Advertisement

Bad Manners ಹೊಸ ಕಿಕ್ ‘ಐಯಾಮ್‌ ಇನ್‌ ಲವ್‌ ಮೇದಿನಿ’

04:54 PM Oct 06, 2023 | Team Udayavani |

ಅಭಿಷೇಕ್‌ ಅಂಬರೀಶ್‌ “ಅಮರ್‌’ ಸಿನಿಮಾ ಮೂಲಕ ಲಾಂಚ್‌ ಆಗಿದ್ದು ನಿಮಗೆ ಗೊತ್ತೇ ಇದೆ. ಆ ಚಿತ್ರ 2019ರಲ್ಲಿ ತೆರೆಕಂಡಿತ್ತು. ಆ ಬಳಿಕ ಅಭಿಷೇಕ್‌ ನಟನೆಯ ಯಾವ ಚಿತ್ರ ತೆರೆಕಂಡಿಲ್ಲ. ಈಗ ಅವರು ನಾಯಕರಾಗಿರುವ ಎರಡನೇ ಚಿತ್ರವೊಂದು ಬಿಡುಗಡೆಯ ಹಂತಕ್ಕೆ ಬಂದಿದೆ. ಅದು “ಬ್ಯಾಡ್‌ ಮ್ಯಾನರ್’. ತನ್ನ ಎರಡನೇ ಸಿನಿಮಾಕ್ಕೆ ನೇರವಾಗಿ ಸೂರಿ ಗರಡಿ ಹೊಕ್ಕ ಅಭಿಷೇಕ್‌ ಈಗ ಪ್ರೇಕ್ಷಕರ ಮುಂದೆ ಬರಲು ಅಣಿಯಾಗಿದ್ದಾರೆ.

Advertisement

ಈಗಾಗಲೇ ಸಿನಿಮಾದ ಟೀಸರ್‌, ಹಾಡುಗಳು ಬಿಡುಗಡೆಯಾಗಿ ಮೆಚ್ಚುಗೆ ಪಡೆದಿದೆ. ಈ ಮೂಲಕ ಸಿನಿಮಾ ಮೇಲಿನ ನಿರೀಕ್ಷೆ ಕೂಡಾ ಹೆಚ್ಚಾಗಿದೆ. ಇತ್ತೀಚೆಗೆ ಅಭಿಷೇಕ್‌ ಹಾಗೂ ಚಿತ್ರದ ನಾಯಕಿ ರಚಿತಾ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಈ ಸಂದರ್ಭ ದಲ್ಲಿ ಚಿತ್ರತಂಡ ಹಾಡೊಂದನ್ನು ರಿಲೀಸ್‌ ಮಾಡಿದೆ.

“ಐಯಾಮ್‌ ಇನ್‌ ಲವ್‌ ಮೇದಿನಿ’ ಎಂಬ ಹಾಡನ್ನು ಯೋಗರಾಜ್‌ ಭಟ್‌ ಬರೆದಿದ್ದು, ಸಂಗೀತ ನಿರ್ದೇಶಕ ಚರಣ್‌ ರಾಜ್‌ ಅವರೇ ಈ ಹಾಡಿಗೆ ಧ್ವನಿಯಾಗಿದ್ದಾರೆ. ಆನಂದ್‌ ಆಡಿಯೋ ಯುಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿರುವ ಈ ಹಾಡಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಚಿತ್ರತಂಡ ಖುಷಿಯಾಗಿದೆ. ಸುಧೀರ್‌ ಕೆ.ಎಂ. ನಿರ್ಮಾಣದ ಈ ಚಿತ್ರ ಶೀಘ್ರದಲ್ಲೇ ತೆರೆಕಾಣಲಿದೆ.

Advertisement

Udayavani is now on Telegram. Click here to join our channel and stay updated with the latest news.

Next