ನವದೆಹಲಿ: ಹೊಸ ಬೆಳವಣಿಗೆಯಲ್ಲಿ 2021ನೇ ಸಾಲಿನಲ್ಲಿ ನೌಕರರ ಭವಿಷ್ಯ ನಿಧಿ(ಇಪಿಎಫ್)ಯ ಬಡ್ಡಿದರ ಮತ್ತೆ ಇಳಿಕೆಯಾಗುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ವಿಚಿತ್ರ: ಶಿರಾದಲ್ಲಿ ಈ ಹುಳ ಕೂಡಾ ಒಂದು ಆಹಾರ, ಪುರಾಣಕ್ಕೂ ಇದಕ್ಕೂ ಏನು ಸಂಬಂಧ?
ಈಗಾಗಲೇ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್ ಪಿಜಿ ದರ ಏರಿಕೆಯಾಗುತ್ತಲೇ ಇದೆ. ಇದೀಗ ಉದ್ಯೋಗಿಗಳ ಭವಿಷ್ಯ ನಿಧಿಯ ಬಡ್ಡಿದರ ಕೂಡಾ ಇಳಿಕೆಯಾಗುವ ಸಾಧ್ಯತೆ ಇದ್ದು, ಒಂದು ವೇಳೆ ಇದು ಜಾರಿಗೊಂಡರೆ ಸುಮಾರು 6 ಕೋಟಿಗೂ ಅಧಿಕ ಸಂಬಳ ಪಡೆಯುವ ವರ್ಗಕ್ಕೆ ದೊಡ್ಡ ಹೊಡೆತ ಬೀಳಲಿದೆ ಎಂದು ವರದಿ ತಿಳಿಸಿದೆ.
ಕೋವಿಡ್ ಹಿನ್ನೆಲೆಯಲ್ಲಿ ಇಪಿಎಫ್ ಖಾತೆದಾರರು ಕಳೆದ ವರ್ಷದ ಬಡ್ಡಿದರವನ್ನು ಪಡೆದಿಲ್ಲ, ಇದೀಗ ಬಡ್ಡಿದರ ಇಳಿಕೆಯಾದರೆ ಮತ್ತಷ್ಟು ನಷ್ಟವಾಗಲಿದೆ ಎಂಬುದು ನೌಕರರ ಆತಂಕವಾಗಿದೆ ಎಂದು ವರದಿ ವಿವರಿಸಿದೆ.
ಮೂಲಗಳ ಪ್ರಕಾರ, ಕೋವಿಡ್ ಸಂದರ್ಭದಲ್ಲಿ ಬಹುಸಂಖ್ಯೆಯ ಜನರು ಇಪಿಎಫ್ ಹಣ ತೆಗೆದಿದ್ದು, ಇದರಿಂದ ಭವಿಷ್ಯ ನಿಧಿಯ ಸಂಗ್ರಹ ಗಣನೀಯವಾಗಿ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ನೌಕರರ ಭವಿಷ್ಯ ನಿಧಿ ಇಲಾಖೆ(ಇಪಿಎಫ್ ಒ) ಇಪಿಎಫ್ ನ ಬಡ್ಡಿದರ ಕಡಿತಗೊಳಿಸಲು ನಿರ್ಧರಿಸಿದೆ ಎಂದು ವರದಿ ತಿಳಿಸಿದೆ.
ಇಪಿಎಫ್ ನ ಬಡ್ಡಿದರ ಇಳಿಕೆಗೆ ಸಂಬಂಧಿಸಿದಂತೆ ಇಪಿಎಫ್ ಒ ಕೇಂದ್ರೀಯ ಮಂಡಳಿ ಟ್ರಸ್ಟಿಗಳು ಗುರುವಾರ(ಮಾರ್ಚ್ 04) ಸಭೆ ಸೇರಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ವರದಿ ತಿಳಿಸಿದೆ.
2020ನೇ ಸಾಲಿನಲ್ಲಿ ನೌಕರರ ಭವಿಷ್ಯ ನಿಧಿ ಇಲಾಖೆ ಆದಾಯಕ್ಕೆ ದೊಡ್ಡ ಹೊಡೆತ ಬಿದ್ದಿರುವುದಾಗಿ ತಿಳಿಸಿದೆ. ಆದರೆ ಬಡ್ಡಿದರಕ್ಕೆ ಸಂಬಂಧಿಸಿದಂತೆ ಇಪಿಎಫ್ ಒ ಟ್ರಸ್ಟಿ ಕೆಇ ರಘುನಾಥನ್ ಯಾವುದೇ ಮಾಹಿತಿ ನೀಡಿಲ್ಲ ಎಂದು ಜೀ ನ್ಯೂಸ್ ವರದಿ ಮಾಡಿದೆ.