Advertisement
ಉತ್ತರ ಪ್ರದೇಶದ ಬದೌನ್ನಲ್ಲಿ ಬುಧವಾರ ನಡೆದ ಘೋರ ಘಟನೆಯಲ್ಲಿ ಕ್ಷೌರಿಕನೊಬ್ಬ ಪಕ್ಕದ ಮನೆಗೆ ನುಗ್ಗಿ ಮೂವರು ಮಕ್ಕಳ ಮೇಲೆ ಹರಿತವಾದ ಆಯುಧದಿಂದ ದಾಳಿ ನಡೆಸಿದ್ದ ಈ ಘಟನೆಯಲ್ಲಿ ಇಬ್ಬರು ಮಕ್ಕಳು ಅಸುನೀಗಿದ್ದು ಓರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
Related Articles
ಇತ್ತ ಮಕ್ಕಳ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಜಾವೇದ್ ಬಂಧನ ಸುದ್ದಿ ಗೊತ್ತಾಗುತ್ತಿದ್ದಂತೆ ಹತ್ಯೆಯಾದ ಮಕ್ಕಳ ತಂದೆ ವಿನೋದ್ ಕುಮಾರ್ ಆರೋಪಿ ಜಾವೇದ್ ನನ್ನ ಎನ್ಕೌಂಟರ್ ಮಾಡಬೇಡಿ ಎಂದು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ ಆರೋಪಿಗಳನ್ನು ಎನ್ಕೌಂಟರ್ ಮಾಡಿದರೆ ನನ್ನ ಮಕ್ಕಳ ಹತ್ಯೆ ಯಾವ ಉದ್ದೇಶಕ್ಕೆ ಮಾಡಲಾಗಿದೆ ಎಂಬುದು ತಿಳಿಯುವುದು ಕಷ್ಟ ಸಾಧ್ಯವಾಗುತ್ತದೆ ಹಾಗಾಗಿ ಯಾವುದೇ ಕಾರಣಕ್ಕೂ ಎನ್ಕೌಂಟರ್ ಮಾಡಬೇಡಿ ಎಂದು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ.
Advertisement
ಮರಣೋತ್ತರ ಪರೀಕ್ಷೆ ವರದಿಯಲ್ಲೇನಿದೆ: ನಿನ್ನೆ ಹತ್ಯೆಗೀಡಾದ ಇಬ್ಬರು ಮಕ್ಕಳಾದ ಆಯುಷ್(12) ಮತ್ತು ಅಹಾನ್ (6) ಅವರ ಮರಣೋತ್ತರ ಪರೀಕ್ಷಾ ವರದಿ ಬಂದಿದ್ದು ಅದರಂತೆ ಅಹಾನ್‌ಗೆ 23 ಬಾರಿ ಚಾಕುವಿನಿಂದ ಇರಿದಿರುವುದು ಬೆಳಕಿಗೆ ಬಂದಿದೆ ಜೊತೆಗೆ ಅಹಾನ್ ದೇಹದ ಭಾಗದಲ್ಲಿ 9 ಬಾರಿ ಇರಿದ ಗುರುತುಗಳು ಪತ್ತೆಯಾಗಿವೆ ಎಂದು ವರದಿಯಲ್ಲಿ ಪತ್ತೆಯಾಗಿವೆ. ಇದನ್ನೂ ಓದಿ: IPL 2024: ನಾಯಕತ್ವ ತೊರೆದ ಎಂ.ಎಸ್.ಧೋನಿ; ಸಿಎಸ್ ಕೆ ತಂಡಕ್ಕೆ ಹೊಸ ಸಾರಥಿ