ಹಿನ್ನಡೆಯಾಗಿದೆ. ಬಸವಣ್ಣನವರ ನಾಡಿನಲ್ಲಿ ಸುಳ್ಳು ಭವರಸೆ ನೀಡಿದರೆ ನಡೆಯುವುದಿಲ್ಲ ಎಂದು ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ವಾಗ್ಧಾಳಿ ನಡೆಸಿದರು.
Advertisement
ನಗರದ ಅಕ್ಕ ಮಹಾದೇವಿ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಅವಧಿಗೆ ತಾವೇ ಶಾಸಕರಾಗಿದ್ದರೂ ಕ್ಷೇತ್ರದ ಅಭಿವೃದ್ಧಿ ಆಗಿಲ್ಲ. ಇದಕ್ಕೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಅಭಿವೃದ್ಧಿ ವಿರೋಧಿ ಧೋರಣೆಯೇ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Related Articles
Advertisement
ಕ್ಷೇತ್ರದ ಅಭಿವೃದ್ಧಿ ಆಗಬೇಕು. ಶಿಕ್ಷಣದಲ್ಲಿ ಕ್ರಾಂತಿ ಆಗಬೇಕು. ಇಲ್ಲಿ ಉದ್ಯೋಗಾವಕಾಶಗಳು ಸಿಗುವ ವಾತಾವರಣ ನಿರ್ಮಾಣವಾಗಬೇಕು. ಇದಕ್ಕಾಗಿ ರಾಜ್ಯದಲ್ಲಿ ಬಿಜೆಪಿ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರಬೇಕು. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಬೇಕು. ಈ ಭಾಗದ ಅಭಿವೃದ್ಧಿ ಆಗಬೇಕು ಎನ್ನುವುದು ನನ್ನ ಆಶಯವಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ, ಸಂಸದ ಭಗವಂತ ಖೂಬಾ, ಜಿಪಂ ಸದಸ್ಯರಾದ ಸುಧಿಧೀರ ಕಾಡಾದಿ, ಗುಂಡುರೆಡ್ಡಿ, ಪಕ್ಷದ ನಗರ ಘಟಕದ ಅಧ್ಯಕ್ಷ ಶಿವಪುತ್ರಗೌರ, ಜಿಪಂ ಮಾಜಿ ಅಧ್ಯಕ್ಷ ಅನೀಲ ಭೂಸಾರೆ, ಮಾಜಿ ಉಪಾಧ್ಯಕ್ಷೆ ಲತಾ ಹಾರಕೂಡೆ, ಪ್ರಮುಖರಾದ ಬಾಬು ವಾಲಿ, ರಾಜಕುಮಾರ ಸಿರಗಾಪುರ, ಜಗನ್ನಾಥ ಜಿಲ್ಲಾಬಟ್ಟೆ, ಪಕ್ಷದ ಜಿಲ್ಲಾ ಉಪಾಧ್ಯಕ್ಷ ರವಿ ಚಂದನಕೆರೆ, ಶೋಭಾ ತೆಲಂಗ, ಜಿಲ್ಲಾಕಾರ್ಯದರ್ಶಿ ಸೂರ್ಯಕಾಂತ ಚಿಲ್ಲಾಬಟ್ಟೆ, ಎಸ್ಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ದೀಪಕಗಾಯಕವಾಡ, ವೀರಣ್ಣ ಹಲಗೆ, ಚಂದ್ರಶೇಖರ್ ಬಿರಾದಾರ, ಕಾಳಿದಾಸ ಜಾಧವ, ಅನೀಲ ಹಲಶೆಟ್ಟೆ, ದಿಲೀಪ ಮಡ್ಡೆ, ಹಣಮಂತ ಅಂಬುಲಗೆ, ಅಶೋಕ ವಕಾರೆ, ಅರವಿಂದ ಮುತ್ತೆ, ತುಕಾರಾಮ ಲಾಡೆ, ದಿಗಂಬರ ಜಲ್ಲೆ, ಶಿವಕುಮಾರ ಬಿರಾದಾರ ಉಪಸ್ಥಿತರಿದ್ದರು.