ಬದಿಯಡ್ಕ:ಏಳ್ಕಾನದಲ್ಲಿ ಪ್ರಿಯತಮೆಯನ್ನು ಕೊಂದು, ಮನೆಗೆ ಬೀಗ ಜಡಿದು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ತಿರುವನಂತಪುರದಲ್ಲಿ ಬಂಧಿಸಿದ್ದಾರೆ.
ವಯನಾಡು ಮೇಪ್ಪಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ತೃಕ್ಕೇಪಟ್ಟ ಮುಟ್ಟಿಲ್ ತಾಳ್ವರ ನಿವಾಸಿ ಆಂಟೋ ಸೆಬಾಸ್ಟಿಯನ್ (32) ಬಂಧಿತನಾಗಿದ್ದು, ಬದಿಯಡ್ಕ ಪೊಲೀಸರು ಅಲ್ಲಿಗೆ ತೆರಳಿದ್ದಾರೆ. ಶಾಜಿ ಎಂಬವರ ಬದಿಯಡ್ಕದಲ್ಲಿರುವ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಕಾರ್ಮಿಕನಾಗಿದ್ದ ಆರೋಪಿಯು ತನ್ನ ಜತೆಗೆ ವಾಸಿಸುತ್ತಿದ್ದ ಕೊಲ್ಲಂ ಕೊಟ್ಟಿಯಂ ನಿವಾಸಿ ನೀತುಕೃಷ್ಣ (30) ಎಂಬಾಕೆಯನ್ನು ಕೊಲೆಗೈದು ತಲೆಮರೆಸಿಕೊಂಡಿದ್ದ.
ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ನೀತುಕೃಷ್ಣ ಅವರ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.