ದೊಡ್ಡಬಳ್ಳಾಪುರ: ಕೊರೊನಾದಿಂದ ಆರ್ಥಿಕ ಪರಿಸ್ಥಿತಿ ಮೇಲೆಪರಿಣಾಮ ಬೀರಿದ್ದು, ಆರೋಗ್ಯಕ್ಕಾಗಿ ಹೆಚ್ಚು ಹಣ ವಿನಿಯೋಗಿಸುವಪರಿಸ್ಥಿತಿ ಉಂಟಾಗಿದೆ. ಕೊರೊನಾ ತಡೆಗೆ ಸರ್ಕಾರದೊಂದಿಗೆ ಸಾರ್ವಜನಿಕರ ಪಾತ್ರ ಹೆಚ್ಚಾಗಿದೆ
ಸಚಿವ ಎಂ.ಟಿ.ಬಿ.ನಾಗರಾಜುಹೇಳಿದರು.ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯಇಲಾಖೆಯಿಂದ ಆರಂಭಿಸಿರುವ ಬ್ಲ್ಯಾಕ್ ಫಂಗಸ್ ಆಪರೇಷನ್‌ಥಿಯೇಟರ್ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ,ಸೋಂಕು ಕಡಿಮೆಯಾಗುತ್ತಿರುವುದು ಸಮಾಧಾನಕರ ಸಂಗತಿ.ಕೊರೊನಾ ನಿವಾರಣೆಗಾಗಿ ಕೇಂದ್ರ ಸರ್ಕಾರ ಉಚಿತ ಲಸಿಕೆನೀಡುತ್ತಿದೆ. ಕೈಗಾರಿಕೆಗಳು ತಮ್ಮ ಸಿಎಸ್‌ಆರ್ ನಿಧಿಯನ್ನುಆರೋಗ್ಯ ಕ್ಷೇತ್ರಕ್ಕೆ ನೀಡುತ್ತಿರುವುದು ಅಭಿನಂದನೀಯ ಎಂದುತಿಳಿಸಿದರು.
ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಇಲ್ಲ: ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ತಾಲೂಕಿನಲ್ಲಿ ಆರೋಗ್ಯಕ್ಕೆ ಆದ್ಯತೆನೀಡಲಾಗುತ್ತಿದೆ. ಆದರೆ, ಜಿಲ್ಲೆಯಲ್ಲಿ ಯಾವುದೇ ಮೆಡಿಕಲ್‌ಕಾಲೇಜು ಇಲ್ಲ. ಈ ಹಿಂದಿನ ಸರ್ಕಾರದಲ್ಲಿ ದೊಡ್ಡಬಳ್ಳಾಪುರಕ್ಕೆಮಂಜೂರಾಗಿದ್ದ 90 ಕೋಟಿ ರೂ. ವೆಚ್ಚದ 250 ಹಾಸಿಗೆಗಳ ಜಿಲ್ಲಾಸ್ಪತ್ರೆಗೆ ಈಗಿನ ಸರ್ಕಾರದ ಸಚಿವ ಸಂಪುಟ ಅನುಮೋದನೆನೀಡದೆ ಎರಡು ಬಾರಿ ಮುಂದೆ ಹೋಗಿದೆ.
ಜಿಲ್ಲೆ ಉಸ್ತುವಾರಿ ಸಚಿವರು ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕು ಎಂದು ಮನವಿಮಾಡಿದರು. ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಮೇಕ್ ಶಿಪ್ಟ್ ಆಸ್ಪತ್ರೆಯ ಕಾಮಗಾರಿ ಸ್ಥಳಕ್ಕೆ ಸಚಿವಎಂ.ಟಿ.ಬಿ.ನಾಗರಾಜು ಭೇಟಿ ನೀಡಿ, ಪರಿಶೀಲಿಸಿದರು.ಜಿÇÉಾಧಿಕಾರಿ ಕೆ.ಶ್ರೀನಿವಾಸ್, ಜಿಪಂ ಸಿಇಒ ಎಂ.ಆರ್.ರವಿಕುಮಾರ್, ಅಪರ ಜಿÇÉಾಧಿಕಾರಿ ಡಾ.ಜಗದೀಶ.ಕೆ.ನಾಯಕ,ಉಪ ವಿಭಾಗಾಧಿಕಾರಿ ಅರುಳ್ ಕುಮಾರ್, ತಹಶೀಲ್ದಾರ್‌ಟಿ.ಎಸ್.ಶಿವರಾಜ್, ತಾಲೂಕು ಆರೋಗ್ಯಾಧಿಕಾರಿಡಾ.ಪರಮೇಶ್ವರ ಉಪಸ್ಥಿತರಿದ್ದರು.
