Advertisement

ಇಂದಿನಿಂದ ಬ್ಯಾಡ್ಮಿಂಟನ್‌ ಏಶ್ಯನ್‌ ಮಿಕ್ಸೆಡ್‌ ಟೀಮ್‌ ಚಾಂಪಿಯನ್‌ಶಿಪ್

12:30 AM Mar 19, 2019 | Team Udayavani |

ಹೊಸದಿಲ್ಲಿ: ವಿಶ್ವದ 24ನೇ ರ್‍ಯಾಂಕಿನ ಎಚ್‌. ಎಸ್‌ ಪ್ರಣಯ್‌ ಹಾಗೂ ಸೌರಭ್‌ ವರ್ಮ ಮಾ. 19ರಂದು ಆರಂಭಗೊಳ್ಳಲಿರುವ “ಟಾಂಗ್‌ ಯುನ್‌ ಕೀ ಕಪ್‌’ (ಬ್ಯಾಡ್ಮಿಂಟನ್‌ ಏಶ್ಯನ್‌ ಮಿಕ್ಸೆಡ್‌ ಟೀಮ್‌ ಚಾಂಪಿಯನ್‌ಶಿಪ್‌) ಕೂಟದಲ್ಲಿ 13 ಸದಸ್ಯರ ಭಾರತದ ತಂಡವನ್ನು ಮುನ್ನಡೆಸಲಿದ್ದಾರೆ.

Advertisement

ಯುವ ಆಟಗಾರರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಭಾರತೀಯ ಬ್ಯಾಡ್ಮಿಂಟನ್‌ ಅಸೋಸಿಯೇಶನ್‌ ವನಿತಾ ವಿಭಾಗದಲ್ಲಿ 7 ಮಂದಿ ಕಿರಿಯರನ್ನು ಆಯ್ಕೆ ಮಾಡಿದೆ. ವನಿತಾ ತಂಡದ ಸಾರಥ್ಯ ರಾಷ್ಟ್ರೀಯ ಕೂಟದ ಸೆಮಿಫೈನಲಿಸ್ಟ್‌ 19 ವರ್ಷದ ಅಶ್ಮಿತಾ ಚಾಲಿಹಾ ಪಾಲಾಗಿದೆ. ಇವರಿಗೆ ವೈಷ್ಣವಿ ಭಾಲೆ ನೆರವು ನೀಡಲಿದ್ದಾರೆ. ರಾಷ್ಟ್ರೀಯ ವನಿತಾ ಡಬಲ್ಸ್‌ ಸ್ಪರ್ಧೆಯ ಪ್ರಶಸ್ತಿ ಜಯಿಸಿದ ಶಿಖಾ ಗೌತಮ್‌-ಅಶ್ವಿ‌ನಿ ಕೆ. ಭಟ್‌ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇವರೊಂದಿಗೆ ಋತುಪರ್ಣ ಪಾಂಡೆ, ಆರತಿ ಸಾರಾ ಸುನೀಲ್‌ ಹಾಗೂ ಯು.ಕೆ. ಮಿಥುಲಾ ಸ್ಪರ್ಧಿಸಲಿದ್ದಾರೆ.

ಪುರುಷರ ವಿಭಾಗದಲ್ಲಿ 2018ರ ಏಶ್ಯನ್‌ ಚಾಂಪಿಯನ್‌ಶಿಪ್‌ ಕಂಚಿನ ಪದಕ ವಿಜೇತ ಪ್ರಣಯ್‌ಗೆ 3 ಬಾರಿಯ ರಾಷ್ಟ್ರೀಯ ಚಾಂಪಿಯನ್‌ ಸೌರಭ್‌ ವರ್ಮ ಜತೆಯಾಗಲಿದ್ದಾರೆ. ವಿಶ್ವದ 45ನೇ ರ್‍ಯಾಂಕಿನ ಜೋಡಿ ಎಂ.ಆರ್‌. ಅರ್ಜುನ್‌-ಶ್ಲೋಕ್‌ ರಾಮಚಂದ್ರನ್‌ ಹಾಗೂ ಅರುಣ್‌ ಜಾರ್ಜ್‌-ಸಂಯಮ್‌ ಶುಕ್ಲಾ ಪುರುಷರ ಡಬಲ್ಸ್‌ ವಿಭಾಗದಲ್ಲಿ ಆಡಲಿದ್ದಾರೆ.

ಸೈನಾ, ಸಿಂಧುಗೆ ವಿಶ್ರಾಂತಿ
ಮುಂಬರುವ ಇಂಡಿಯ ಓಪನ್‌ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಬೇಕಾಗಿರುವುದರಿಂದ ಭಾರತದ ಅಗ್ರ ಬ್ಯಾಡ್ಮಿಂಟನ್‌ ಆಟಗಾರರಾದ ಸೈನಾ ನೆಹ್ವಾಲ್‌, ಪಿ.ವಿ. ಸಿಂಧು ಮತ್ತು ಕೆ. ಶ್ರೀಕಾಂತ್‌ ಅವರಿಗೆ ಈ ಕೂಟದಿಂದ ವಿಶ್ರಾಂತಿ ನೀಡಲಾಗಿದೆ.

“ಬಿ’ ಗುಂಪಿನಲ್ಲಿ ಭಾರತ
11 ತಂಡಗಳನ್ನು 4 ಗುಂಪುಗಳಾಗಿ ವಿಭಜಿಸಿದ್ದು, ಭಾರತ ತಂಡ ಚೈನೀಸ್‌ ತೈಪೆ, ಸಿಂಗಾಪುರ ಜತೆ “ಬಿ’ ಗುಂಪಿನಲ್ಲಿದೆ. ಗುಂಪಿನಲ್ಲಿ ಅಗ್ರ ಸ್ಥಾನ ಪಡೆದ 2 ತಂಡಗಳು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲಿವೆ.ಕಳೆದ ವರ್ಷ ಈ ಕೂಟದಲ್ಲಿ ಭಾರತ ಕ್ವಾರ್ಟರ್‌ ಪೈನಲ್‌ಗೆ ತಲುಪಿ ಥಾಯ್ಲೆಂಡ್‌ ವಿರುದ್ಧ ಸೋತು ನಿರಾಸೆ ಮೂಡಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next