ಮುಂಬಯಿ: ಬಾಲಿವುಡ್ ನಲ್ಲಿ ಈ ವಾರ ಎರಡು ಬಹುನಿರೀಕ್ಷಿತ ಸಿನಿಮಾಗಳು ರಿಲೀಸ್ ಆಗಿದೆ. ಈದ್ ಹಬ್ಬದ ಸಂದರ್ಭದಲ್ಲಿ ಥಿಯೇಟರ್ಗೆ ಎಂಟ್ರಿ ಕೊಟ್ಟ ಈ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲೂ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದೆ.
ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಅವರ ʼಬಡೇ ಮಿಯಾನ್ ಚೋಟೆ ಮಿಯಾನ್ʼ ಅಜಯ್ ದೇವಗನ್ ಅವರ ಸ್ಪೋರ್ಟ್ಸ್ ಬಯೋಪಿಕ್ ʼಮೈದಾನ್ʼ ಜೊತೆಯಾಗಿ ರಿಲೀಸ್ ಆಗಿದೆ.
ಭಾರತದ ಫುಟ್ಬಾಲ್ ಕೋಚ್ ಸೈಯದ್ ಅಬ್ದುಲ್ ರಹೀಮ್ ಅವರ ಜೀವನದ ಕಥೆಯನ್ನೊಳಗೊಂಡಿದ್ದು, ಸ್ಪೂರ್ತಿದಾಯಕವಾಗಿ ಮೂಡಿಬಂದಿದೆ. ಮೊದಲ ದಿನ ಬಾಕ್ಸ್ ಆಫೀಸ್ ನಲ್ಲಿ ಅಜಯ್ ದೇವಗನ್ ಅವರ ಸಿನಿಮಾ 7.10 ಕೋಟಿ ರೂಪಾಯಿ ಗಳಿಸಿದೆ. ಆ ಮೂಲಕ ಡಿಸೆಂಟ್ ಓಪನಿಂಗ್ ಪಡೆದುಕೊಂಡಿದೆ.
ಅಮಿತ್ ಶರ್ಮಾ ರವೀಂದ್ರನಾಥ್ ನಿರ್ದೇಶನದ ಈ ಸಿನಿಮಾದಲ್ಲಿ ಅಜಯ್ ದೇವಗನ್, ಪ್ರಿಯಾಮಣಿ, ಗಜರಾಜ್ ರಾವ್, ರುದ್ರನೀಲ್ ಘೋಷ್ ಮುಂತಾದವರು ನಟಿಸಿದ್ದಾರೆ.
ಇನ್ನು ಈ ವರ್ಷ ಬಾಲಿವುಡ್ ನ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದೆನ್ನುವ ಹೈಪ್ ಹೆಚ್ಚಿಸಿದ ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ಅವರ ʼಬಡೇ ಮಿಯಾನ್ ಚೋಟೆ ಮಿಯಾನ್ʼ ಸಿನಿಮಾಕ್ಕೂ ಭರ್ಜರಿ ಆರಂಭ ಸಿಕ್ಕಿದೆ.
ಗುರುವಾರ(ಏ.11 ರಂದು) 15.50 ಕೋಟಿ ರೂ. ಗಳಿಸಿದೆ. ಆ ಮೂಲಕ ಹೃತಿಕ್ – ದೀಪಿಕಾ ಅವರ ʼಫೈಟರ್ʼ ಬಳಿಕ 2024 ರ ಎರಡನೇ ಅತ್ಯಧಿಕ ಓಪನಿಂಗ್ ಪಡೆದ ಸಿನಿಮಾವಾಗಿ ಹೊರಹೊಮ್ಮಿದೆ.
ದೇಶ ಪ್ರೇಮ ಸಾರುವ ಸಿನಿಮಾದಲ್ಲಿ ಅಕ್ಷಯ್, ಟೈಗರ್ರ ಶ್ರಾಫ್ ಮಿಂಚಿದ್ದಾರೆ. ಪೃಥ್ವಿರಾಜ್ ಸುಕುಮಾರನ್ ತಮ್ಮ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ.
ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ ಈ ಸಿನಿಮಾದಲ್ಲಿಸೋನಾಕ್ಷಿ ಸಿನ್ಹಾ, ಮಾನುಷಿ ಛಿಲ್ಲರ್ ಮತ್ತು ಅಲೆಯಾ ಎಫ್ ಮುಂತಾದವರು ನಟಿಸಿದ್ದಾರೆ.