ಜನಸೇವೆಮಾಡಲುರಾಜಕಾರಣದಅವಶ್ಯವಿದೆ.ಅಧಿಕಾರವೇ ಸರ್ವಸ್ವವಲ್ಲ. ಯಾವ ಖಾತೆನೀಡಿದರೂ ನಾನು ಸಮರ್ಪಕವಾಗಿ ನಿರ್ವಹಿಸುತ್ತೇನೆ. ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕೆ ಹಠಮಾಡಿಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾದರೆ ಕೈ ಕಟ್ಟಿಕುಳಿತುಕೊಳ್ಳುವುದಿಲ್ಲ. ಕೊಟ್ಟ ಅಧಿಕಾರವನ್ನುಜನಹಿತಕ್ಕಾಗಿ ಬಳಸಿಕೊಂಡು ಸಾಮಾಜಿಕನ್ಯಾಯ ನೀಡುತ್ತೇನೆ. ಹಿಂದಿನ ಸರ್ಕಾರದಲ್ಲಿವಸತಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಖಾತೆಬದಲಾವಣೆ ಬಗ್ಗೆ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳು ಉತ್ತಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದು ಸಚಿವ ಎಂಟಿಬಿ ನಾಗರಾಜು ಹೇಳಿದರು.
ನಾಯಕತ್ವದ ಕಿತ್ತಾಟ ರಾಜಕೀಯದಲ್ಲಿಸಾಮಾನ್ಯ. ಅದರೆ, ಈಗಲೇ ಪೈಪೋಟಿನಡೆಸುತ್ತಿರುವುದು ಸರಿಯಲ್ಲ. ಚುನಾವಣೆಮುಗಿದಬಳಿಕ ನೂತನ ಶಾಸಕರು ಆಯಾಪಕ್ಷದಹೈಕಮಾಂಡ್ ಮುಖ್ಯಮಂತ್ರಿ ಅಭ್ಯರ್ಥಿಯನ್ನುಅಂತಿಮಗೊಳಿಸುತ್ತದೆ. ರಾಜೀನಾಮೆವಿಚಾರವಾಗಿ ರಮೇಶ್ ಜಾರಕಿಹೋಳಿ ದುಡುಕಿಯಾವುದೇಅತುರದನಿರ್ಧಾರಕೈಗೊಳ್ಳುವುದಿಲ್ಲ.ಸಿಎಂ ಯಡಿಯೂರಪ್ಪ ಹಾಗೂ ಹೈಕಮಾಂಡ್‌ಉತ್ತಮ ನಿರ್ಧಾರ ಕೈಗೊಳ್ಳುತ್ತದೆ. ಹೀಗಾಗಿನಾನು ಸಮಾಧಾನದಿಂದ ಇರುವಂತೆಹೇಳಿದ್ದೇನೆ. ರಮೇಶ್‌ಜಾರಕಿಹೋಳಿಗೆಮನಸ್ಸಿಗೆನೋವಾಗಿದೆ. ಹೀಗಾಗಿ ಶಾಸಕ ಸ್ಥಾನಕ್ಕೆರಾಜೀನಾಮೆ ಹೇಳಿಕೆ ನೀಡಿರಬಹುದು. 17ಮಂದಿ ಶಾಸಕರು ಒಟ್ಟಾಗಿದ್ದೇವೆ ಎಂದರು