Advertisement
ಏನಿದು ವಿಶೇಷತೆ?ಆಟೋರಿಕ್ಷಾದಲ್ಲಿ ಸ್ಯಾನಿಟೈಸರ್ ಬಳಕೆ, ಕೈ ತೊಳೆಯುವ ವ್ಯವಸ್ಥೆ ಇದೆ. ಚಾಲಕರಿಗೆ ಸೋಂಕು ತಗಲಬಾರದು ಎಂಬ ಹಿತದೃಷ್ಟಿಯಿಂದ ಪರದೆ ಅಳವಡಿಸಲಾಗಿದೆ. ರಿಕ್ಷಾದಲ್ಲಿ ಪ್ರಯಾಣಿಕರು ಹತ್ತಿದ ತತ್‌ಕ್ಷಣ ಅವರಿಗೆ ಇದನ್ನು ಬಳಕೆ ಮಾಡುವಂತೆ ಸೂಚಿಸಲಾಗುತ್ತದೆ. ಜನರಿಗೆ ಇನ್ನಷ್ಟು ತಿಳಿವಳಿಕೆ ಮೂಡಲಿ ಎಂಬುದು ಇವರ ಉದ್ದೇಶವಾಗಿದೆ.
80 ಬಡಗಬೆಟ್ಟು ಗ್ರಾಮದ ಸ್ಥಳೀಯ ಜನರಿಗೆ ಕೋವಿಡ್-19 ಬಗ್ಗೆ ಜಾಗೃತಿ ಮೂಡಿಸಲು ಈ ಹೊಸ ಪ್ರಯೋಗ ಮಾಡಲಾಗಿದೆ. ಇದರಂತೆ ಅಲ್ಲಿಯ ಸ್ಥಳೀಯ ಆಟೋ ಚಾಲಕರೂ ಇವರಿಗೆ ಸಾಥ್ ನೀಡಿದ್ದಾರೆ. ಜನರು ಜಾಗೃತರಾಗಿ ಸ್ಯಾನಿಟೈಸರ್ ಬಳಕೆ ಮಾಡಬೇಕು. ಚಾಲಕರಿಗೂ ತೊಂದರೆಯಾಗಬಾರದು ಎಂಬ ಉದ್ದೇಶ ನಮ್ಮದು.
-ಬಶೀರ್ ಅಹಮದ್,
ಆಟೋ ಚಾಲಕರು