ದಂತಕತೆಗಳನ್ನು ಕಣ್ಣಾರೆ ನೋಡುವ ಅವಕಾಶ ಎಲ್ಲರಿಗೂ, ಎಲ್ಲಾ ಸಮಯದಲ್ಲೂ ಸಿಗುವುದಿಲ್ಲ. ಅದರಲ್ಲೂ ಆಶಾ ಭೋಸ್ಲೆಯಂಥ ಸಂಗೀತ ಮೇರು ಪರ್ವತ ಹಾಡುವುದನ್ನು ನೋಡವುದೆಂದರೆ ಅದು ಜೀವನ ಪರ್ಯಂತ ನೆನಪಿಟ್ಟುಕೊಳ್ಳುವಂಥ ಸುವರ್ಣ ಘಳಿಗೆ.
ಬೆಂಗಳೂರಿಗರು ಇಂಥದ್ದೊಂದು ಸುವರ್ಣ ಘಳಿಗೆಗೆ ಸಾಕ್ಷಿಯಾಗಬಹುದಾದ ಸಮಯ ಬಂದಿದೆ. 20 ಭಾಷೆಗಳಲ್ಲಿ 12,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಮತ್ತು ಅದೇ ಕಾರಣಕ್ಕೆ ಗಿನ್ನೆಸ್ ದಾಖಲೆಗೂ ಪಾತ್ರರಾಗಿರುವ ಆಶಾ ಭೋಸ್ಲೆಯವರು ಮೊತ್ತ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಹಾಡುತ್ತಿದ್ದಾರೆ.
ಸಿನಿಮಾ ಸಂಗೀತ, ಪಾಪ್, ಗಜಲ್, ಭಜನೆ, ಶಾಸ್ತ್ರೀಯ, ಜಾನಪದ ಮತ್ತು ಕವ್ವಾಲಿ ಹೀಗೆ ಬಹುತೇಕ ಪ್ರಕಾರದ ಸಂಗೀತ ಸವಿಯನ್ನು ಶ್ರೋತೃಗಳಿಗೆ ಆಶಾ ಅವರು ಉಣಬಡಿಸಲಿದ್ದಾರೆ. ಅವರಿಗೆ ಖ್ಯಾತ ಬಾಲಿವುಡ್ ಯುವಗಾಯಕ ಜಾವೇದ್ ಅವರು ಸಾಥ್ ನೀಡಲಿದ್ದಾರೆ. ಕಾರ್ಯಕ್ರಮ ಏರ್ಪಾಡಾಗಿರುವುದು ಮುಂದಿನ ತಿಂಗಳ ಎರಡನೇ ವಾರವಾದರೂ ಟಿಕೆಟ್ ಬುಕ್ಕಿಂಗ್ ಈಗಾಗಲೇ ಶುರುವಾಗಿದೆ. ಈಗಲೇ ಸೀಟುಗಳನ್ನು ಕಾಯ್ದಿರಿಸುವುದು ಉತ್ತಮ.
ಎಲ್ಲಿ?: ಫೀನಿಕ್ಸ್ ಮಾರ್ಕೆಟ್ ಸಿಟಿ ಮಾಲ್, ವೈಟ್‌ಫೀಲ್ಡ್
ಯಾವಾಗ?: ಜೂನ್ 9, ಸಂಜೆ 7ರಿಂದ ಶುರು
ಬುಕ್ಕಿಂಗ್: ಬುಕ್ ಮೈ ಶೋ