Advertisement

ಪರ್ಚಂಡಿ ಚಿತ್ರಕ್ಕೆ ಹಿನ್ನೆಲೆ ಸಂಗೀತ

11:36 AM Apr 17, 2017 | Team Udayavani |

ಇಂಡಿಯನ್‌ ಎಂಟರ್‌ಟೈನರ್‌ ಲಾಂಛನದಲ್ಲಿ ಕೆ.ಸಿ.ಶಿವಾನಂದ ಅವರು ನಿರ್ಮಿಸುತ್ತಿರುವ “ಪರ್ಚಂಡಿ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯ ಉತ್ತರಹಳ್ಳಿಯಲ್ಲಿರುವ ಸಾಯಿಸ್ವರ ಸ್ಟುಡಿಯೋದಲ್ಲಿ ಹಿನ್ನಲೆ ಸಂಗೀತ ಅಳವಡಿಸಲಾಗುತ್ತಿದೆ. ವಿನಯ್‌ ರಂಗಧೋಳ್‌ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರದ ಹಾಡುಗಳ ಸೀಡಿ ಸದ್ಯದಲ್ಲೇ ಲೋಕಾರ್ಪಣೆಗೊಳ್ಳಲಿದೆ.

Advertisement

ಜೂಮ್‌ ರವಿ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ರಾಜ್‌ ಕಡೂರ್‌ ಅವರ ಛಾಯಾಗ್ರಹಣವಿದೆ  ಚಿತ್ರದ ಹಾಡುಗಳನ್ನು ಜೂಮ್‌ ರವಿ ಅವರೆ ಬರೆದಿದ್ದಾರೆ. ಕರೀಂ ಸಂಕಲನ, ರಾಜು ನೃತ್ಯ ನಿರ್ದೇಶನ, ರೇವಣ್ಣು ಕಲಾ ನಿರ್ದೇಶನ ಹಾಗೂ ಪವರ್‌ ಪುಷ್ಪರಾಜ್‌, ಜಾಕಿ ಸೋಮು, ಹ್ಯಾರಿಸ್‌ ರಾಜ್‌ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಶೊಭ್‌ರಾಜ್‌, ಮಹೇಶ್‌ದೇವು, ಕಲ್ಪನ, ಕುರಿಬಾಂಡ್‌ ರಂಗ, ಶಿವಾಜಿ, ವಾಸುದೇವ ಮೂರ್ತಿ, ನೇತ್ರ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next