Advertisement

Badminton: ಓರ್ಲೀನ್‌ ಮಾಸ್ಟರ್ ಫೈನಲ್‌ಪ್ರಶಸ್ತಿ ಸುತ್ತಿಗೆ ಪ್ರಿಯಾಂಶು ರಾಜಾವತ್‌

11:24 PM Apr 08, 2023 | Team Udayavani |

ಓರ್ಲೀನ್‌ (ಫ್ರಾನ್ಸ್‌): ಭಾರತದ ಪ್ರಿಯಾಂಶು ರಾಜಾವತ್‌ “ಓರ್ಲೀನ್‌ ಮಾಸ್ಟರ್ ಸೂಪರ್‌ 300” ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಪ್ರಶಸ್ತಿ ಸುತ್ತಿಗೆ ಲಗ್ಗೆ ಇರಿಸಿದ್ದಾರೆ.

Advertisement

ಶನಿವಾರದ ಸೆಮಿಫೈನಲ್‌ನಲ್ಲಿ 21 ವರ್ಷದ ಪ್ರಿಯಾಂಶು ರಾಜಾವತ್‌ ಐರ್ಲೆಂಡ್‌ನ‌ ನಾಟ್‌ ಎನ್‌ಗುಯೆನ್‌ ಅವರನ್ನು 21-12, 21-9 ಅಂತರದಿಂದ ಪರಾಭವಗೊಳಿಸಿದರು. ಕಳೆದ ವರ್ಷದ “ಥಾಮಸ್‌ ಕಪ್‌’ ಗೆಲುವಿನ ವೇಳೆ ಭಾರತ ತಂಡದಲ್ಲಿದ್ದ ಪ್ರಿಯಾಂಶು ಅವರಿಗೆ ಇದು ಮೊದಲ “ಸೂಪರ್‌ 300′ ಫೈನಲ್‌ ಆಗಿದೆ.

ಫೈನಲ್‌ನಲ್ಲಿ ಡೆನ್ಮಾರ್ಕ್‌ನ ಮ್ಯಾಗ್ನಸ್‌ ಜೊಹಾನ್ಸೆನ್‌ ಅಥವಾ ಚೀನಾದ ಲೀ ಲಾನ್‌ ಕ್ಸಿ ಅವರನ್ನು ಎದುರಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next