Advertisement

ಚೇತರಿಕೆ ಕಾಣದ ಕಾರು ಮಾರುಕಟ್ಟೆ ; ಸೆಪ್ಟೆಂಬರ್‌ ನಲ್ಲಿ ಶೇ.24ರಷ್ಟು ಕುಸಿತ

10:17 AM Oct 12, 2019 | |

ಹೊಸದಿಲ್ಲಿ: ಹಬ್ಬದ ಅವಧಿಯಲ್ಲಿ ಕಾರು ಮಾರಾಟ ಚೇತರಿಕೆ ಕಾಣಬಹುದೆಂಬ ನಿರೀಕ್ಷೆ ಇತ್ತಾದರೂ ಸೆಪ್ಟೆಂಬರ್‌ನಲ್ಲಿ ಮಾರಾಟ ಶೇ.23.7ರಷ್ಟು ಇಳಿಕೆ ಕಂಡಿದೆ. ಈ ಮೂಲಕ ಕಳೆದ 11 ತಿಂಗಳಲ್ಲಿ ಮಾರಾಟ ಇಳಿಕೆಯಾಗುತ್ತಲೇ ಸಾಗಿದೆ. ಸೆಪ್ಟೆಂಬರ್‌ ತಿಂಗಳಲ್ಲಿ ಒಟ್ಟು 2,23,317 ಪ್ಯಾಸೆಂಜರ್‌ ಕಾರುಗಳು ಮಾರಾಟವಾಗಿವೆ ಎಂದು ಭಾರತೀಯ ಆಟೋಮೊಬೈಲ್‌ ತಯಾರಕರ ಒಕ್ಕೂಟದ ಅಂಕಿಅಂಶಗಳು ಹೇಳಿವೆ. ಇದೇ ವೇಳೆ ಪ್ಯಾಸೆಂಜರ್‌ ಕಾರುಗಳು 1,31,281 ಮಾರಾಟವಾಗಿವೆ.

Advertisement

ಇದರಿಂದ ಉದ್ಯಮ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದು, ಇನ್ನಷ್ಟು ಉದ್ಯೋಗ ಕಡಿತದ ಭೀತಿ ಕಾಡಿದೆ. ಕಾರು ಮಾರಾಟದ ಕುಸಿತದ ಪರಿಣಾಮ ವಿಮೆ ಕಂಪೆನಿಗಳ ಮೇಲೂ ಆಗಿವೆ. ನ್ಯೂ ಇಂಡಿಯಾ ಎಶೂರೆನ್ಸ್‌ ಮತ್ತು ಐಸಿಐಸಿಯ ಲೊಂಬಾರ್ಡ್‌ಗಳ ಆದಾಯಕ್ಕೆ ಕತ್ತರಿ ಬಿದ್ದಿವೆ. ಕಳೆದ ತಿಂಗಳು ಮಾರುತಿ ಸುಝುಕಿ ಮತ್ತು ಇತರ ಹಲವು ಕಂಪೆನಿಗಳು ಕಾರುಗಳಿಗೆ ಆಫ‌ರ್‌ಗಳನ್ನು ಘೋಷಿಸಿದ್ದವು. ಅಲ್ಲದೇ ಕಾರು ಮಾರುಕಟ್ಟೆ ಮೇಲೆತ್ತಲು ಕಾರ್ಪೊರೆಟ್‌ ತೆರಿಗೆ ಇಳಿಸುವ ತೀರ್ಮಾನವನ್ನು ಕೇಂದ್ರ ಸರಕಾರ ಘೋಷಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next