Advertisement

Badiyadka ನಾಪತ್ತೆಯಾಗಿದ್ದ ಮಹಿಳೆ ಶವ ಹೊಳೆಯಲ್ಲಿ ಪತ್ತೆ

10:32 PM May 31, 2024 | Team Udayavani |

ಬದಿಯಡ್ಕ: ಔಷಧ ಖರೀದಿಸಲೆಂದು ಮನೆಯಿಂದ ಹೋಗಿ ನಾಪತ್ತೆಯಾಗಿದ್ದ ನಾರಂಪಾಡಿ ನಿವಾಸಿ ದಿ| ನಾರಾಯಣ ಅವರ ಪತ್ನಿ ಲೀಲಾವತಿ (60) ಅವರ ಮೃತದೇಹ ಕುಂಬಳೆ ಹೊಳೆಯಲ್ಲಿ ಪತ್ತೆಯಾಗಿದೆ.

Advertisement

ಪುತ್ರ ಪ್ರಮೋದ್‌ ಅವರ ಜತೆ ವಾಸಿಸುತ್ತಿದ್ದ ಲೀಲಾವತಿ ಅವರು ಸೋಮವಾರ ಬೆಳಗ್ಗೆ ಔಷಧ ತರಲೆಂದು ಮನೆಯಿಂದ ಹೊರಟಿದ್ದರು. ಆದರೆ ಸಂಜೆಯಾದರೂ ಮನೆಗೆ ವಾಪಸಾಗಲಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು.

ಪೊಲೀಸರು ತನಿಖೆ ನಡೆಸುತ್ತಿದ್ದಂತೆ ಲೀಲಾವತಿ ಅವರ ಆಟೋ ರಿಕ್ಷಾವೊಂದರಲ್ಲಿ ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸಮೀಪಕ್ಕೆ ತೆರಳಿದ್ದು ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಶೋಧ ನಡೆಸುತ್ತಿದ್ದಂತೆ ಮೃತದೇಹ ಹೊಳೆಯಲ್ಲಿ ಪತ್ತೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next