Advertisement
ಕಳೆದ ತಿಂಗಳು ಕ್ಯಾಲಿಫೋರ್ನಿಯದಲ್ಲಿ ಯುಎಸ್ ಓಪನ್ ಪ್ರಶಸ್ತಿ ಜಯಿಸಿದ್ದ 24ರ ಹರೆಯದ ಪ್ರಣಯ್ ಇಂಡೋನೇಶ್ಯದ ಫಿರ್ಮಾನ್ ಅಬ್ದುಲ್ ಖೋಲಿಕ್ ಅವರನ್ನು ಕಠಿನ ಹೋರಾಟದಲ್ಲಿ 23-21, 21-18 ಗೇಮ್‌ಗಳಿಂದ ಉರುಳಿಸಿದರು. ಪ್ರಣಯ್ ಮುಂದಿನ ಸುತ್ತಿನಲ್ಲಿ 10ನೇ ಶ್ರೇಯಾಂಕದ ಹಾಂಕಾಂಗ್‌ನ ವೆಯಿ ನಾನ್ ಅವರನ್ನು ಎದುರಿಸಲಿದ್ದಾರೆ.
ಏಳನೇ ಶ್ರೇಯಾಂಕದ ಸೌರಭ್ ಇನ್ನೊಂದು ಪಂದ್ಯದಲ್ಲಿ ಇಂಡೋನೇಶ್ಯದ ಹೆನ್ರಿಕೊ ಖೊ ವಿಬೊವೊ ಅವರನ್ನು 21-16, 21-16 ಗೇಮ್‌ಗಳಿಂದ ಸೋಲಿಸಿದರೆ ಸಿರಿಲ್ ವರ್ಮ ಅವರು ಇಂಡೋನೇಶ್ಯದ ಸಪುತ್ರ ವಿಕಿ ಅಂಘ ಅವರನ್ನು 21-14, 21-16 ಗೇಮ್‌ಗಳಿಂದ ಸದೆಬಡಿದರು. ಆದರೆ ಯುವ ಶಟ್ಲರ್‌ಗಳಾದ ಸಾಹಿಲ್ ಸಿಪಾನಿ ಮತ್ತು ನೀರಜ್ ವಶಿಷ್ಟ್ ಅವರು ದ್ವಿತೀಯ ಸುತ್ತಿನಲ್ಲಿ ನೇರ ಗೇಮ್‌ಗಳಿಂದ ಸೋತು ಹೊರಬಿದ್ದರು. ಸಾಹಿಲ್ ಅವರು 11ನೇ ಶ್ರೇಯಾಂಕದ ಚೈನೀಸ್ ತೈಪೆಯ ಲಿನ್ ಯು ಸಿಯೆನ್ ಅವರೆದುರು 9-21, 8-21 ಗೇಮ್‌ಗಳಿಂದ ಸೋತರೆ ನೀರಜ್ ಆಸ್ಟ್ರೇಲಿಯದ ಜೋಯ್ ವಿರುದ್ಧ 16-21, 13-21 ಗೇಮ್‌ಗಳಿಂದ ಪರಾಭವಗೊಂಡರು.
Related Articles
Advertisement
ವನಿತೆಯರ ಡಬಲ್ಸ್‌ನಲ್ಲಿ ಸನ್ಯೋಗಿತಾ ಘೋರ್ಪಡೆ ಮತ್ತು ಪ್ರಜಕ್ತಾ ಸಾವಂತ್ ಅವರು ನಾಲ್ಕನೇ ಶ್ರೇಯಾಂಕದ ಜಪಾನಿನ ಅಯಕೊ ಸಕುರಮೊಟೊ ಮತ್ತು ಯುಕಿಕೊ ತಕಹತಾ ಅವರೆದುರು 15-21, 18-21 ಗೇಮ್‌ಗಳಿಂದ ಶರಣಾದರು.