Advertisement

Badminton ಪುರುಷರ ಡಬಲ್ಸ್‌ :ಚಿರಾಗ್‌-ಸಾತ್ವಿಕ್‌ ಮರಳಿ ನಂಬರ್‌ 1

11:45 PM Jan 23, 2024 | Team Udayavani |

ಹೊಸದಿಲ್ಲಿ: ಭಾರತದ ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ವಿಶ್ವ ಬ್ಯಾಡ್ಮಿಂಟನ್‌ ಪುರುಷರ ಡಬಲ್ಸ್‌ ರ್‍ಯಾಂಕಿಂಗ್‌ನಲ್ಲಿ ಮರಳಿ ನಂ.1 ಸ್ಥಾನ ಅಲಂಕರಿಸಿದ್ದಾರೆ. ಅವರು ಈ ಎತ್ತರ ತಲುಪುತ್ತಿರುವುದು ಇದು 2ನೇ ಸಲ.

Advertisement

ಏಷ್ಯನ್‌ ಗೇಮ್ಸ್‌ ಚಾಂಪಿಯನ್‌ ಆಗಿರುವ ಚಿರಾಗ್‌-ಸಾತ್ವಿಕ್‌ ಕಳೆದ ಮಲೇಷ್ಯಾ ಓಪನ್‌ ಮತ್ತು ತವರಿನ ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಗಳೆರಡರಲ್ಲೂ ರನ್ನರ್ ಅಪ್‌ ಆಗುವ ಮೂಲಕ ಅಗ್ರಸ್ಥಾನಿಯಾದರು.

ಪುರುಷರ ಸಿಂಗಲ್ಸ್‌ನಲ್ಲಿ ಎಚ್‌.ಎಸ್‌. ಪ್ರಣಯ್‌ ಒಂದು ಸ್ಥಾನ ಮೇಲೇರಿದ್ದು, 8ನೇ ಸ್ಥಾನ ತಲುಪಿದ್ದಾರೆ. ಉಳಿದಂತೆ ಲಕ್ಷ್ಯ ಸೇನ್‌ (19), ಕೆ. ಶ್ರೀಕಾಂತ್‌ (25) ಮತ್ತು ಪ್ರಿಯಾಂಶು ರಾಜಾವತ್‌ (30) ತಮ್ಮ ರ್‍ಯಾಂಕಿಂಗ್‌ ಸ್ಥಾನ ಕಾಯ್ದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next