Advertisement

ಗ್ರಾಮ ಸ್ವರಾಜ್ಯದ ಕಲ್ಪನೆಗೆ ಹಿನ್ನಡೆ

12:26 PM Dec 11, 2018 | |

ಬೆಂಗಳೂರು: ವಿದೇಶಿ ವಸ್ತುಗಳ ಮೇಲಿನ ವ್ಯಾಮೋಹ ಹೋಗುವವರೆಗೂ ಗಾಂಧೀಜಿ ಕಂಡಿರುವ ಗ್ರಾಮ ಸ್ವರಾಜ್ಯದ ಕನಸು ನನಸಾಗದು ಎಂದು ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಅಭಿಪ್ರಾಯಪಟ್ಟರು.

Advertisement

ನಗರದ ಗಾಂಧಿಭನದಲ್ಲಿ ಸೋಮವಾರ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬಾಪು 150ನೇ ವರ್ಷಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಗಾಂಧೀಜಿ ಕುರಿತ ಮಕ್ಕಳೊಂದಿಗಿನ ಸಂವಾದದಲ್ಲಿ ಮಾತನಾಡಿದ ಅವರು, ಗಾಂಧೀಜಿ ಅವರ ಜೀವನ ಶೈಲಿ, ಸ್ವಾತಂತ್ರ್ಯ ಸಂಗ್ರಾಮ, ವಿದ್ಯಾಭ್ಯಾಸ, ಕರ್ನಾಟಕದೊಂದಿಗಿನ ನಂಟು, ಖಾದಿ ಬಟ್ಟೆಯ ಪ್ರೀತಿ, ದಕ್ಷಿಣ ಆಫ್ರಿಕಾದಲ್ಲಿನ ಹೋರಾಟ, ಅಸಹಕಾರ ಚಳುವಳಿ ಸೇರಿದಂತೆ ಮಕ್ಕಳು ಕೇಳಿದ ಹಲವು ಪ್ರಶ್ನೆಗಳಿಗೆ ಚುಟುಕಾಗಿ ಉತ್ತರಿಸಿದರು.

ಮಹಾತ್ಮ ಗಾಂಧೀಜಿ ಅವರು ಗ್ರಾಮ ಸ್ವರಾಜ್ಯದ ಬಗ್ಗೆ ಕನಸು ಕಂಡಿದ್ದರು. ಈ ಹಿನ್ನೆಲೆಯಲ್ಲಿ ವಿದೇಶಿ ವಸ್ತುಗಳನ್ನು ಬಹಿಷ್ಕರಿಸಿದ್ದರು. ಆದರೆ ಈಗ ಹಳ್ಳಿಗರಲ್ಲೂ ವಿದೇಶಿ ವಸ್ತುಗಳ ವ್ಯಾಮೋಹ ಶುರುವಾಗಿದೆ ಎಂದು ಕಳವಳ ವ್ಯಕ್ತ ಪಡಿಸಿದರು.

ನಗರ ಪ್ರದೇಶಗಳಲ್ಲಿ ವಿದೇಶಿ ವಸ್ತುಗಳ ವ್ಯಾಮೋಹ ವಿಪರೀತವಾಗಿದೆ. ಇದರ ಗಾಢ ಪ್ರಭಾವ ಹಳ್ಳಿಗರ ಮೇಲೂ ಬೀರಿದೆ. ಪಟ್ಟಣದ ಮಂದಿಯನ್ನೇ ಗ್ರಾಮೀಣರು ಅನುಕರಣೆ ಮಾಡಲು ಆರಂಭಿಸಿದ್ದಾರೆ. ಹೀಗಾಗಿಯೇ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಕಲ್ಪಗೆ ಹಿನ್ನಡೆ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹತ್ತನೇ ವಯನಸ್ಸಿನಲ್ಲಿರುವಾಗಲೇ ನಾನು ಗಾಂಧೀಜಿ ಅವರ ಚಿಂತನೆಗಳಿಗೆ ಮಾರುಹೋದೆ. ಕಾಲೇಜು ದಿನಗಳಲ್ಲಿ ಬ್ರಿಟಿಷರ ದಬ್ಟಾಳಿಕೆಯನ್ನು ಪ್ರತಿಭಟಿಸಿದೆ. ವಿದೇಶಿ ವಸ್ತುಗಳನ್ನು ಗಾಂಧೀಜಿ ಅವರು ಬಹಿಷ್ಕರಿಸಿ ಎಂದು ಜನತೆಗೆ ಕರೆ ನೀಡಿದಾಗ ನಾನು ಕೂಡ ಖಾದಿ ಬಟ್ಟೆಯನ್ನು ಧರಿಸ ತೊಡಗಿದೆ. ಖಾದಿ ಬಟ್ಟೆಗಾಗಿಯೇ ಪೋಷಕರ ಜತೆ ಜಗಳವಾಡುತ್ತಿದೆ ಎಂದರು.

Advertisement

ಕರ್ನಾಟಕ ಏಕೀಕರಣಕ್ಕಾಗಿ ಹೋರಾಟದ ದಿನಗನ್ನು ಬಿಚ್ಚಿಟ್ಟ ಪಾಟೀಲ ಪುಟ್ಟಪ್ಪ, ಕರ್ನಾಟಕದ ಕಲ್ಪನೆ ವಿಚಾರ ಸರ್ಕಾರಕ್ಕೆ ಇನ್ನೂ ಬಂದಿಲ್ಲ. ಇದು ಬಾರದಿದ್ದರೆ ರಾಜ್ಯ ಸಂಪೂರ್ಣ ಅಭಿವೃದ್ಧಿಯಾಗದು. ಅಖಂಡ ಕರ್ನಾಟಕ ಕಲ್ಪನೆಗಳಲ್ಲಿ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಹೇಳಿದರು.

ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ ಎಂ.ವಿ.ರಾಜಶೇಖರನ್‌, ಕರ್ನಾಟ ವಿವಿಯ ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ.ಶಾಂತಿನಾಥ ದಿಬ್ಬದ, ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ.ವೋಡೆ ಪಿ.ಕೃಷ್ಣ, ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ, ಡಾ.ಲೋಹಿತ ನಾಯ್ಕ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next