Advertisement

ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ: ವೆಂಕಟೇಶ್‌

12:06 PM Aug 28, 2017 | Team Udayavani |

ಪಿರಿಯಾಪಟ್ಟಣ: ಮುಂಬರುವ ಚುನಾವಣೆಯಲ್ಲಿ ಜೆಡಿಎಸ್‌ನವರು ಬಿ ಫಾರಂ ಹಚ್ಚುವುದರೊಳಗೆ ಪಕ್ಷದಲ್ಲಿ ಏನಾಗುತ್ತದೆ ಎಂಬುದನ್ನು ಗಮನಿಸಿಕೊಳ್ಳಲಿ ನಂತರ ಪಕ್ಷ ಅಧಿಕಾರಕ್ಕೆ ಬರುವ ಕನಸು ಕಾಣಲಿ ಎಂದು ಶಾಸಕ ಕೆ.ವೆಂಕಟೇಶ್‌ ತಿಳಿಸಿದರು. ತಾಲೂಕಿನ ಆವರ್ತಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನ್ಯಾಯಬೆಲೆ ಅಂಗಡಿ ಉದ್ಘಾಟಿಸಿ ಮಾತನಾಡಿದರು. 

Advertisement

ರಾಜ್ಯದಲ್ಲಿ ಜೆಡಿಎಸ್‌ ಮತ್ತು ಬಿಜೆಪಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿವೆ. ಆದರೆ, ಮುಂದೆ ಕಾಂಗ್ರೆಸ್‌ ಸರ್ಕಾರವೇ ಅಧಿಕಾರಕ್ಕೆ ಬರಲಿದೆ. ಈಗಾಗಲೇ ಖಾಸಗಿ ಸಂಸ್ಥೆಗಳು ನಡೆಸಿದ ಸರ್ವೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ. ಹೀಗಾಗಿ ತಾಲೂಕಿನಲ್ಲಿ ತನಗೆ ನೀಡಿದ ಅಧಿಕಾರದಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದ್ದು ನೂರಾರು ಕೋಟಿ ರೂ. ಅನುದಾನ ತಂದು ಕೆಲಸ ನಿರ್ವಹಿಸಿದ್ದೇನೆ. ಮುಂದಿನ ಚುನಾವಣೆಯಲ್ಲಿ ಜನರು ಇದನ್ನು ಅರಿತು ಮತದಾನಕ್ಕೆ ಮುಂದಾಗಬೇಕೆಂದರು.

ಪ್ರತಿ ಗ್ರಾಮದಲ್ಲಿ ನೂತನ ನ್ಯಾಯ ಬೆಲೆ ಅಂಗಡಿ ತೆರೆಯಲು ಅಲ್ಲಿನ ಸಹಕಾರ ಸಂಘಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಇದಾದ ನಂತರ 2ನೇ ಹಂತದ ಆದ್ಯತೆ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೀಡಲಾಗುತ್ತಿದೆ. ಇದರ ಉದ್ದೇಶದ ಸಾರ್ವಜನಿಕರಿಗೆ ಎಲ್ಲಾ ದಿನಗಳಲ್ಲಿಯೂ ಪಡಿತರ ಸಿಗುವಂತಾಗಬೇಕು. ಸರ್ಕಾರಗಳು ಅನೇಕ ನೂತನ ನೀತಿಗಳನ್ನು ತಂದರೂ ನ್ಯೂನತೆಗಳು ಇದ್ದೇ ಇದೆ. ಹೀಗೆ ಸಹಕಾರ ಸಂಘಗಳ ಮೂಲಕ ಜನಸಾಮಾನ್ಯರಿಗೆ ಅನುಕೂಲವಾಗುವ ಆಶಾಭಾವನೆ ಹೊಂದಿದ್ದೇವೆಂದರು.

ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಆವರ್ತಿ ಚಂದ್ರು, ಆವರ್ತಿ ಗ್ರಾಮಕ್ಕೆ ಅಂಬೇಡ್ಕರ್‌ ಭವನ, ನ್ಯಾಯಬೆಲೆ ಅಂಗಡಿ ಮತ್ತು ಗ್ರಾಮದ ಎಲ್ಲಾ ರಸ್ತೆಗಳ ಅಭಿವೃದ್ಧಿಯನ್ನು ಶಾಸಕರು ನೀಡಿದ್ದಾರೆ. ಇದಕ್ಕೆ ಜನರು ಅಭಾರಿಯಾಗಿರಬೇಕು. ಈಗಾಗಲೇ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಅನುಮತಿ ದೊರತಿದ್ದು ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ. ಇಷ್ಟೆಲ್ಲಾ ಸಹಕಾರ ನೀಡಿರುವ ಶಾಸಕರನ್ನು ಚುನಾವಣೆ ವೇಳೆ ಮರೆಯದೆ ಅವರನ್ನು ಬೆಂಬಲಿಸುವ ಕೆಲಸವಾಗಬೇಕು ಎಂದು ತಿಳಿಸಿದರು.

ಹಿರಿಯ ಮುಖಂಡ ಸೋಮಣ್ಣ ಮಾತನಾಡಿದರು. ತಹಶೀಲ್ದಾರ್‌ ಜೆ.ಮಹೇಶ್‌, ಎಪಿಎಂಸಿ ಅಧ್ಯಕ್ಷ ರೇವಣ್ಣ, ಟಿಎಪಿಸಿಎಂಎಸ್‌ ಅಧ್ಯಕ್ಷ ಪಿ.ಎನ್‌.ಚಂದ್ರಶೇಖರ್‌,  ಪಿಕಾರ್ಡ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ ಕೆ.ಹೊಲದಪ್ಪ, ತಾಪಂ ಸದಸ್ಯೆ  ಜಯಂತಿ, ಗ್ರಾಪಂ ಉಪಾಧ್ಯಕ್ಷೆ ಶೋಭಾ, ಇಒ ಬಸವರಾಜು, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಚಂದ್ರಶೇಖರ್‌, ಮುಖಂಡರಾದ ಮಹದೇವಪ್ಪ ಮತ್ತಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next