Advertisement
ಮೂರು ತಿಂಗಳಿನಿಂದ ಸುರಿಯುತ್ತಿರುವ ಭಾರೀ ಮಳೆ ಹಾಗೂ ಸೆಪ್ಟಂಬರ್ ತಿಂಗಳ ಆರಂಭದಲ್ಲಿ ಕೆಲವು ದಿನಗಳ ಬಿಸಿಲು ಅಡಿಕೆ ಮತ್ತೆ ಕೊಳೆರೋಗಕ್ಕೆ ತುತ್ತಾಗಲು ಕಾರಣವಾಗಿದೆ.
Related Articles
ಸದ್ಯಕ್ಕೆ ಏನೂ ಮಾಡಲಾಗದ ಸ್ಥಿತಿ ಕೃಷಿಕರದ್ದಾಗಿದೆ. ಏಕೆಂದರೆ ಎಳೆ ಅಡಿಕೆ ಆಧಾರಣ ಗಾತ್ರಕ್ಕೆ ಬಲಿತಿದ್ದು, ಅತ್ತ ಹಣ್ಣು ಅಲ್ಲ ಇತ್ತ ಕಾಯಿಯೂ ಅಲ್ಲ ಎಂಬಂತೆ ಇದೆ. ಒಂದು ಮರದಲ್ಲಿ ರೋಗ ಕಾಣಿಸಿಕೊಂಡರೆ ಅದು ಇಡೀ ತೋಟಕ್ಕೆ ಆವರಿಸಿ ಬಿಡುತ್ತದೆ. ಬೋಡೋì ಮಿಶ್ರಣ ಸಿಂಪಡಣೆ ಮಾತ್ರ ಏಕೈಕ ಪರಿಹಾರವಾಗಿದ್ದು, ಔಷಧ ಸಿಂಪಡಣೆ ಮಾಡಿದರೆ ಫಲ ಕಾಣದ ಹಿನ್ನೆಲೆಯಲ್ಲಿ ಕೆಲವು ಕೃಷಿಕರು ಕೈಚೆಲ್ಲಿದ್ದಾರೆ. ಕೆಲವೊಂದು ತೋಟಗಳಲ್ಲಿ ಸಾವಿರಾರು ಎಳೆ ಅಡಿಕೆಗಳು ನಾಶವಾಗಿವೆ.
Advertisement
ರಾಶಿ ರಾಶಿ ಎಳೆ ಅಡಿಕೆಕೊಳೆ ರೋಗ ಬಾಧಿಸಿದ ಕೂಡಲೇ ಎಳೆ ಅಡಿಕೆಗಳು ಉದುರಲು ಪ್ರಾರಂಭವಾಗುತ್ತವೆ. ಅಡಿಕೆ ಹಣ್ಣಾಗುವ ಹಂತಕ್ಕೆ ಬಂದಿರುವ ಈ ಸಮಯದಲ್ಲಿ ಕೊಳೆ ರೋಗ ಬಾಧಿಸಿರುವುದರಿಂದ ರೈತರಿಗೆ ಬಹಳಷ್ಟು ನಷ್ಟ ಉಂಟಾಗಿದೆ. ಅಡಿಕೆ ಮರದ ಬುಡದಲ್ಲಿ ರಾಶಿರಾಶಿ ಎಳೆ ಅಡಿಕೆಗಳು ಸಿಗುತ್ತಿದ್ದು, ಇವುಗಳನ್ನು ಏನು ಮಾಡಬೇಕು ಎಂಬುದು ಕೃಷಿಕನಿಗೆ ತೋಚದಾಗಿದೆ. ಸರ್ವೆ ನಡೆಸಿ ಮಾಹಿತಿ ಸಂಗ್ರಹ
ಕೊಳೆರೋಗದ ಕುರಿತು ತಾಲೂಕು ಮಟ್ಟದ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಸರ್ವೆ ನಡೆಸಿ ಮಾಹಿತಿ ಸಂಗ್ರಹ ಮಾಡುತ್ತಾರೆ. ಕೃಷಿಕರು ಸಲ್ಲಿಸಿದ ಅರ್ಜಿಯನ್ನು ಇಲಾಖೆಗೆ ಸಲ್ಲಿಸಲಿದ್ದೇವೆ. ಸರಕಾರ ಪರಿಹಾರ ಮೊತ್ತ ಬಿಡುಗಡೆ ಮಾಡಿದಾಗ ಅದನ್ನು ಕೃಷಿಕರಿಗೆ ವಿತರಣೆ ಮಾಡಲಾಗುತ್ತದೆ.
