Advertisement

Budaun: ಇಬ್ಬರು ಮಕ್ಕಳ ಹತ್ಯೆ ಪ್ರಕರಣ… 2ನೇ ಆರೋಪಿಯನ್ನು ಕೊಲ್ಲಬೇಡಿ ಎಂದ ಮಕ್ಕಳ ತಂದೆ

04:21 PM Mar 21, 2024 | Team Udayavani |

ಉತ್ತರ ಪ್ರದೇಶ: ಬದಿ ಮನೆಗೆ ನುಗ್ಗಿ ಇಬ್ಬರು ಅಮಾಯಕ ಮಕ್ಕಳನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಎರಡನೇ ಆರೋಪಿಯನ್ನು ಇಂದು ಬಂಧಿಸಿದ್ದಾರೆ.

Advertisement

ಉತ್ತರ ಪ್ರದೇಶದ ಬದೌನ್​ನಲ್ಲಿ ಬುಧವಾರ ನಡೆದ ಘೋರ ಘಟನೆಯಲ್ಲಿ ಕ್ಷೌರಿಕನೊಬ್ಬ ಪಕ್ಕದ ಮನೆಗೆ ನುಗ್ಗಿ ಮೂವರು ಮಕ್ಕಳ ಮೇಲೆ ಹರಿತವಾದ ಆಯುಧದಿಂದ ದಾಳಿ ನಡೆಸಿದ್ದ ಈ ಘಟನೆಯಲ್ಲಿ ಇಬ್ಬರು ಮಕ್ಕಳು ಅಸುನೀಗಿದ್ದು ಓರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಘಟನೆಯಲ್ಲಿ ಪ್ರಮುಖ ಆರೋಪಿಯಾದ ಸಾಜಿದ್ ನನ್ನು ಪೊಲೀಸರು ಬಂಧಿಸಲು ಹೋದ ವೇಳೆ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದ ಈ ವೇಳೆ ಆತನನ್ನು ಪೊಲೀಸರು ಎನಕೌಂಟರ್ ನಡೆಸಿದ್ದಾರೆ. ಇದಾದ ಬಳಿಕ ಇನ್ನೋರ್ವ ಆರೋಪಿಯಾಗಿರುವ ಸಾಜಿದ್ ನ ಸಹೋದರ ಜಾವೇದ್​ ನನ್ನು ಪತ್ತೆಹಚ್ಚುವ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದರು ಅಲ್ಲದೆ ಆತನ ಪತ್ತೆಗೆ ೨೫ ಸಾವಿರ ರೂಪಾಯಿ ಬಹುಮಾನವನ್ನು ಪೊಲೀಸರು ಘೋಷಿಸಿದ್ದರು.

ಅದರಂತೆ ಇಂದು (ಗುರುವಾರ) ಎರಡನೇ ಆರೋಪಿಯಾದ ಜಾವೇದ್ ನನ್ನ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಎನ್​ಕೌಂಟರ್​ ಮಾಡಬೇಡಿ:
ಇತ್ತ ಮಕ್ಕಳ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಜಾವೇದ್ ಬಂಧನ ಸುದ್ದಿ ಗೊತ್ತಾಗುತ್ತಿದ್ದಂತೆ ಹತ್ಯೆಯಾದ ಮಕ್ಕಳ ತಂದೆ ವಿನೋದ್ ಕುಮಾರ್ ಆರೋಪಿ ಜಾವೇದ್ ನನ್ನ ಎನ್​ಕೌಂಟರ್​ ಮಾಡಬೇಡಿ ಎಂದು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ಆರೋಪಿಗಳನ್ನು ಎನ್​ಕೌಂಟರ್​ ಮಾಡಿದರೆ ನನ್ನ ಮಕ್ಕಳ ಹತ್ಯೆ ಯಾವ ಉದ್ದೇಶಕ್ಕೆ ಮಾಡಲಾಗಿದೆ ಎಂಬುದು ತಿಳಿಯುವುದು ಕಷ್ಟ ಸಾಧ್ಯವಾಗುತ್ತದೆ ಹಾಗಾಗಿ ಯಾವುದೇ ಕಾರಣಕ್ಕೂ ಎನ್​ಕೌಂಟರ್​ ಮಾಡಬೇಡಿ ಎಂದು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Advertisement

ಮರಣೋತ್ತರ ಪರೀಕ್ಷೆ ವರದಿಯಲ್ಲೇನಿದೆ:
ನಿನ್ನೆ ಹತ್ಯೆಗೀಡಾದ ಇಬ್ಬರು ಮಕ್ಕಳಾದ ಆಯುಷ್(12) ಮತ್ತು ಅಹಾನ್‌ (6) ಅವರ ಮರಣೋತ್ತರ ಪರೀಕ್ಷಾ ವರದಿ ಬಂದಿದ್ದು ಅದರಂತೆ ಅಹಾನ್‌ಗೆ 23 ಬಾರಿ ಚಾಕುವಿನಿಂದ ಇರಿದಿರುವುದು ಬೆಳಕಿಗೆ ಬಂದಿದೆ ಜೊತೆಗೆ ಅಹಾನ್ ದೇಹದ ಭಾಗದಲ್ಲಿ 9 ಬಾರಿ ಇರಿದ ಗುರುತುಗಳು ಪತ್ತೆಯಾಗಿವೆ ಎಂದು ವರದಿಯಲ್ಲಿ ಪತ್ತೆಯಾಗಿವೆ.

ಇದನ್ನೂ ಓದಿ: IPL 2024: ನಾಯಕತ್ವ ತೊರೆದ ಎಂ.ಎಸ್.ಧೋನಿ; ಸಿಎಸ್ ಕೆ ತಂಡಕ್ಕೆ ಹೊಸ ಸಾರಥಿ

Advertisement

Udayavani is now on Telegram. Click here to join our channel and stay updated with the latest news.

Next