Advertisement
ಮಳೆಗಾಲದೊಂದಿಗೆ ಕಡಲು ಭೋರ್ಗರೆಯಲು ಆರಂಭಿಸಿದ್ದು ಕಾರ್ಯಾಚರಣೆ ಅಸಾಧ್ಯವಾಗಿದೆ.ಸುರತ್ಕಲ್ ಸಮೀಪ ಸಮುದ್ರದಲ್ಲಿ ತೀರದ ಲ್ಲಿಯೇ ನಿಂತಿರುವ ಭಗವತಿ ಪ್ರೇಮ್ ಡ್ರೆಜ್ಜಿಂಗ್
ಹಡಗನ್ನು ಒಡೆದು ತೆರವು ಮಾಡುವ ಕಾರ್ಯವನ್ನು ಸದ್ಯಕ್ಕೆ ಗುತ್ತಿಗೆದಾರರು ಸ್ಥಗಿತ ಗೊಳಿಸಿದ್ದಾರೆ.
ಬಟ್ಟಪ್ಪಾಡಿಯಲ್ಲಿ ಪ್ರಿನ್ಸೆಸ್ ಮಿರಾಲ್
ಹಡಗಿನಲ್ಲಿದ್ದ ತೈಲವನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ. ಆದರೆ ಹಡಗು ತೆರವು ಕಾರ್ಯವನ್ನು ಮುಂಗಾರು ಋತು ಮುಗಿದ ಬಳಿಕವೇ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.ಹಡಗಿನಲ್ಲಿದ್ದ 220 ಟನ್ ತೈಲಕ್ಕೆ ನೀರು ಸೇರಿಕೊಂಡಿದ್ದು 160 ಟನ್‌ನಷ್ಟು ತೈಲ ಮಾತ್ರ ಸಿಕ್ಕಿರುವುದಾಗಿ ತಿಳಿದುಬಂದಿದೆ. ಬಟ್ಟಪ್ಪಾಡಿ ಕಡಲ ತೀರದಿಂದ ತುಸು ದೂರದಲ್ಲಿ ನೆಲಕ್ಕೆ ತಾಗಿ ನಿಂತಿರುವ ಪ್ರಿನ್ಸೆಸ್ ಮಿರಾಲ್ ಆ ಭಾಗದಲ್ಲಿ ಸಂಚರಿಸುವ ಬೋಟ್‌ಗಳಿಗೆ ಅಪಾಯಕಾರಿಯಾಗಿರುವುದರಿಂದ ತೆರವು ಮಾಡುವಂತೆ ಸೂಚನೆ ನೀಡಲಾಗಿದೆ. ಬನ್ಸಲ್ ಎಂಡವರ್ಸ್ ಗುತ್ತಿಗೆದಾರ ಕಂಪೆನಿ ಜನವರಿಯಿಂದ ಕಾರ್ಯಾಚರಣೆ ನಡೆಸಿ ಹಡಗಿನಿಂದ ತೈಲ ಹೊರತೆಗೆದಿದೆ. ಅದರಲ್ಲಿ 8 ಸಾವಿರ ಟನ್ ತೂಕದ ಸ್ಟೀಲ್ ಕಾಯಿಲ್ ಕೂಡ ಇದೆ.
Related Articles
Advertisement
2021ರ ಜೂನ್ 21ರಂದು ಉಳ್ಳಾಲ ಬಟ್ಟಪ್ಪಾಡಿಯಲ್ಲಿ ಪ್ರಿನ್ಸೆಸ್ ಮಿರಾಲ್ ಅಪಾ ಯಕ್ಕೆ ಸಿಲುಕಿತ್ತು.ರಂಧ್ರ ಕಾಣಿಸಿಕೊಂಡು ನೀರು ಒಳ ಸೇರಿತ್ತು ಅದರಲ್ಲಿದ್ದ 15 ಸಿರಿಯನ್ ನಾವಿಕರನ್ನು ಸುರಕ್ಷಿತ ವಾಗಿ ಕೋಸ್ಟ್‌ಗಾರ್ಡ್ ರಕ್ಷಿಸಿತ್ತು.