Advertisement
ಮಲ್ಪೆ: ಬಡಾನಿಡಿಯೂರು ಹಿರಿಯ ಪ್ರಾಥಮಿಕ ಶಾಲೆ ತೊಟ್ಟಂ- ಬಡಾನಿಡಿಯೂರು ಗ್ರಾಮದ ಕರಾವಳಿಯ ತೀರದ ಬಡ ಮೀನುಗಾರರ ಮತ್ತು ಕೂಲಿ ಕಾರ್ಮಿಕರ ಮಕ್ಕಳಿಗೆ ಜ್ಞಾನದೇಗುಲವಾಗಿ ಬದುಕಿಗೆ ಬೆಳಕಾಗಿತ್ತು.
ಸರಕಾರದ ಉಚಿತ ಪಠ್ಯಪುಸ್ತಕ, ಬಿಸಿಯೂಟ, ಶೂ, ಸಾಕ್ಸ್ ಅಲ್ಲದೆ, ದಾನಿಗಳಾದ ರಮೇಶ್ ಕೋಟ್ಯಾನ್, ಪ್ರಸಾದ್‌ರಾಜ್ ಕಾಂಚನ್, ಗಣೇಶ್ ಪ್ರಸಾದ್ ಭಟ್ ಹೈದರಾಬಾದ್, ಉಮೇಶ್ ಪೂಜಾರಿ, ಸಚಿನ್ ಕೋಟ್ಯಾನ್, ಸುರೇಶ್ ಶೆಟ್ಟಿ, ರಫೀಕ್ ಸಾಹೇಬ್, ರಾಮಚಂದ್ರ ಕುಂದರ್, ಪ್ರಭಾಕರ ಪೂಜಾರಿ ಹಾಗೂ ಯಾಂತ್ರಿಕ ಮೀನುಗಾರ ಸಹಕಾರಿ ಸಂಘವು ನೋಟು ಪುಸ್ತಕ, ಶಾಲಾ ಬ್ಯಾಗ್ ಸೇರಿದಂತೆ ಶಾಲೆಗೆ ಬೇಕಾದ ಎಲ್ಲ ಅಗತ್ಯ ಸೌಲಭ್ಯಗಳನ್ನು ನಿರಂತರವಾಗಿ ಪೂರೈಸುತ್ತಾ ಶಾಲೆಯ ಬೆನ್ನೆಲುಬಾಗಿ ನಿಂತಿದ್ದಾರೆ. ಮಕ್ಕಳಿಗೆ ಶಾಲಾ ವಾಹನ ವ್ಯವಸ್ಥೆ ಹಾಗೂ ನಿರ್ವಹಣೆಗೆ ದಾನಿಗಳ ಜತೆಯಲ್ಲಿ ಇಲ್ಲಿನ ಶಿಕ್ಷಕ ವರ್ಗವೂ ಕೈಜೋಡಿಸುತ್ತಿರುವುದು ಗಮನಾರ್ಹವಾಗಿದೆ.
Related Articles
ಸರ್ವ ಶಿಕ್ಷಣ ಅಭಿಯಾನದ 2009ರಲ್ಲಿ ಎರಡು ತರಗತಿ, 2012ರಲ್ಲಿ ಒಂದು ತರಗತಿ ಕೋಣೆಯನ್ನು ಈಗಾಗಲೇ ನಿರ್ಮಿಸಲಾಗಿದೆ. ಅಕ್ಷರ ದಾಸೋಹ ಕಟ್ಟಡ, ಶುದ್ಧ ಕುಡಿಯುವ ನೀರಿನ ಘಟಕ, ರಂಗಮಂಟಪ, ಶೌಚಾಲಯ ವ್ಯವಸ್ಥೆಗಳನ್ನು ಹೊಂದಿದೆ.
ಹೆಮ್ಮೆಯ ಮುಖ್ಯೋಪಾಧ್ಯಾಯರು,
ಹಳೆ ವಿದ್ಯಾರ್ಥಿಗಳು
Advertisement
ಕೂರಾಡಿ ಸೀತಾರಾಮ ಅಡಿಗ, ಕುಶಲ ಶೆಟ್ಟಿ, ಮಂಜುನಾಥ ಗಾಣಿಗ, ಕರುಣಾಕರ ಮಾಸ್ತರ್, ಶಫಿ ಅಹಮ್ಮದ್, ವಿಟuಲ ಯು. ಮುಂತಾದವರು ಮುಖೋÂಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದರು.
ಯಕ್ಷಗಾನ, ನಾಟಕ, ಕ್ರೀಡೆ ಸೇರಿದಂತೆ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಹಲವಾರು ಮಂದಿ ಇಲ್ಲಿಯ ಹಳೆವಿದ್ಯಾರ್ಥಿಗಳಾಗಿದ್ದಾರೆ. ಪ್ರಸ್ತುತ ಎರಡು ಮೂರು ವರ್ಷದ ಹಿಂದಿನ ವಿದ್ಯಾರ್ಥಿಗಳು ಆತ್ಲೆಟಿಕ್ಸ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ಪದಕವನ್ನು ಪಡೆದಿದ್ದಾರೆ.
ಆಂಗ್ಲಮಾದ್ಯಮ ಪೈಪೋಟಿ ಎದುರಿಸಲು ಶಾಲೆಯಲ್ಲಿ ಮಕ್ಕಳಿಗೆ ಇಂಗ್ಲಿಷ್ ಭಾಷಾ ಬೋಧನೆಗೆ ಸ್ನಾತಕೋತ್ತರ ಪದವಿ ಪಡೆದ ಶಿಕ್ಷಕಿಯನ್ನು ನೇಮಿಸಲಾಗಿದೆ. ದಾನಿಗಳ ಸಹಕಾರದಿಂದ ಶಾಲಾ ಮಕ್ಕಳಿಗೆ ಇಲಾಖೆಯ ಸೌಲಭ್ಯಗಳಲ್ಲದೆ ಉಚಿತ ನೋಟ್ ಪುಸ್ತಕ, ಸಮವಸ್ತ್ರ ಸಾರಿಗೆ ವ್ಯವಸ್ಥೆಗಳನ್ನು ಒದಗಿಸಿ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ.-ದಿನಕರ ಶೆಟ್ಟಿ,ಮುಖ್ಯ ಶಿಕ್ಷಕರು ಈ ಶಾಲೆಯಲ್ಲಿ ಕಲಿತು ಹೊರರಾಜ್ಯ ಹೊರದೇಶದಲ್ಲಿ ಇರುವವವರು ಹೆಚ್ಚು ಮಂದಿ ಇದ್ದಾರೆ ಅವರೆಲ್ಲರನ್ನು ಸಂಪರ್ಕ ಮಾಡಿ ಶಾಲೆಯನ್ನು ಇನ್ನಷ್ಟು ಅಭಿವೃದ್ದಿಪಡಿಸುವ ಯೋಜನೆ ಇದೆ. ಅಕ್ಷರ ಕಲಿಸಿದ ಈ ಕನ್ನಡ ಶಾಲೆಯನ್ನು ಎಲ್ಲ ಹಳೆ ವಿದ್ಯಾರ್ಥಿಗಳು ಒಟ್ಟಾಗಿ ಉಳಿಸಿ ಬೆಳೆಸುವಲ್ಲಿ ಸಹಕಾರ ನೀಡಬೇಕಾಗಿದೆ.
-ಸುರೇಶ ಬಂಗೇರ ತೊಟ್ಟಂ, ಹಳೆವಿದ್ಯಾರ್ಥಿ -ನಟರಾಜ್ ಮಲ್ಪೆ