Advertisement
ಇತರೆ ಆರೋಪಿಗಳ ವಿಚಾರಣೆ ವೇಳೆ ಮಾಹಿತಿ ಸಿಕ್ಕ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಇದೇ ಏ.19ರಂದು ರಾತ್ರಿ ಪಾದರಾಯನಪುರದ ಅರ್ಫತ್ ನಗರಕ್ಕೆ ಕೊರೊನಾ ಸೋಂಕಿತರನ್ನು ಕ್ವಾರಂಟೈನ್ ಮಾಡಲು ಬಂದಿದ್ದ ಪೊಲೀಸರು, ಆರೋಗ್ಯಾಧಿಕಾರಿಗಳ ಮೇಲೆ ನಡೆಸಿ ದಾಂಧಲೆ ಮಾಡಲಾಗಿತ್ತು. ಆರೋಪಿಗಳ ಪೈಕಿ ಒಬ್ಟಾತ ಮಾರಕಾಸ್ತ್ರಗಳಿಂದ ಹತ್ಯೆಗೂ ಯತ್ನಿಸಿದ್ದ. ಈ ಗಲಭೆಗೂ ಮೊದಲು ಇರ್ಫಾನ್ ತನ್ನ ಮನೆಗೆ ಬಂಧಿತೆ ಫರೋಜಾ, ಇನ್ನಿತರೆ ಆರೋಪಿಗಳನ್ನು ಕರೆಸಿ ದಾಂಧಲೆಗೆಸಂಚು ರೂಪಿಸಿದ್ದ. ಅಲ್ಲದೆ, “ಕ್ವಾರಂಟೈನ್ ಮಾಡಲು ಯಾರೇ ಬಂದರೂ ಅವಕಾಶ ಕೊಡಬೇಡಿ. ಹಲ್ಲೆ ನಡೆಸಿ ಎಂದು ಪ್ರಚೋದನೆ ನೀಡಿದ್ದ. ಗಲಾಟೆ ವೇಳೆ ಫರೋಜಾ ಜತೆ ಸೇರಿ ಗಲಾಟೆಗೆ ಕುಮ್ಮಕ್ಕು ನೀಡಿದ್ದ. ಈತನ ಹಿಂದೆ ಇನ್ನಷ್ಟು ಮಂದಿ ಕೈವಾಡವಿರುವ ಅನುಮಾನವಿದೆ. ಹಲವು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ’ ಎಂದು ಪೊಲೀಸರು ಹೇಳಿದರು. ಗುಜರಿ ವ್ಯಾಪಾರ ಮಾಡಿಕೊಂಡಿರುವ ಆರೋಪಿ, ಕೃತ್ಯ ಎಸಗಿದ ಬಳಿಕ ಬೇರೆ ಊರುಗಳಿಗೆ ಹೋಗಲು ಸಿದ್ಧತೆ ನಡೆಸಿದ್ದ. ಆದರೆ, ಎಲ್ಲೆಡೆ ಲಾಕ್‌ಡೌನ್ ಹಾಗೂ ಪೊಲೀಸ್ ತಪಾಸಣೆ ನಡೆಯುತ್ತಿದ್ದರಿಂದ ಎಲ್ಲಿಯೂ ಹೋಗಲು ಸಾಧ್ಯವಾಗಿಲ್ಲ ಎಂದು ಪೊಲೀಸರು ಹೇಳಿದರು.