾಗ್‌-ಸಾತ್ವಿಕ್‌ ಈ ವರ್ಷ 4 ಕೂಟಗಳ ಫೈನಲ್‌ ತಲುಪಿದ್ದು, ನಾಲ್ಕರಲ್ಲೂ ಗೆದ್ದು ಬಂದಿದ್ದಾರೆ. ಇದರೊಂದಿಗೆ ಇವರ ಅಂಕ 87,211ಕ್ಕೆ ಏರಿದೆ.

ಎರಡು ಬಾರಿಯ ಒಲಿಂಪಿಕ್‌ ಪದಕ ವಿಜೇತೆ ಪಿ.ವಿ. ಸಿಂಧು ವನಿತಾ ಸಿಂಗಲ್ಸ್‌ನಲ್ಲಿ 17ನೇ ಸ್ಥಾನದಲ್ಲೇ ಇದ್ದಾರೆ. ಸೈನಾ ನೆಹ್ವಾಲ್‌ಗೆ ಒಂದು ಸ್ಥಾನ ನಷ್ಟವಾಗಿದ್ದು, ಅವರು 37ನೇ ರ್‍ಯಾಂಕಿಂಗ್‌ ಹೊಂದಿದ್ದಾರೆ.

ಎಚ್‌.ಎಸ್‌. ಪ್ರಣಯ್‌ ಪುರುಷರ ವಿಭಾಗದಲ್ಲಿ ಭಾರತದ ಟಾಪ್‌ ರ್‍ಯಾಂಕಿಂಗ್‌ ಹೊಂದಿದ್ದು, 10ನೇ ಸ್ಥಾನದಲ್ಲಿದ್ದಾರೆ. ಕೆನಡಾ ಓಪನ್‌ ಪ್ರಶಸ್ತಿ ವಿಜೇತ ಲಕ್ಷ್ಯ ಸೇನ್‌ಗೆ ಒಂದು ಸ್ಥಾನ ನಷ್ಟವಾಗಿದೆ. ಅವರೀಗ 13ನೇ ಸ್ಥಾನಿಯಾಗಿದ್ದಾರೆ. ಕೆ. ಶ್ರೀಕಾಂತ್‌ 20ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಅಗ್ರಸ್ಥಾನಲ್ಲಿರುವವರು ಡೆನ್ಮಾರ್ಕ್‌ನ ವಿಕ್ಟರ್‌ ಅಕ್ಸೆಲ್ಸೆನ್‌.

Advertisement

Udayavani is now on Telegram. Click here to join our channel and stay updated with the latest news.

Next