Advertisement

ಯೆಸ್ ಬ್ಯಾಂಕ್ ಹಗರಣ: ರಾಣಾ ಕಪೂರ್ ಸೂಚನೆಯಂತೆ 20 ಸಾವಿರ ಕೋಟಿ ಸಾಲ ವಿತರಣೆ

09:49 AM Mar 12, 2020 | Hari Prasad |

ಮುಂಬಯಿ: ದೇಶದ ಖಾಸಗಿ ಬ್ಯಾಂಕ್ ಗಳಲ್ಲಿ ಪ್ರಮುಖ ಸ್ಥಾನ ಪಡೆದಿದ್ದ ಯೆಸ್ ಬ್ಯಾಂಕ್ ನ ಒಂದೊಂದೇ ಹಗರಣಗಳು ಇದೀಗ ಹೊರಬರುತ್ತಿವೆ. ಬ್ಯಾಂಕಿನ ಸ್ಥಾಪಕಾಧ್ಯಕ್ಷ ರಾಣಾ ಕಪೂರ್ ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಬ್ಯಾಂಕಿನ ಹೆಸರಿನಲ್ಲಿ ರಾಣಾ ನಡೆಸುತ್ತಿದ್ದ ಕಾರುಬಾರುಗಳ ಬೃಹತ್ ಲೋಕ ತೆರೆದುಕೊಳ್ಳಲಾರಂಭಿಸಿದೆ.

Advertisement

ಯೆಸ್ ಬ್ಯಾಂಕ್ 2.25 ಲಕ್ಷ ಕೋಟಿ ರೂಪಾಯಿಗಳಷ್ಟು ವ್ಯವಹಾರನ್ನು ನಡೆಸುತ್ತಿದ್ದರೂ ಈ ಬ್ಯಾಂಕಿನ ಅನುತ್ಪಾದಕ ಆಸ್ತಿ 42 ಸಾವಿರ ಕೋಟಿ ರೂಪಾಯಿಗಳಿಷ್ಟಿತ್ತು ಎಂಬ ಮಾಹಿತಿ ಲಭಿಸಿದೆ. ಇದರಲ್ಲಿ ಸುಮಾರು 20 ಸಾವಿರ ಕೋಟಿ ರೂಪಾಯಿಗಳಷ್ಟು ಸಾಲವನ್ನು ಬ್ಯಾಂಕ್ ಅಧಿಕಾರಿಗಳು ರಾಣಾ ಕಪೂರ್ ಸೂಚನೆಯ ಮೇರೆಗೆ ಆತ ಸೂಚಿಸಿದ್ದ ಕಾರ್ಪೊರೇಟ್ ಕಂಪೆನಿಗಳಿಗೆ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ನೀಡಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಕಾಕ್ಸ್ ಆ್ಯಂಡ್ ಕಿಂಗ್ಸ್, ಡಿ.ಎಚ್.ಎಫ್.ಎಲ್. ಗ್ರೂಪ್, ಸಹನಾ ಗ್ರೂಪ್, ರೇಡಿಯಸ್ ಗ್ರೂಪ್ ಮೊದಲಾದ ಕಂಪೆನಿಗಳಿಗೆ ಸಂಬಂಧಿಸಿದ ಕಡತಗಳನ್ನು ಇಡಿ ಅಧಿಕಾರಿಗಳು ಪರಿಶೀಲಿಸಿದ ಸಂದರ್ಭದಲ್ಲಿ ಈ ಎಲ್ಲಾ ಮಾಹಿತಿಗಳು ಹೊರಬಿದ್ದಿವೆ. ಮಾತ್ರವಲ್ಲದೇ ಬೃಹತ್ ಸ್ವರೂಪದ ಈ ಸಾಲಗಳನ್ನು ಆರ್.ಬಿ.ಐ. ನಿಯಮಾವಳಿಗಳನ್ನು ಮೀರಿ ನೀಡಲಾಗಿದೆ ಎಂಬ ವಿಚಾರವೂ ಇದೀಗ ಮೇಲ್ನೋಟಕ್ಕೆ ರಾಣಾ ಕಪೂರ್ ನನ್ನು ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ಗೊತ್ತಾಗಿದೆ.

ಕೆಲವೊಂದು ನಿರ್ಧಿಷ್ಟ ಕಾರ್ಪೊರೇಟ್ ಕಂಪೆನಿಗಳಿಗೆ ನೀಡಿರುವ ಸಾಲದ ಕುರಿತಾಗಿ ಮತ್ತು ಆ ಮೂಲಕ ಪಡೆದುಕೊಂಡಿರುವ ಕಿಕ್ ಬ್ಯಾಕ್ ಹಣವನ್ನು ರಾಣಾ ತನ್ನ ಹೆಂಡತಿಯ ಬ್ಯಾಂಕ್ ಖಾತೆಗೆ ವರ್ಗಾಯಿಸಿರುವ ಕುರಿತಾಗಿಯೂ ಇಡಿ ತನಿಖೆಯನ್ನು ನಡೆಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next