Advertisement
ಹೈದರಾಬಾದ್‌ನಲ್ಲಿ ಕೋವಿಡ್-19 ಸೋಂಕು ಹೆಚ್ಚುತ್ತಿರುವ ಕಾರಣ ತೆಲಂಗಾಣ ಸರಕಾರ ಜೂ. 30ರ ತನಕ ಲಾಕ್‌ಡೌನ್ ವಿಸ್ತರಿಸಿದೆ. ಜುಲೈ ಒಂದರಿಂದ ಇದು ಸಡಿಲಿಕೆ ಯಾದೀತೆಂಬುದು ಬಿಎಐ ವಿಶ್ವಾಸ. ಆದರೆ ಕಳೆದ ತಿಂಗಳು “ಸಾಯ್’ ಕ್ರೀಡಾ ನಿಯಮಗಳನ್ನು ಸಡಿಲಿಸಿದ ಬಳಿಕ ಭಾರತದ ಕೆಲವು ಶಟ್ಲರ್ ಬೆಂಗಳೂರಿನ “ಪ್ರಕಾಶ್ ಪಡುಕೋಣೆ ಅಕಾಡೆಮಿಯಲ್ಲಿ (ಪಿಪಿಬಿಎ) ಅಭ್ಯಾಸ ಆರಂಭಿಸಿದ್ದಾರೆ. ಬೇರೆಲ್ಲೂ ಅಭ್ಯಾಸಕ್ಕೆ ಇಳಿದಿಲ್ಲ.
“ಕೋವಿಡ್-19ನಿಂದಾಗಿ ನಮ್ಮ ಆಟಗಾರರ ಅಭ್ಯಾಸಕ್ಕೆ ಬ್ರೇಕ್ ಬಿದ್ದಿದೆ. ಮುಂದಿನ ತಿಂಗಳಿಂದ ಲಾಕ್‌ಡೌನ್ ಸಡಿಲಿಕೆ ಆದೀತೆಂಬ ನಿರೀಕ್ಷೆಯಲ್ಲಿದ್ದೇವೆ. ಜು. ಒಂದರಿಂದ ಹೈದರಾಬಾದ್‌ನಲ್ಲಿ ಬ್ಯಾಡ್ಮಿಂಟನ್ ಅಭ್ಯಾಸ ಶಿಬಿರವನ್ನು ಆಯೋಜಿಸ ಬೇಕೆಂಬ ಯೋಜನೆ ನಮ್ಮದು. ಆದರೆ ಇದಕ್ಕೆ ರಾಜ್ಯ ಸರಕಾರದ ಅನುಮತಿ ಅತ್ಯಗತ್ಯ’ ಎಂದು ಬಿಎಐ ಕಾರ್ಯದರ್ಶಿ ಅಜಯ್ ಸಿಂಘಾನಿಯ ಹೇಳಿದರು. ಸೆಪ್ಟಂಬರ್ ತನಕ ಯಾವುದೇ ರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾವಳಿಗಳನ್ನು ಆಯೋಜಿಸಲು ಸಾಧ್ಯವಿಲ್ಲ ಎಂಬುದಾಗಿ ಅವರು ಸ್ಪಷ್ಟಪಡಿಸಿದರು. ಮಾರ್ಚ್‌ನಲ್ಲೇ ಮುಂದೂಡಿಕೆ
ಮಾರ್ಚ್ ತಿಂಗಳಲ್ಲೇ ಬಿಎಐ ಸೀನಿಯರ್ ನ್ಯಾಶನಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಮುಂದೂಡಿತ್ತು. ಇದು ಎ. 27ರಿಂದ ಮೇ 3ರ ತನಕ ಲಕ್ನೋದಲ್ಲಿ ನಡೆಯಬೇಕಿತ್ತು. ಹೈದರಾಬಾದ್ ಓಪನ್ ಸೂಪರ್-100, ಇಂಡಿಯಾ ಜೂನಿಯರ್ ಇಂಟರ್‌ನ್ಯಾಶನಲ್ ಗ್ರ್ಯಾನ್‌ಪ್ರಿ ಕೂಟ ಗಳನ್ನು ರದ್ದುಮಾಡಲಾಗಿದೆ.
Related Articles
Advertisement