– ಎಚ್.ಆರ್.ನಾಯಕ್
ತೋಟಗಾರಿಕಾ ಉಪನಿರ್ದೇಶಕ, ಮಂಗಳೂರು ಆ್ಯಪ್ ಮೂಲಕ ಸಮೀಕ್ಷೆ
ಕೊಳೆರೋಗ ಬಾಧಿಸಿರುವ ಅಡಿಕೆ ಕೃಷಿಕರು ಗ್ರಾಮ ಕರಣಿಕರಲ್ಲಿ ಅರ್ಜಿ ನೀಡಬಹುದು. ಅರ್ಜಿಗಳನ್ವಯ ಸರ್ವೆ ನಡೆಸಿ ಬಳಿಕ ಕಂದಾಯ ಇಲಾಖೆಗೆ ವರದಿ ಮಾಡಲಾಗುತ್ತಿದೆ. ಗ್ರಾಮಕರಣಿಕರು ಆ್ಯಪ್ ಮುಖಾಂತರ ಸಮೀಕ್ಷೆ ನಡೆಸುತ್ತಿದ್ದಾರೆ.
– ರೇಖಾ, ಹಿರಿಯ ಸಹಾಯಕ ನಿರ್ದೇಶಕಿ, ತೋಟಗಾರಿಕಾ ಇಲಾಖೆ ಪುತ್ತೂರು. ಹೀಗೆ ಅರ್ಜಿ ಸಲ್ಲಿಸಿ
ಕೊಳೆರೋಗ ಬಾಧಿಸಿದ್ದಲ್ಲಿ ಕೃಷಿಕರು ಪರಿಹಾರಕ್ಕಾಗಿ ಸರಕಾರಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಸ್ಥಳೀಯ ಗ್ರಾಮಕರಣಿಕರ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು.
ದಾಖಲೆಗಳು ಕೃಷಿಕನ ಆಧಾರ ಕಾರ್ಡ್, ಆರ್‌ಟಿಸಿ (ಪಹಣಿಪತ್ರ), ಬ್ಯಾಂಕ್ ಖಾತೆಯ ಪ್ರತಿ ಹಾಗೂ ನಾಶವಾದ ಅಡಿಕೆಯ ಫೋಟೋ (ಇದ್ದಲ್ಲಿ ಮಾತ್ರ). ಪ್ರಕೃತಿ ವಿಕೋಪದಿಂದ ಅಡಕೆ ಮರ ನಾಶವಾದವರು ಇದೇ ಯೋಜನೆಯಡಿ ಅರ್ಜಿ ಸಲ್ಲಿಸಬಹುದು. ಶೇ. 33 ಅಡಿಕೆ ಕೊಳೆರೋಗ ಅಥವಾ ಪ್ರಕೃತಿ ವಿಕೋಪದಿಂದ ನಾಶವಾಗಿದ್ದಲ್ಲಿ ಸರಕಾರ ಕೊಡುವ ಪರಿಹಾರವನ್ನು ಫಲಾನುಭವಿಗಳು ಪಡೆದುಕೊಳ್ಳಬಹುದು. ಪರಿಹಾರ ನೀಡದಿದ್ದರೆ ಪ್ರತಿಭಟನೆ
ಈ ವರ್ಷವೂ ಜಿಲ್ಲೆಯಲ್ಲಿ ಕೊಳೆರೋಗದಿಂದ ಶೇ. 90ರಷ್ಟು ಅಡಿಕೆ ನಾಶವಾಗಿದೆ. ಕಳೆದ ವರ್ಷ 56 ಸಾವಿರ ಅರ್ಜಿದಾರರಿಗೆ ಪರಿಹಾರ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಆದರೆ ಪರಿಹಾರ ಸಿಕ್ಕಿಲ್ಲ. ಈ ವರ್ಷವೂ ರೈತರು ಅರ್ಜಿ ನೀಡುತ್ತಿದ್ದಾರೆ. ಶೀಘ್ರವಾಗಿ ಪರಿಹಾರ ನೀಡದಿದ್ದರೆ ಮುಂದಿನ ವಾರದಿಂದಲೇ ಪ್ರತಿಭಟನೆ ಹಮ್ಮಿಕೊಳ್ಳಲಿದ್ದೇವೆ.
– ಶ್ರೀಧರ ಶೆಟ್ಟಿ ಪುಣಚ ಬೈಲುಗುತ್ತು,
ಜಿಲ್ಲಾಧ್ಯಕ್ಷರು, ರೈತ ಸಂಘ ಕೈಗೆ ಬಂದ ತುತ್ತು ಬಾಯಿಗಿಲ್ಲ
ಕಳೆದ ವರ್ಷದಂತೆಯೇ ಈ ಬಾರಿಯೂ ಕೊಳೆರೋಗ ಬಂದು ಸಾವಿರಾರು ಅಡಿಕೆ ನಾಶವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂಬಂತಾಗಿದೆ ಕೃಷಿಕರ ಪರಿಸ್ಥಿತಿ. ಸರಕಾರ ಸೂಕ್ತ ಪರಿಹಾರವನ್ನು ನೀಡಬೇಕು.
– ಸತೀಶ್ ರೈ ಕರ್ನೂರು,
ಜಿಲ್ಲಾ ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತರು