Advertisement
ಮತಕ್ಷೇತ್ರದ ಹುಲಕಲ್ ಗ್ರಾಮದಲ್ಲಿ ನಡೆದ ವಿವಿಧ ಪಕ್ಷಗಳ ಹಲವು ಮುಖಂಡರು ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಳೆದ ಹತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಶಾಸಕ ಡಾ| ಎ.ಬಿ. ಮಾಲಕರೆಡ್ಡಿ ಅವರು ಯಾದಗಿರಿ ಮತಕ್ಷೇತ್ರದ ಅಭಿವೃದ್ಧಿ ಕಡೆಗಣಿಸಿದ್ದರಿಂದ ಸಾಕಷ್ಟು ಹಿಂದುಳಿದಿದೆ. ಆದ್ದರಿಂದ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಬೇಕು ಎಂದರು.
ಇದೇ ವೇಳೆ ವಿವಿಧ ಪಕ್ಷಗಳ ಮುಖಂಡರಾದ ಬಸಲಿಂಗಪ್ಪ ನಾಯಕ, ದೇವೀಂದ್ರಪ್ಪ ಚೆನ್ನೂರ, ಮಹಾದೇವಪ್ಪ ಪೂಜಾರಿ, ಡಾ| ಹಣಮಂತ ಠಾಣಗುಂದಿ, ಸಣ್ಣ ಬಾಲಪ್ಪ, ಕಾಶೀಂಸಾಬ್ ಹೊಟೇಲ್ ಬಿಜೆಪಿಗೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಡಾ| ವೀರಬಸವಂತರೆಡ್ಡಿ ಮುದ್ನಾಳ, ಬಿಜೆಪಿ ಮಂಡಳ ಪ್ರಧಾನ ಕಾರ್ಯದರ್ಶಿ ದೊಡಪ್ಪ ನಾಯಕ, ಸಿದ್ದಣಗೌಡ ಕಾಡಂನೂರ, ಶರಣಭೂಪಾಲರಡ್ಡಿ, ಈಶಪ್ಪಗೌಡ, ಸಾಯಿಬಣ್ಣ ಭಜಂತ್ರಿ, ಬಾಲಪ್ಪ ಮುಂಡರಗಿ ಇದ್ದರು.