ಬಾಗಲಕೋಟೆ: ನಂಜುಂಡಪ್ಪ ವರದಿಯನ್ವಯ ಹಿಂದುಳಿದ ಮತಕ್ಷೇತ್ರವಾಗಿದ್ದ ಬೀಳಗಿಗೆ ಹೊಸ ಕಾಯಕಲ್ಪ ನೀಡಿ ಅಭಿವೃದ್ಧಿಯ ಹೊಸ ದಿಕ್ಕಿನಡೆಗೆ ತೆಗೆದುಕೊಂಡು ಹೋಗುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದೇನೆ. ಅದರ ಫಲವಾಗಿ ಎಲ್ಲ ರಂಗಗಳಲ್ಲೂ ಬಿಜೆಪಿ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿ ಸಾಗುವ ಮೂಲಕ ಹಿಂದುಳಿದ ಮತಕ್ಷೇತ್ರ ಎಂಬ ಹಣೆಪಟ್ಟಿ ಕಳಚಿದೆ ಎಂದು ಮುರುಗೇಶ ನಿರಾಣಿ ಹೇಳಿದರು.
ಬೀಳಗಿ ಮತಕ್ಷೇತ್ರದ ಯಳ್ಳಿಗುತ್ತಿ, ಯಂಕಂಚಿ, ಸಾಳಗುಂದಿಯಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿ ನಂತರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ನೆನೆಗುದಿಗೆ ಬಿದ್ದಿದ್ದ ಯಳ್ಳಿಗುತ್ತಿ ನೀರಾವರಿ ಯೋಜನೆಯನ್ನು 2019ರಲ್ಲಿ ಟರ್ನ್ ಕೀ ಆಧಾರದ ಮೇಲೆ ಚಾಲನೆ ನೀಡಿ, ನಿಗದಿತ ಅವಧಿಯಲ್ಲಿ ಯೋಜನೆ ಪೂರ್ಣಗೊಳಿಸಿದ ಪರಿಣಾಮ ಯಳ್ಳಿಗುತ್ತಿ, ಯಂಕಂಚಿ, ಅಂಡಮುರನಾಳ ಹಾಗೂ ಸಿದ್ನಾಳ ಗ್ರಾಮಗಳ 1853 ಎಕರೆ ರೈತರ ಭೂಮಿಗೆ ನೀರು ದೊರಕಿದೆ. ಕಳೆದ 5 ವರ್ಷಗಳ ಅವಧಿಯಲ್ಲಿ 2 ಸಾವಿರ ಕೋಟಿಗೂ ಅಧಿಕ ಅನುದಾನದಲ್ಲಿ 19 ನೀರಾವರಿ ಯೋಜನೆಗಳ ಮೂಲಕ 1.27 ಲಕ್ಷ ಎಕರೆಗೆ ನೀರಾವರಿ ಸೌಲಭ್ಯ ನೀಡುವ ಕಾರ್ಯ ಭರದಿಂದ ಸಾಗಿದೆ. ಉದ್ದೇಶಿತ ಎಲ್ಲ ನೀರಾವರಿ ಯೋಜನೆಗಳು ಸಕಾಲದಲ್ಲಿ ಪೂರ್ಣಗೊಳಿಸಿ ನಮ್ಮ ರೈತರ ಭೂಮಿಗೆ ನೀರು ನೀಡುವುದಕ್ಕಾಗಿ ನನಗೆ ಮತ್ತೂಮ್ಮೆ ಆಶೀರ್ವದಿಸಿ ಎಂದು ವಿನಂತಿಸಿಕೊಂಡರು.
ಪರಸಪ್ಪ ಜಮಖಂಡಿ ಸಿದ್ದಪ್ಪ ನಕ್ಕರಗುಂದಿ ಶ್ರಿಕಾಂತ ಪಾಟೀಲ ವಿಠಲ ಪೂಜಾರಿ, ಬಸವರಾಜ ಗೌಡರ, ಶಿವನಪ್ಪ ಬಣಕಾರ, ಶ್ರೀಶೈಲ ಮುರನಾಳ, ರಮೇಶ ನಾರಪ್ಪನವರ, ಹಣಮಂತಗೌಡ ಪಾಟೀಲ ಈಶ್ವರ ಹುಂಡೆಕರ, ಪ್ರಕಾಶ ಗೌಡರ ಸೇರಿದಂತೆ ಹಲವರು ಇದ್ದರು