Advertisement

ಡಾಲಿ ಸ್ನೇಹಕ್ಕೆ ಸಾಕ್ಷಿಯಾದ ‘ಬಡವ ರಾಸ್ಕಲ್‌’

11:06 AM Dec 21, 2021 | Team Udayavani |

ಧನಂಜಯ್‌ ಮೊದಲ ಬಾರಿಗೆ ನಿರ್ಮಿಸಿರುವ “ಬಡವ ರಾಸ್ಕಲ್‌’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಡಿ.24ರಂದು ತೆರೆಕಾಣಲಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡು, ಟೀಸರ್‌, ಟ್ರೇಲರ್‌ ಎಲ್ಲವೂ ಹಿಟ್‌ಲಿಸ್ಟ್‌ ಸೇರಿದೆ.

Advertisement

ಇದೇ ಖುಷಿಯಲ್ಲಿದ್ದ ನಾಯಕ ಧನಂಜಯ್‌ ಇತ್ತೀಚೆಗೆ ಚಿತ್ರದ ಪ್ರೀ ರಿಲೀಸ್‌ ಇವೆಂಟ್‌ ಆಯೋಜಿಸಿದ್ದರು. ಈ ಇವೆಂಟ್‌ ಕೇವಲ ಒಂದು ಸಿನಿಮಾ ಕಾರ್ಯಕ್ರಮವಾಗದೇ, ಡಾಲಿ ಧನಂಜಯ್‌ ಅವರ ಸ್ನೇಹಕ್ಕೆ ಸಾಕ್ಷಿಯಾಯಿತು. ಚಿತ್ರರಂಗದ ಬಹುತೇಕ ಮಂದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ “ಬಡವ ರಾಸ್ಕಲ್‌’ಗೆ ಶುಭಕೋರಿದರು.

ಇದನ್ನೂ ಓದಿ:ಯುಎಇನಲ್ಲಿ ಇನ್ನು ಸೆನ್ಸಾರ್‌ ಫ್ರೀ; 21 ವರ್ಷ ಮೇಲ್ಪಟ್ಟವರಿಗೆ ವೀಕ್ಷಣೆಯ ಹೊಸ ವ್ಯವಸ್ಥೆ

ನಟ ಶಿವರಾಜ್‌ಕುಮಾರ್‌, ದುನಿಯಾ ವಿಜಯ್‌, ಲೂಸ್‌ ಮಾದ ಯೋಗಿ, ನೀನಾಸಂ ಸತೀಶ್‌, ವಸಿಷ್ಠ ಸಿಂಹ, ನಟಿ ರಚಿತಾ ರಾಮ್‌, ನಿಧಿ ಸುಬ್ಬಯ್ಯ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ಕಲಾವಿದರು, ನಿರ್ಮಾಪಕ, ನಿರ್ದೇಶಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಧನಂಜಯ್‌ ಅವರ ಶ್ರಮ, ಕನಸಿನ ಬಗ್ಗೆ ಮಾತನಾಡಿದರು.

ಎಲ್ಲರ ಮಾತಲ್ಲೂ”ಬಡವ ರಾಸ್ಕಲ್‌’ ಬಗೆಗಿನ ಕುತೂಹಲ ಎದ್ದು ಕಾಣುತ್ತಿತ್ತು. ಶಿವರಾಜ್‌ಕುಮಾರ್‌ ಚಿತ್ರವನ್ನು ಫ‌ಸ್ಟ್‌ ಡೇ ಫ‌ಸ್ಟ್‌ ಶೋ ಮೈಸೂರಿನಲ್ಲಿ ನೋಡುವುದಾಗಿ ಹೇಳಿದರು. “ಬಡವ ರಾಸ್ಕಲ್‌’ ಚಿತ್ರವನ್ನು ಶಂಕರ್‌ ಗುರು ನಿರ್ದೇಶಿಸಿದ್ದು, ಅಮೃತಾ ಅಯ್ಯಂಗಾರ್‌ ನಾಯಕಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next