Advertisement

ಬಾಡಗರಕೇರಿ: ಆನೆಗುಂದಿ ಸಂಪರ್ಕ  ಸೇತುವೆ ಉದ್ಘಾಟನೆ

01:00 AM Mar 07, 2019 | Harsha Rao |

ಗೋಣಿಕೊಪ್ಪಲು: ಹೈಸೊಡ್ಲುರು ಬಾಡಗರಕೇರಿ ಸಂಪರ್ಕ ರಸ್ತೆ ಕಾಮಗರಿ ಮುಗಿದಿರುವುದರಿಂದ ಈ ಭಾಗದ ಜನತೆಗೆ ಅನುಕೂಲವಾಗಲಿದೆ ಎಂದು ಸಂಸದ ಪ್ರತಾಪ್‌ ಸಿಂಹ ಕಿಟkn ಹೇಳಿದರು.

Advertisement

ಪ್ರಧಾನ್‌ ಮಂತ್ರಿ ಗ್ರಾಮ ಸಡಕ್‌ ಯೋಜನೆಯಲ್ಲಿ ರೂ 2.60ಕೋಟಿ ವಚ್ಚದಲ್ಲಿ ನಿರ್ಮಾಣಗೊಂಡಿರುವ ಆನೆಗುಂದಿ ಸಂಪರ್ಕ  ಸೇತುವೆಯನ್ನು ಸೋಮವಾರ ಉದ್ಘಾಟಿಸಿದ ಅವರು ರೂ 8.61ಕೋಟಿ ವೆಚ್ಚದಲ್ಲಿ 8.42  ಕಿಮೀ ಉದ್ದದ ಹೈಸೊಡೂÉರು, ಬಾಡಗರಕೇರಿ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಆನೆಗುಂದಿ ಸೇತುವೆ ಕಾಮಗಾರಿ ಮುಗಿಯುವುದು ತಡವಾದ್ದರಿಂದ ಸಂಚಾರ ವ್ಯವಸ್ಥೆಗೂ ಅಡ್ಡಿಯಾಗಿತ್ತು. ಸೇತುವೆ ಕಾಮಗಾರಿ ಪೂರ¡ಗೊಂಡಿದ್ದರಿಂದ ಈ ಭಾಗದ ಜನತೆಯ ಸಂಚಾರಕ್ಕೆ ಇದೀಗ ಅನುಕೂಲವಾದಂತಾಗಿದೆ ಎಂದು ಹೇಳಿದರು.

ಕೇಂದ್ರ ಸರಾRರ ನೀಡಿದ ಅನುದಾನದಿಂದ ಬಹಳಷ್ಟು ರಸ್ತೆಗಳು ಅಭಿವೃದ್ಧಿ ಕಂಡಿವೆ. ಕೇಂದ್ರ ಸರಾRರ ಕೊಡಗಿನ ರಸ್ತೆ ಭಿವೃದ್ಧಿಗೆ ರೂ 34 ಕೋಟಿ ನೀಡಿದೆ. ಮುಂದೆ ಇನ್ನೂ ಹೆಚ್ಚಿನ ಅನುದಾನ ಬಿಡುಗಡೆಯಾಗಲಿದೆ.

ಹುಣಸೂರಿನಿಂದ ಭಾಗಮಂಡಲದ ವರೆಗಿನ ರಸ್ತೆ, ಚನ್ನರಾಯಪಟ್ಟಣದಿಂದ ಮಡಿಕೇರಿ, ಮಾಕುಟ್ಟ ರಸ್ತೆ ಈಗಾಗಲೆ ಅಭಿವೃದ್ಧಿ ಹೊಂದಿರುವುದರ ಜತೆಗೆ ಮತ್ತಷ್ಟು ಸುಧಾರಣೆ ಕಾಣಲಿವೆ.  ಜಿಲ್ಲೆಯ ಶಾಸಕರಾದ ಕೆ.ಜಿ.ಬೋಪಯ್ಯ ಮತ್ತು ಅಪ್ಪಚ್ಚು ರಂಜನ್‌ ಅವರ ಪರಿಶ್ರಮದಿಂದ ಕೊಡಗಿನ ರಸ್ತೆಗಳು ಹೆಚ್ಚಿನ ಅಭಿವೃದ್ಧಿ ಕಂಡಿವೆ ಎಂದು ತಿಳಿಸಿದರು. ಕಾಫಿ ಮಂಡಳಿ ಸದಸ್ಯ ಬೊಟ್ಟಂಗಡ ರಾಜು ಮಾತನಾಡಿ ಹೈಸೊಡೂÉರು, ಬಾಡಗರಕೇರಿ ಸಂಪರR ರಸ್ತೆಯಿಂದ ವಿರಾಜಪೇಟೆ ತಾಲ್ಲೂಕು ಕೇಂದ್ರಕ್ಕೆ ತೆರಳಲು 10 ಕಿಲೋ ಮೀಟರ್‌ ದೂರ ಕಡಿಮೆಯಾಗಲಿದೆ ಎಂದು  ಹೇಳಿದರು. ತಾಲೂಕು ಬಿಜೆಪಿ ಅಧ್ಯಕ್ಷ ಅರುಣ್‌ ಭೀಮಯ್ಯ, ತಾ.  ಪಂ, ಉಪಾಧ್ಯಕ್ಷ ನೆಲ್ಲೀರ ಚಲನ್‌ ಕುಮಾರ್‌, ಆರ್‌ ಎಂಸಿ ಸದಸ್ಯ ಗುಮ್ಮಟೀರ ಕಿಲನ್‌ ಗಣಪತಿ, ಬಿರುನಾಣಿ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ರಾಯ್‌ ಚಿಣ್ಣಪ್ಪ, ಲಾಲಾ ಭೀಮಯ್ಯ, ಯುವ ಮೋರ್ಚಾ ಅಧ್ಯಕ್ಷ ಗಪ್ಪಣ್ಣ  ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next